ನನಗೆ ರಾಂಪುರ ಬಿಟ್ಟರೆ ಕೊಂಡ್ಲಹಳ್ಳಿ ಗ್ರಾಮವೆಂದರೆ ಹೆಚ್ಚಿನ ಪ್ರೀತಿ ವಿಶ್ವಾಸವಿದೆ. ಕೊಂಡ್ಲಹಳ್ಳಿಯಲ್ಲಿ ವಿದ್ಯಾರ್ಥಿ ಸಂಖ್ಯೆ ಜಾಸ್ತಿ ಇದೆ. ಕೊಂಡ್ಲಹಳ್ಳಿಯಲ್ಲಿ ಅತೀ ಹೆಚ್ಚು ಬುದ್ದಿವಂತ ಜನರಿದ್ದಾರೆ. ಇಂತಹ ಗ್ರಾಮಗಳ ಶಾಲೆಗಳಿಗೆ ಹೆಚ್ಚಿನ ಅನುದಾನ ಕೊಟ್ಟರೆ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸಹಕಾರವಾಗುತ್ತದೆ.
ಶಾಲೆಗೆ ಬೇಕಾಗುವ ಕುಡಿಯುವ ನೀರಿನ ಬೋರ್ ವೆಲ್ ಮಾಡಿಸಿ ಕೊಡುತ್ತೇನೆ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ವಿದ್ಯಾರ್ಥಿಗಳು ಕೊಟ್ಟರೆ ಹಾಗೂ ಗುರಿ ಇದ್ದರೆ ಡಾ ಅಬ್ದುಲ್ ಕಲಾಂ ರಂತಹ ವ್ಯಕ್ತಿಗಳು ನೀವಾಗಬಹುದು ಎಂದು ಸಲಹೆ ನೀಡಿದರು.

ನಾನು ಹೋಗಿರುವ ಎಲ್ಲಾ ಕಡೆ ಪ್ರಾಮಾಣಿಕ ಶಾಸಕರಾಗಿ ಸೇವೆ ಸಲ್ಲಿಸಿದ್ದೇನೆ. ತುಮ್ಮುಲು ರಸ್ತೆಗೆ 1.5ಕೋಟಿ, ದೇವರಹಳ್ಳಿ, ಮಲ್ಲಸಂದ್ರ, ರಾವಲ ಕುಂಟೆ ರಸ್ತೆಗೆ 75ಲಕ್ಷ, ಕುರುಬ ಸಮುದಾಯದ ಭವನಕ್ಕೆ 10 ಲಕ್ಷ ಅನುದಾನ ಕೊಡುತ್ತೇನೆ. ಬಿಳಿನೀರು ಚಿಲುಮೆ ಗೆ ರಸ್ತೆ 2.5ಕೋಟಿ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಾದ ರಾಂಪುರ ಪ್ರಾಥಮಿಕ ಶಾಲೆಯಲ್ಲಿ ಮಾನ್ಯ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಶಾಲಾ ಕೊಠಡಿ, ನಾಗಸಮುದ್ರ ಗ್ರಾಮದಲ್ಲಿ ಒಂದು ಶಾಲಾ ಕೊಠಡಿ, ಕೊಂಡ್ಲಹಳ್ಳಿ ಗ್ರಾಮದಲ್ಲಿ ಶಾಲಾ ಕೊಠಡಿ, ಮೊಳಕಾಲ್ಮುರು ಪಟ್ಟಣದ ಸರ್ಕಾರಿ ಉರ್ದು ಶಾಲೆಗೆ ಕೊಠಡಿ, ಕೊಂಡ್ಲಹಳ್ಳಿಯಲ್ಲಿ ಅಂಗನವಾಡಿ ಕಟ್ಟಡ ಹಾಗೂ ಪಶು ಇಲಾಖೆಯ ನೂತನ ಶಾಖೆಯನ್ನು ಉದ್ಘಾಟನೆ ಇವರು ಮಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಈ ಒ ಹೆಚ್ ಹನುಮಂತಪ್ಪ, ವಿನಯ್ ಕುಮಾರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಶು ಸಂಗೋಪನ ಇಲಾಖೆ ಡಾ ರಂಗಪ್ಪ, ಪಿ ಆರ್ ಡಿ ಪಿ ಇಲಾಖೆ ಲಿಂಗರಾಜ್, ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಮಾಲದೇವಿ, ಪವಿತ್ರ ಪ್ರದೀಪ್ ಕೊಂಡ್ಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಕುಬೇರ ಬಾರ್ ಮಾಲೀಕರು ಗುರುಲಿಂಗಪ್ಪ, ಕೊಂಡ್ಲಹಳ್ಳಿ ಮಂಜುನಾಥ್, ನಾಗಸಮುದ್ರ ಗೋವಿಂದಪ್ಪ ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಎಸ್ ಖಾದರ್ ಗೌರವ ಅಧ್ಯಕ್ಷರು, ಪಿ ಡಿ ಒ ಗಳಾದ ಪಾಲಯ್ಯ ಪ್ರದೀಪ್ ನಾಗಸಮುದ್ರ ಗ್ರಾಮ ಪಂಚಾಯತಿ ಅಧ್ಯಕ್ಷರು ಯಾಸೀನಾ ಬಾನು ಶಬ್ಬೀರ್, ಮಾಜಿ ಅಧ್ಯಕ್ಷರು ನಾಗೇಂದ್ರಪ್ಪ ಆನಂದ ಶಿಕ್ಷಕರು ಮುರುಗೇಶ್ ಮಂಜುನಾಥ್, ಮೊಳಕಾಲ್ಮುರು ವೃತ್ತ ನಿರೀಕ್ಷಕರು ನಾಗರಾಜ್, ರಾಂಪುರ ಪಿ ಎಸ್ ಐ ಬಾಹುಬಲಿ ಕೊಂಡ್ಲಹಳ್ಳಿ ತಿಪ್ಪೇಸ್ವಾಮಿ ನಿವೃತ್ತ ಶಿಕ್ಷಕರು ಸಣ್ಣ ಯಲ್ಲಪ್ಪ, ಅಡವಿ ಮಾರಪ್ಪ ಹನುಮಯ್ಯ ನಸೀರ್ ಸಾಬ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಗಳು ಸಾರ್ವಜನಿಕರು ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.