ಮಕ್ಕಳು ಅಪಾಯದಿಂದ ಪಾರು
ಮರಿಯಮ್ಮನಹಳ್ಳಿ : ಬಾರಿ ಮಳೆಯಿಂದ ಪಟ್ಟಣದಲ್ಲಿ ಮನೆ ಕುಸಿತ ಪಟ್ಟಣದಲ್ಲಿ ಗುರುವಾರ ಸಂಜೆ 6 ರಿಂದ 7ರವರೆಗೆ ಬಾರಿ ಮಳೆ ಆಗಿದ್ದರಿಂದ 8 ನೇ ವಾರ್ಡಿನ ನಿವಾಸಿ ದಾಸರ ಗಂಗಮ್ಮ ಗಂಡ ದಿ.ಯಮನೂರ ಇವರ ಮನೆ ಮಳೆಯಿಂದ ರಾತ್ರಿ ಸುಮಾರು 7:30ಕ್ಕೆ ಮನೆ ಕುಸಿದು ಬಿದಿದ್ದು ಹಾಗೂ ಅಲ್ಲೇ ಇದ್ದ ಗಂಗಮ್ಮ ಮತ್ತು 4 ಮಕ್ಕಳು, ಅಪಾಯದಿಂದ ಪಾರಗಿದ್ದಾರೆ.
ಸ್ಥಳಕ್ಕೆ ಭೇಟಿ : ಘಟನ ಸ್ಥಳಕ್ಕೆ ಪಟ್ಟಣ ಪಂಚಾಯತಿ ಸದಸ್ಯೆ ಹುಲಿಗಿಬಾಯಿ ರುದ್ರನಾಯ್ಕ ಮತ್ತು ಗ್ರಾಮಲೆಕ್ಕಾಧಿಕಾರಿ ಅನಿತಾ ರವರು ಭೇಟಿ ನೀಡಿ ಪರಿಶೀಲನೆ ಮಾಡಿ ಅವರಿಗೆ ಸಮಾಧಾನ ಮಾತುಗಳನ್ನು ಹೇಳಿ ಬೇಗನೆ ಸರ್ಕಾರದಿಂದ ಬರುವ ಪರಿಹಾರವನ್ನು ನೀಡುತ್ತೆವೆ ಎಂದು ಹೇಳಿದರು.