LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭೀಕರ ಕಾರು ಅಪಘಾತ : ಓರ್ವ ಸಾವು

ಮರಿಯಮ್ಮನಹಳ್ಳಿ : ಕಾರು ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಇ.ಎಂ.ಆರ್.ಐ.ಗ್ರೀನ್ ಹೆಲ್ತ್ ಸರ್ವೀಸ್ ಸಂಸ್ಥೆಯ 108 ಅಂಬುಲೆನ್ಸ್ ಸಿಬ್ಬಂದಿಗಳ ಹರಸಾಹಸದಿಂದ ಕಾರಿನಲ್ಲಿ ಇದ್ದವರನ್ನು ಹೊರ ತಗೆಯಲಾಗಿದೆ. ಈ ಘಟನೆ ಹೊಸಪೇಟೆ ನಗರದ ಭಟ್ರಳ್ಳಿ ಆಂಜನೇಯ ದೇವಸ್ಥಾನ ಹತ್ತಿರ ತಡರಾತ್ರಿ ಜರುಗಿದೆ.



ಘಟನೆ ವಿವರ:  ಹೊಸಪೇಟೆಯ ಎಂಪಿ ಪ್ರಕಾಶ ನಗರದ ನಿವಾಸಿ ಮಂಜುನಾಥ( 36) ಸ್ಥಳದಲ್ಲೇ ಮೃತಪಟ್ಟಿದ್ದು,  ಚಾಲಕ ರವಿ ಗಾಯಗೊಂಡು ಪ್ರಾಣ ಅಪಾಯದಿಂದ  ಪಾರಾಗಿದ್ದಾನೆ. ಇಬ್ಬರು ಸ್ನೇಹಿತರಾಗಿದ್ದು ರೈಲ್ವೆ ಸ್ಟೇಷನ್ ಬಳಿ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ಮನೆಗೆ ಹೋಗುವಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ರಾತ್ರಿ 2 ಗಂಟೆ ಸುಮಾರಿಗೆ ಅಪಘಾತ ಜರುಗಿದ್ದು ಅಲ್ಲಿನ ವ್ಯಕ್ತಿ ಒಬ್ಬರು 108 ಅಂಬುಲೆನ್ಸ್ ಗೆ ಕರೆಮಾಡಿದರು. ತಕ್ಷಣವೇ  ಸ್ಥಳಕ್ಕೆ 108 ಆಂಬುಲೆನ್ಸ್ ವಾಹನ ಬಂದು ಅದರಲ್ಲಿ ಇದ್ದ ಸಿಬ್ಬಂದಿಗಳು  ಕಾರಲ್ಲಿ ಸಿಲುಕಿದ್ದ ಮಂಜುನಾಥನನ್ನು ಕಿತ್ತು ಹೊರತೆಗೆದು, ಚಾಲಕ ರವಿಯನ್ನು ಆಂಬುಲೆನ್ಸ್ ನಲ್ಲಿ 100 ಹಾಸಿಗೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.‌ ಕಾರಿನಲ್ಲಿಯೇ ಸಿಲುಕಿದ್ದ ಮಂಜುನಾಥನ ದೇಹವನ್ನು 108 ಸಿಬ್ಬಂದಿ ಇಎಂಟಿ ಬಸವರಾಜ, ಚಾಲಕ ವಿನೋದ ನಾಯ್ಕ ಇಬ್ಬರೇ ಅರ್ಧಗಂಟೆಯ ಸಮಯ ಒಳಗೆ  ಹಾರುಕೋಲಿನಿಂದ ತೆಗೆಯುವಲ್ಲಿ ಹರಸಾಹಸ ಪಟ್ಟಿದ್ದು, ಮೃತನ ಬಳಿಯಿದ್ದ ಬಂಗಾರದ ಚೈನ್ ಮತ್ತು ಉಂಗುರವನ್ನು ಸಂಬಂಧಿಕರಿಗೆ ತಲುಪಿಸಿ 108 ಅಂಬುಲೆನ್ಸ್ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ. ಇವರಿಗೆ 108 ಅಂಬುಲೆನ್ಸ್ ಪ್ರಾದೇಶಿಕ ಅಧಿಕಾರಿ ಸದಾನಂದ, ಜಿಲ್ಲಾಧಿಕಾರಿ ವಿನಯ್ ಕುಮಾರ್, ಜಿಲ್ಲಾ ವ್ಯವಸ್ಥಾಪಕ ಸಂತೋಷ ರವರು ಅಭಿನಂದನೆಗಳು ತಿಳಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST