ಬೆಂಗಳೂರು : ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಹೊಲಿ ಸ್ಪಿರಿಟ್ ಸ್ಕೂಲ್ ಮತ್ತು ಸೆಂಟ್ ಆರ್ಣೋಲ್ಡ್ ಪಿಯು ಕಾಲೇಜು ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಿಗೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕ್ರೀಡಾಕೂಟಕ್ಕೆ ಸಿಸ್ಟರ್ ಸರಿತಾ, ಹೊಲಿ ಸ್ಪಿರಿಟ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸಿಸ್ಟರ್ ತ್ರೀಸಾ ರೆಬೆಲ್ಲೋ ಹಾಗೂ ಹೊಲಿ ಸ್ಪಿರಿಟ್ ಸ್ಕೂಲ್ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲರಾದ ಲಿಮ್ನಾ ಜಸ್ಟಿನ್ ಚಾಲನೆ ನೀಡಿದರು.
ನಟ ಮತ್ತು ನಿರ್ಮಾಪಕ ಡಾ. ಗಂಡಸಿ ಸದಾನಂದ ಸ್ವಾಮಿ ಮತ್ತಿತರರು ವಿಜೇತರಿಗೆ ಬಹುಮಾನ ವಿತರಿಸಿದರು.
ಕ್ರೀಡಾಸ್ಫೂರ್ತಿ, ನಾಯಕತ್ವ, ವಿನಯಶೀಲತೆ ಹಾಗೂ ಹಠ ಯಶಸ್ಸಿನ ಸಂಕೇತವಾದ ಆರ್ಣೋಲ್ಡ್ ಜ್ಯಾನೇಸನ್ ಅವರ ಸ್ಮರಣಾರ್ಥವಾಗಿ ಕ್ರೀಡಾ ಕೂಟ ಆಯೋಜಿಸಲಾಗಿತ್ತು. ವಾಲಿಬಾಲ್ ಪಂದ್ಯಗಳ ಜೊತೆಯಲ್ಲಿ, ಸೊಲೋ ಹಾಗೂ ಗುಂಪು ನೃತ್ಯಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಹ ಏರ್ಪಡಿಸಲಾಗಿತ್ತು.