LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರೇಬೆಣಕಲ್ ನೆಲೆ: ಮಾನವನ ವಿಕಸನದ ಮಹತ್ತರ ಘಟ್ಟ: ಸುನಲ ನಾಯಕ

ಗಂಗಾವತಿ: ಹಿರೇಬೆಣಕಲ್ ನೆಲೆಯ ಮಹತ್ವ ಮನಸೂರಗೊಳ್ಳುವಂಥದ್ದು ಮತ್ತು ಮಾನವನ ವಿಕಸನದ ಮಹತ್ತರ ಘಟ್ಟವನ್ನು ಹೊಂದಿರುವಂಥದ್ದು. ಇಂತಹ ನೆಲೆ ನಮ್ಮ ನಾಡಿನಲ್ಲಿ ಇರುವುದು ಹೆಮ್ಮೆಯಾಗಿದೆ ಎಂದು ದಾವಣಗೆರೆ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಸುನಲ ನಾಯಕ ಅವರು ಹೇಳಿದರು.



ಹಿರೇಬೆಣಕಲ್ ನೆಲೆ ವೀಕ್ಷಣೆ ಮಾಡಿದ ಅವರು, ಇಂತಹ ನೆಲೆಗಳ ಸುರಕ್ಷತೆ ಮತ್ತು ರಕ್ಷಣೆ ಆಗಬೇಕು. ಗಿಡಮೂಲಿಕೆಗಳು ಮತ್ತು ಗುಡ್ಡಗಳ ರಚನೆ ತುಂಬಾ ಸೊಗಸಾಗಿದೆ. ವರ್ಣ ಚಿತ್ರಗಳ ಹಿಂದಿನ ಮಾನವರ ನಾಗರಿಕತೆ, ಬದುಕಿನ ಕುರುಹುಗಳು ನಿಜಕ್ಕೂ ಶಿಲಾಯುಗದವರ ಶ್ರಮಕ್ಕೆ ತಲೆಬಾಗಲೇಬೇಕು,  ಶಿಲಾಯುಗದ ಮಾನವರು ಕಟ್ಟಿದ ಶಿಲಾ ಸಮಾಧಿಗಳನ್ನು  ನೋಡಿದಾಗ ತಮ್ಮ ಬದುಕನ್ನೇ ಇವುಗಳ ರಚನೆಗೆ ಮುಡುಪಾಗಿಟ್ಟರುವುದು ಇವರ ಸಾಧನೆಯಾಗಿದೆ ಎಂದರು.



ಹಿರೇಬೆಣಕಲ್ ನೆಲೆಯ ಬಗ್ಗೆ ಕಾಳಜಿ ವಹಿಸುತ್ತಿರುವ  ಗಂಗಾವತಿ ಮಂಜುನಾಥ  ಗುಡ್ಲಾನೂರ ಮಾತನಾಡಿ, "ಹಿರೇಬೆಣಕಲ್ ನೆಲೆ ನಾಗರಿಕ ಮಾನವನ ಬದುಕಿನಲ್ಲಿ ತುಂಬಾ ಮಹತ್ವದ್ದಾಗಿದೆ. ಇಲ್ಲಿನ ಗುಹೆಗಳಲ್ಲಿ ಕಂಡುಬರುವ ಚಿತ್ರಗಳನ್ನು ಅವಲೋಕಿಸಿದಾಗ, ಆದಿ ಮಾನವರು ಕಬ್ಬಿಣವನ್ನು ಶೋಧನೆ ಮಾಡಿದ್ದಾರೆ. ಒಂದು ಕಿಲೋಗ್ರಾಂ ಅದಿರಿನಲ್ಲಿ ೩೫೦ ಗ್ರಾಂ ನಷ್ಟು ಕಬ್ಬಿಣವನ್ನು ತೆಗೆಯುವ ಪರಿಣಿತಿಯನ್ನು ಹೊಂದಿದ್ದರು." ಕಬ್ಬಿಣದ ಪರಿಕರಗಳನ್ನು ತಯಾರಿಸುವ ಮೂಲಕ  ಹೆಚ್ಚು ಹೆಚ್ಚು ಕಾಡುಗಳನ್ನು ಸ್ವಚ್ಛಗೊಳಿಸಿ, ತಮಗೆ ಬೇಕಾದ ಆಹಾರ ಬೆಳೆದು, ಗೆಡ್ಡೆ ಗೆಣಸು ಬೆಳೆಯಲು ತೊಡಗಿದರು. ಇದು ಕೃಷಿ ಬದುಕಿಗೆ ನಾಂದಿ ಹಾಡಿತು. ಗುಹಾ ಚಿತ್ರಗಳಲ್ಲಿ ಎತ್ತು-ಆಕಳು ಕಂಡುಬರುವುದು ಕೃಷಿಯಲ್ಲಿ ದನಗಳ ಮತ್ತು ಎತ್ತುಗಳ ಬಳಕೆಯನ್ನು ತೋರಿಸುತ್ತದೆ.  ಇಲ್ಲಿನ ಸಮಾಧಿಗಳನ್ನ   ಕಟ್ಟುವುದರಿಂದ ಸತ್ತ ಅವರ ಪೂರ್ವಜರು ಮತ್ತೆ ಹುಟ್ಟುತ್ತಾರೆ ಎನ್ನುವ ಪರಿಕಲ್ಪನೆಯನ್ನು ಈ ಶಿಲಾಯುಗದ ಮಾನವರು ನಂಬಿದ್ದರು. ಸಮಾಧಿಗಳ ಪರಿಕಲ್ಪನೆಯನ್ನು ಕೊಟ್ಟವರು ಈ ಶಿಲಾಯುಗದ ಮಾನವರೇ ಎಂದರು

 

ಈ ವೇಳೆ  ಜಂಟಿ ಆಯುಕ್ತೆ  ಸುನಲ್ ನಾಯಕ್ ರನ್ನು  ಸನ್ಮಾನಿಸಿ ಗೌರವಿಸಲಾಯಿತು.



ಈ ವೇಳೆ ಹೊಸಪೇಟೆಯ ಸಹಾಯಕ ಆಯುಕ್ತರಾದ ಗರ್ಜಿಲಿಂಗಪ್ಪ, ವಾಣಿಜ್ಯ ತೆರಿಗೆಗಳ ಉಪ ಆಯುಕ್ತ ಅನಂತ್ ಕುಲಕರ್ಣಿ ಮತ್ತು ವಾಣಿಜ್ಯ ತೆರಿಗೆಗಳ ಪರಿವೀಕ್ಷಕ  ಮೊಹಮದ್ ಪಾಷಾ  ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST