ಅವರು ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಿಂದೂ ಸಮಾವೇಶದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಹಿಂದುತ್ವದ ಏಳಿಗಾಗಿ ಹಿಂದೂಗಳೆಲ್ಲ ಐಕ್ಯತೆಯಿಂದ ಮುನ್ನಡಿಯ ಬೇಕು. ನಾವು ಪರಧರ್ಮ ಸಹಿಷ್ಣರು, ಆದರೆ ಅನ್ಯ ಧರ್ಮದ ದಾಳಿ ಸಹಿಸುವರಲ್ಲ. ಹಾಗೂ ಮೊಬೈಲ್, ದುಶ್ಚಟಗಳ ದಾಸ್ಯದಿಂದ ಯುವ ಪೀಳಿಗೆ ಹೊರ ಬಂದಾಗ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.

ನಂತರ ಹುಬ್ಬಳ್ಳಿಯ ವಿನಾಯಕ ತಳಗೇರಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿ, ಹಿಂದೂಗಳಲ್ಲಿ ಐಕ್ಯತೆ ಮೂಡಿಸಲು ಹಿಂದೂ ಮಹಾ ಸಮಾವೇಶವನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಹಿಂದೂ ಜಾಗೃತರಾಗಿ ಧರ್ಮ ರಕ್ಷಕರಾಗಿ, ಹಿಂದೂ ಧರ್ಮವನ್ನು ಯಾವ ಶಕ್ತಿಯಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಹಿಂದೂ ಅಜೆಂಡಾ ಪ್ರತಿಯೊಬ್ಬರಲ್ಲಿ ಅನುರಣಿಸಿದಾಗ ಇನ್ನಷ್ಟು ಬಲಶಾಲಿಯಾಗಿ ಹಿಂದೂ ಧರ್ಮ ತನ್ನ ಪ್ರಖರತೆ ವಿಶ್ವವ್ಯಾಪಿ ಹಬ್ಬಿಸುತ್ತದೆ. ಹಿಂದೂ ಯುವಕರು ಆಸೆ, ಆಮಿಷಗಳು, ಪ್ರಚೋದನೆಗಳಿಗೆ ಒಳಗಾಗದೆ ಧರ್ಮದ ಪರಿಪಾಲನೆ ಮಾಡಬೇಕು. ಲವ್ ಜಿಹಾದ್ ನಿಂದ ಹಿಂದೂ ಯುವತಿಯರು ದೂರವಿರುವಂತೆ ತಿಳಿಸಿದರು. ಹಿಂದೂ ಧರ್ಮದ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಗಳೇ ವಿಶ್ವಗುರುವನ್ನಾಗಿ ಮಾಡಿದೆ ಎಂದರು.
ಪಟ್ಟಣದ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾವೇಶದ ಅಧ್ಯಕ್ಷ ಡಾ. ಜಿ. ಎಂ. ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಬದರಿನಾಥ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ಶೆಟ್ಟಿ, ಚಿದ್ರಿ ಸತೀಶ ನಿರ್ವಹಿಸಿದರು. ನಂತರ ಭರತ ನಾಟ್ಯ, ದೇಶ ಭಕ್ತಿ ಗೇತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.