LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೈರ್ಕೋಟ್ ಹಿರಿಯ ವಕೀಲರಾದ ಕೆ.ವಿ.ನರಸಿಂಹನ್ ರವರಿಗೆ ಅಭಿನಂದನಾ ಸಮಾರಂಭ.

ಬೆಂಗಳೂರು: ಜ್ಞಾನಜ್ಯೋತಿ ಸಭಾಂಗಣದಲ್ಲಿ 50ವರ್ಷಗಳ ಕಾಲ ವಕೀಲ ವೃತ್ತಿಯಲ್ಲಿ ಸೇವೆ ಮಾಡಿದ ಹೈರ್ಕೋಟ್ ಹಿರಿಯ ವಕೀಲರಾದ ಕೆ.ವಿ.ನರಸಿಂಹನ್ ರವರಿಗೆ ಅಭಿನಂದನಾ ಸಮಾರಂಭ.

 

ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಅರವಿಂದ್ ಕುಮಾರ್ ರವರು, ಭಾರತದ ಅಟಾರ್ನಿ ಜನರಲ್ ಆರ್. ವೆಂಕಟರಮಣಿರವರು,  ಹಿರಿಯ ವಕೀಲರಾದ ಕೆ.ವಿ.ನರಸಿಂಹನ್ ರವರು, ಶ್ರೀಮತಿ ನಂದಿನಿ, ಖ್ಯಾತ ವೇದ ವಿದ್ವಾಂಸರಾದ ದುಷ್ಯಂತ ಶ್ರೀಧರ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ನ್ಯಾಯಾಧೀಶರಾದ ಅರವಿಂದ್ ಕುಮಾರ್ ರವರು ಇಂಗ್ಲೀಷ್ ನಲ್ಲಿ ಮಾತನಾಡಿದರೆ ಬಾಯಿಂದ ಮಾತನಾಡುತ್ತೇವೆ, ಕನ್ನಡ ಭಾಷೆ ಹೃದಯದಿಂದ ಮಾತನಾಡುತ್ತೇವೆ . ನ್ಯಾಯಾಧೀಶರು ನಿರಂತರವಾಗಿ ಕೇಸ್ ಗಳ ಕುರಿತು ಓದುತ್ತಿರುತ್ತಾರೆ ಸಮಯವಿರುವುದಿಲ್ಲ ರಾತ್ರಿ ಮಲಗುವುದು ತಡರಾತ್ರಿ 2ಗಂಟೆಯಾಗುತ್ತದೆ. ಎಂತಹ ಪರಿಸ್ಥಿತಿಯಲ್ಲಿಯೊ ಒತ್ತಡ ತೆಗೆದುಕೊಳ್ಳದೇ ನರಸಿಂಹನ್ ನಗುಮೊಗದಿಂದ ಇರುತ್ತಾರೆ. ಕೋರ್ಟ್ ನಲ್ಲಿ ಉತ್ತಮವಾಗಿ ವಾದ ಮಂಡನೆ ಮಾಡುತ್ತಾರೆ ಸರಳವಾಗಿ ವಿವರಣೆ ಅರ್ಥವಾಗಿ ಹೇಳುತ್ತಾರೆ. ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಾಧೀಶರಿಗೆ ಮನದಟ್ಟು ಮಾಡುವ ಕೌಶಲ್ಯ ನರಸಿಂಹನ್ ಅವರಿಗಿತ್ತು. 50ವರ್ಷ ಮೇಲ್ಪಟ್ಟ 76ವಕೀಲರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಕಿರಿಯ ವಕೀಲರಿಗೆ ಸ್ಪೂರ್ತಿಯಾಗಲಿ ಎಂದು ಹೇಳಿದರು.

 

ಅಭಿನಂದನೆ ಸ್ವೀಕರಿಸಿ ಕೆ.ವಿ.ನರಸಿಂಹನ್ ರವರು ಮಾತನಾಡಿ ಜೀವನದಲ್ಲಿ 2ಪ್ಲಸ್ 2 ಆಗಬಹುದು ಹಲವಾರು ಸಂದರ್ಭದಲ್ಲಿ 2ಪ್ಲಸ್ 2 ಕೊಡಿದರೆ 5 ಆಗುವ ಸಾಧ್ಯತೆ ಇದೆ.   ಕಾನೂನು ಬೆಂಡು ಮಾಡಿ, ಜನರಿಗೆ ನ್ಯಾಯ ಕೊಡಿಸಬೇಕು ಎಂಬುದು ನನ್ನ ಉದ್ದೇಶ.  ಧರ್ಮ ಆಧಾರ ಮೇಲೆ ಕಾನೂನು ನಡೆಯುತ್ತದೆ, ಅಧರ್ಮ ದಿಂದ ನಡೆಯಬಾರದು ಎಂಬುದು ನನ್ನ ಆಶಯ. ಸತ್ಯ ಮತ್ತು ಅಸತ್ಯ ಕುರಿತು 5ನಿಮಿಷಗಳಲ್ಲಿ ಕೇಸ್ ಗಳ ಗೊತ್ತಗುತ್ತದೆ ಅದರೆ ತತಕ್ಷಣ ತೀರ್ಮಾನ ಮಾಡುವುದಿಲ್ಲ, ಸಂಪೂರ್ಣ ವಿಚಾರಣೆ ಮಾಡಿ ತೀರ್ಪು ಕೊಡುತ್ತಾರೆ. ಜನರಿಗೆ ಶ್ರದ್ದೆ ಭಕ್ತಿಯಿಂದ ನಾವು ನ್ಯಾಯ ಕೊಡಿಸಬೇಕು. ನ್ಯಾಯಾಲಯಗಳಲ್ಲಿ ಹಾಸ್ಯಮಯ ಪ್ರಸಂಗಗಳು ನಡೆಯುತ್ತಿರುತ್ತದೆ. ಸಾಕ್ಷ್ಮಿಗಳಿಗೆ ನಾವು ಎಷ್ಟೆ ಕೇಳಿಕೊಟ್ಟರು, ನ್ಯಾಯಾಲಯ ವಿಚಾರಣೆ ಸಂದರ್ಭದಲ್ಲಿ ಮರೆತು ಹೋಗುತ್ತಾರೆ.



ಅನ್ಯಾಯ ಅದ ವ್ಯಕ್ತಿಗಳಿಗೆ ನ್ಯಾಯ ಕೊಡಿಸಿದಾಗ ಆಗುವ ಸಂತೋಷವೇ ಬೇರೆ. ವಕೀಲರಿಗೆ ಎಲ್ಲ ಕ್ಷೇತ್ರಗಳಕುರಿತು ಮಾಹಿತಿ ಇರಬೇಕು.ಕಿರಿಯ ವಕೀಲರು ಕಷ್ಟಪಟ್ಚು ಕೆಲಸ ಮಾಡಬೇಕು. ನ್ಯಾಯದಾನ ಬಹಳ ಮುಖ್ಯ ಅದಕ್ಕೆ ಹೆಚ್ಚಿನ ಮಾನ್ಯತೇ ಇದೆ ಎಂದು ಹೇಳಿದರು.

 

ಅಟಾರ್ನಿ ಜನರಲ್ ವೆಂಕಟರಮಣಿರವರು ಮಾತನಾಡಿ ನರಸಿಂಹನ್ ರವರು ವಕೀಲರಾಗಿ  ಉತ್ತಮ ಸಾಧನೆ ಮಾಡಿ, ಜನರಿಗೆ ನ್ಯಾಯ ಕೊಡಿಸಿರುವ ಕಾರಣದಿಂದ ಸಾವಿರಾರು ಜನರು ಅಭಿನಂದನಾ ಸಮಾರಂಭ ಕಾರ್ಯಕ್ರಮ ಆಗಮಿಸಿದ್ದಾರೆ. ನರಸಿಂಹನ್ ರವರ ವಕೀಲವೃತ್ತಿಯಲ್ಲಿ 50ವರ್ಷಗಳ ನಿರಂತರ ಸೇವೆ ಮಾಡಿ ನ್ಯಾಯದ ಪರ ಹೋರಾಟ ಮಾಡಿದ್ದಾರೆ. ಎಲ್ಲರು ಕಾನೂನಿನ ಪರ ಸತ್ಯ ನ್ಯಾಯದ ಪರ ಇರಬೇಕು. ಮಾನವೀಯ ಮೌಲ್ಯಗಳು ಮರೆಯಾಗುತ್ತಿದೆ. ನೈತಿಕ ಮೌಲ್ಯಗಳ ಇಟ್ಟುಕೊಂಡು ಜೀವನ ಸಾಗಿಸಬೇಕು. ದುಷ್ಯಂತ ಶ್ರೀಧರ್ ರವರು ಮಾತನಾಡಿ ದೇಶದ ಶ್ರೀಮಂತ ಸಂಸ್ಕೃತಿಯಲ್ಲಿ ನಾವು ಬದುಕುತ್ತಿದ್ದೇವೆ. ನರಸಿಂಹನ್ ರವರು 50ವರ್ಷಗಳ ಕಾಲ ವಕೀಲರಾಗಿ  ಕಾನೂನು ಮೂಲಕ ಜನರಿಗೆ ನ್ಯಾಯ ಕೊಡಿಸುವಲ್ಲಿ  ಶ್ರಮವಹಿಸಿದ್ದಾರೆ.  ರಾಮಾಯಣ, ಮಹಾಭಾರತದಲ್ಲಿ ಕಾಲದಲ್ಲಿಯೂ ಕಾನೂನು ಇಲ್ಲದಿದ್ದರು ನ್ಯಾಯಪಾಲನೆ ಮಾಡುತ್ತಿದ್ದರು. ನ್ಯಾಯಾಂಗ ವ್ಯವಸ್ಥೆ  ಪ್ರಜಾಪ್ರಭುತ್ವದ ಅಂಗವಾಗಿದೆ ಎಂದು ಹೇಳಿದರು..

 

ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರುಗಳು ವಕೀಲರುಗಳು , ಸಾಹಿತಿಗಳು ರಾಜಕೀಯ ದುರೀಣರು ಆಯೋಜಕ ವಕೀಲರುಗಳಾದ ಕೆ.ಎನ್.ನಿತೇಶ್ ,ಕೆಂಪೇಗೌಡರವರು, ವಿ.ಶ್ರೀನಿವಾಸ್ ರವರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST