ಬಳ್ಳಾರಿಯ ರಾಘವ ಪ್ರಶಸ್ತಿಗೆ ಆಂಧ್ರದ ಗುಮ್ಮಡಿ ಗೋಪಾಲಕೃಷ್ಣ, ರಾಜ್ಯದ ಡಿಂಗ್ರಿ ನಾಗರಾಜ್ ಆಯ್ಕೆ
ಬಳ್ಳಾರಿ: ರಂಗಭೂಮಿ ಕಲಾವಿದ ಬಳ್ಳಾರಿ ರಾಘವ ಹೆಸರಿನಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ನೀಡುವ ರಾಜ್ಯ ಮಟ್ಟದ ಬಳ್ಳಾರಿ ರಾಘವ ಪ್ರಶಸ್ತಿಗೆ ಕರ್ನಾಟಕ ಹಾಗೂ ಆಂಧ್ರಪ್ರದೇಶದ ತಲಾ ಒಬ್ಬೊಬ್ಬರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಕನ್ನಡದ ನಟ ಡಿಂಗ್ರಿ ನಾಗರಾಜ್ ಮತ್ತು ಆಂಧ್ರದ ಗುಮ್ಮಡಿ ಗೋಪಾಲಕೃಷ್ಣ ಅವರಿಗೆ ನೀಡಲಾಗುತ್ತಿದೆ.
ಈ ಪ್ರಶಸ್ತಿಯು ತಲಾ 21,100 ನಗದು ಮತ್ತು ರಾಘವರ ಬೆಳ್ಳಿ ಚಿತ್ರವಿರುವ ಫಲಕ ಹೊಂದಿರುತ್ತದೆ. ಬಳ್ಳಾರಿ ರಾಘವರ ಜಯಂತಿ ಪ್ರಯುಕ್ತ ಆಗಸ್ಟ್ 2 ಮತ್ತು 3ರಂದು ಬಳ್ಳಾರಿಯಲ್ಲಿ ನಡೆಯುವ ಸಮಾರಂಭ ಹಾಗೂ ನಾಟಕೋತ್ಸವದಲ್ಲಿ ಈ ಪ್ರಶಸ್ತಿಗಳನ್ನ ಪ್ರದಾನ ಮಾಡಲಾಗುವುದು ಎಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.