ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ಜಿಎಸ್‌ಟಿ ಇಳಿಕೆಗೆ ಉಡುಗೊರೆ ಮೋದಿ ಸರ್ಕಾರಕ್ಕೆ ಧನ್ಯವಾದಗಳು, ಘೋಷವಾಕ್ಯದ ಅಡಿಯಲ್ಲಿ ಬಿಜೆಪಿ ಮಂಡಲ ಪದಾಧಿಕಾರಿಗಳು ಮತ್ತು ಜೆಡಿಎಸ್ ಪದಾಧಿಕಾರಿಗಳು ಪಟಾಕಿ ಸಿಡಿಸುವ ಮೂಲಕ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಮಾತನಾಡಿದ ಅವರು ಜಿಎಸ್‌ಟಿ ಸುಧಾರಣೆಯಿಂದ ಸಣ್ಣ ವ್ಯಾಪಾರಿಗಳಿಗೂ ಹೆಚ್ಚು ಪ್ರಯೋಜನವಾಗುತ್ತದೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕಲ್ಪಿಸಿದ್ದಾರೆ. ಸಾಮಾನ್ಯ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ದಿನಸಿ ವಸ್ತುಗಳನ್ನು ಕಡಿಮೆ ಮಾಡಿದ್ದಾರೆ. ರೈತರ ಉಪಕರಣಗಳು ಸಹ ತೆರಿಗೆ ಕಡಿತಗೊಳಿಸಿದ್ದಾರೆ.
ನಿಕಟ ಪೂರ್ವ ಅಧ್ಯಕ್ಷ ಈ.ರಾಮರೆಡ್ಡಿ ಮಾತನಾಡಿ ಭಾರತವನ್ನು ಈ ಭೂಮಿಯ ಸರ್ವ ಶ್ರೇಷ್ಠ ದೇಶವನ್ನಾಗಿ ಮಾಡಲು ಸುಷ್ಠಿಕರ್ತನಾದ ದೇವರು ಮೋದಿಯನ್ನು ಅವತಾರ ಪುರುಷನನ್ನಾಗಿ ಮಾಡಿ ಕಳುಹಿಸಿದ್ದಾನೆ ಭಾರತದ ಅಭಿವೃದ್ಧಿಗೆ ಅವರಿಗಿರುವ ಬದ್ಧತೆಗೆ ಸರಿಸಾಟಿ ಇಲ್ಲ ಎಂದರು. ಮೋದಿಯವರಿಗೆ ಆರೋಗ್ಯ, ಆಯಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಸೋಮವಾರ 22ನೇ ತಾರೀಖು ಒಳ್ಳೆಯ ದಿನವಾಗಿದೆ. ನಮ್ಮ ದೇಶದಲ್ಲಿರುವಂತಹ ಪ್ರತಿಯೊಬ್ಬ ಪ್ರಜೆಗೂ ಸಂತೋಷದ ಸುದ್ದಿ ಜಿಎಸ್‌ಟಿ ದರ ಕಡಿತಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ದೇಶವನ್ನು ಮುನ್ನಡೆಸುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರು. ಸ್ವತಂತ್ರö್ಯ ಭಾರತದ ಅತ್ಯಂತ ಶಕ್ತಿಯುತ ಮೋದಿಜಿಯವರು ಎಂದರು.
ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯ ಕಾರ್ಯಕರಣಿ ಸದಸ್ಯ ಪಾಪೇಶ್ ನಾಯಕ ಮಾತನಾಡಿ ಬಡವರು, ಮಧ್ಯಮ ವರ್ಗ, ಯುವಕರು, ರೈತರು, ಮಹಿಳೆಯರು, ವ್ಯಾಪಾರಿಗಳಿಗೆ ಮತ್ತು ಗುಡಾಂಗಡಿಗಳಿಗೂ ಜಿಎಸ್‌ಟಿ ದರ ಕಡಿಮೆ ಮಾಡಿರುವುದರಿಂದ ಅನುಕೂಲವಾಗಿದೆ ಎಂದ ಸತಸ ವ್ಯಕ್ತ ಪಡಿಸಿದರು. ಹೊಸ ಜಿಎಸ್‌ಟಿ ದರ ಜಾರಿ ರಾಜ್ಯದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ದಸರ ಕೊಡಿಗೆ ನೀಡಿದ್ದಾರೆ. ಔಷಧಿಗಳು, ಆಟೋ ಮೊಬೈಲ್ಸ್, ದಿನಸಿ ಪದಾರ್ಥಗಳು, ರೈತರ ಉಪಕರಣಗಳು ಸೇರಿದಂತೆ 375 ವಸ್ತುಗಳ ಜಿಎಸ್‌ಟಿ ದರ ಕಡಿತಗೊಂಡಿದೆ. ಸುಲಭವಾದ ವಸ್ತುಗಳು ಕಡಿಮೆ ಬೆಲೆಗೆ ಖರಿದಿಸಲು ಅನುಕೂಲವಾಗುತ್ತದೆ. ದೇಶದ ಇತಿಹಾಸದಲ್ಲಿ ಜಿಎಸ್‌ಟಿಯನ್ನು ಏರಿಸಿದ್ದನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಇಳಿಸಿದ ಉದಾಹರಣೆ ಇಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದರಿಂದಾಗಿ ಎಲ್ಲಾ ವರ್ಗಗಳ ಅಗತ್ಯ ವಸ್ತುಗಳು ಕಡಿಮೆ ದರದಲ್ಲಿ ದೊರೆಯುವಂತೆ ಮಾಡಿರುವುದು ಶ್ಲಾಘನೀಯ. ಹಬ್ಬದ ಹರಿದಿನಗಳಲ್ಲಿ ಹೊಸ ಜಿಎಸ್‌ಟಿ ದರ ಜಾರಿಯಾಗುತ್ತಿರುವುದು ಸಂತೋಷಕರ ವಿಚಾರ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಾಗಿ ಅಭಿನಂದನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಎಂ.ಮಲ್ಲೇಶ್, ನಿಕಟಪೂರ್ವ ಅಧ್ಯಕ್ಷರಾದ ಈ.ರಾಮರೆಡ್ಡಿ, ಎಂ.ವೈ.ಟಿ.ಸ್ವಾಮಿ, ರಾಜ್ಯ ಎಸ್.ಟಿ ಮೋರ್ಚಾ ಕಾರ್ಯಕಾರಣಿ ಸದಸ್ಯರಾದ ಪಾಪೇಶ್ ನಾಯಕ, ಜೆಡಿಎಸ್ ಮೊಳಕಾಲ್ಮೂರು ತಾಲೂಕು ಅಧ್ಯಕ್ಷರಾದ ಚೌಳಕೆರೆ ಡಿ.ಬಿ.ಕರಿಬಸಪ್ಪ, ತಾಲೂಕು ಜೆಡಿಎಸ್ ಓಬಿಸಿ ಅಧ್ಯಕ್ಷರಾದ ಅಬ್ಬೇನಹಳ್ಳಿ ಚನ್ನಬಸಪ್ಪ, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ನಾಯಕನಹಟ್ಟಿ ಪಟ್ಟಣ ಪಂಚಾಯತಿ ಸದಸ್ಯರಾದ ಮಹಾಂತಣ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿಗೋವಿAದಪ್ಪ, ನಗರ ಘಟಕ ಅಧ್ಯಕ್ಷರಾದ ನಾಗರಾಜ್ ನಗರ ಘಟಕ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ರಾಜು, ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಾಪಮ್ಮಆನಂದಪ್ಪ, ಅಬ್ಬೇನಹಳ್ಳಿ ಪ್ರಕಾಶ್, ತೊರೆಕೊಲಮ್ಮನಹಳ್ಳಿ ಮಂಜಣ್ಣ ನಿಕಟಪೋರ್ವ ಯುವ ಮೋರ್ಚಾ ಅಧ್ಯಕ್ಷರಾದ ವಿಷ್ಣು, ಕೆ.ಆರ್.ಬೋರಯ್ಯ ರೇಖಲಗೆರೆತಿಪ್ಪೇಸ್ವಾಮಿ, ಮುಷ್ಠಲಗುಮ್ಮಿಪಾಲಯ್ಯ, ಸಣ್ಣ ಬೋರಯ್ಯ ಬೂಟ್ ತಿಪ್ಪೇಶಿ, ಚೌಡಪ್ಪ, ಬಿ.ತಿಪ್ಪೇಸ್ವಾಮಿ, ಪ್ರಹ್ಲಾದ, ಕುಮಾರ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ನಾಗರಾಜ್, ಪವಿತ್ರ, ಬೊಸೆದೇವರಹಟ್ಟಿ ಬೊಸೆರಂಗಪ್ಪ, ರಾಧಮ್ಮ, ಬೋರಯ್ಯ ಬಿಜೆಪಿ & ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಬಡವರು, ಮಧ್ಯಮ ವರ್ಗ, ಯುವಕರು, ರೈತರು, ಮಹಿಳೆಯರು, ವ್ಯಾಪಾರಿಗಳಿಗೆ ಮತ್ತು ಗುಡಾಂಗಡಿಗಳಿಗೂ ಜಿಎಸ್‌ಟಿ ದರ ಕಡಿಮೆ ಮಾಡಿರುವುದರಿಂದ ಅನುಕೂಲವಾಗಿದೆ ಎಂದ ಸತಸ ವ್ಯಕ್ತ ಪಡಿಸಿದರು.
ಪಾಪೇಶ್ ನಾಯಕ , ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯ ಕಾರ್ಯಕರಣಿ ಸದಸ್ಯ
ಭಾರತವನ್ನು ಈ ಭೂಮಿಯ ಸರ್ವ ಶ್ರೇಷ್ಠ ದೇಶವನ್ನಾಗಿ ಮಾಡಲು ಸುಷ್ಠಿಕರ್ತನಾದ ದೇವರು ಮೋದಿಯನ್ನು ಅವತಾರ ಪುರುಷನನ್ನಾಗಿ ಮಾಡಿ ಕಳುಹಿಸಿದ್ದಾನೆ ಭಾರತದ ಅಭಿವೃದ್ಧಿಗೆ ಅವರಿಗಿರುವ ಬದ್ಧತೆಗೆ ಸರಿಸಾಟಿ ಇಲ್ಲ ಎಂದರು. ಮೋದಿಯವರಿಗೆ ಆರೋಗ್ಯ, ಆಯಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಈ.ರಾಮರೆಡ್ಡಿ, ನಿಕಟ ಪೂರ್ವ ಅಧ್ಯಕ್ಷ