ಬಳ್ಳಾರಿ: ಭಾರತೀಯ ಜನತಾ ಪಾರ್ಟಿ ಬಳ್ಳಾರಿ ನಗರ ಘಟಕವು ನಗರದಲ್ಲಿ ಸೇವಾಪಾಕ್ಷಿಕ -2025 ರನ್ವಯ ಪಂಡಿತ್ ದೀನ್ ದಾಯಲ್ ಉಪಾಧ್ಯಾಯ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಪಂಡಿತರನ್ನು ಸ್ಮರಿಸಿದರು.
22ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಕೆ.ಹನುಮಂತ ಅವರ ನೇತೃತ್ವ ಹಾಗೂ ಬಳ್ಳಾರಿ ನಗರ ರೈತ ಮೋರ್ಚ ಸಂಯೋಗದೊAದಿಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಹಾಗೂ ತಾಯಿಯ ಹೆಸರಲ್ಲಿ ಸಸಿ ನೆಡುವ ಕಾರ್ಯಕ್ರಮವೂ ನಡೆಯಿತು.
ತಿರುಮಲ ಹಾಸ್ಪಿಟಲ್ ಪಕ್ಕದ ಪಾರ್ಕಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್ ಸೇರಿದಂತೆ ಬಿಜೆಪಿಯ ಮುಖಂಡರು, ಕಾರ್ಯಕರ್ತರು, ಪೌರ ಕಾರ್ಮಿಕರು ಈ ಸಂದರ್ಭದಲ್ಲಿ ಇದ್ದರು.