ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಡಾ. ವೆಂಕಟೇಶ್ ಬಾಬು ಎಸ್ ಅವರು, "ನಿಮ್ಮ ಕಲಿಕೆ ನಿರಂತರವಾಗಿರಲಿ. ಭವಿಷ್ಯದಲ್ಲಿ ತಂತ್ರಜ್ಞಾನ ಕಲಿಕೆ ಅತ್ಯವಶ್ಯಕವಾಗಿದ್ದು, ಅದು ನಿಮಗೆ ಉನ್ನತ ಮಟ್ಟದ ಸಾಧನೆ ತರುವಂತಾಗಲಿ" ಎಂದು ಪ್ರೇರಣಾತ್ಮಕವಾಗಿ ತಿಳಿಸಿದರು.

ಇಂದಿನ ಕಲಿಕೆ ಮೌಲ್ಯಯುತವಾದದ್ದು ನಾಳಿನ ಕಲಿಕೆ ಬದಲಾವಣೆಗೆ ಹತ್ತಿರವಾದದ್ದು ಹಾಗಾಗಿ ನಿಮ್ಮ ಕಲಿಕೆ ನಿರಂತರವಾಗಿದ್ದರೆ ಅದು ನೈತಿಕತೆಯೊಂದಿಗೆ ಜೊತೆಯಾದರೆ ನೀವುಗಳು ಉತ್ತಮ ನಾಯಕರಾಗಿ ಬೆಳೆಯಲು ಸಾಧ್ಯವಾಗುತ್ತದೆ ಮುಂದಿನ ದಿನಗಳಲ್ಲಿ ನೀವೆಲ್ಲರೂ ತಂತ್ರಜ್ಞಾನದ ನಾಯಕರಾಗಿ ಬೆಳೆಯಬಹುದು ಎಂದು ಹೇಳಿದರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲತೀಕ ದಿನೇಶ್ ಕೆ. ಶೆಟ್ಟಿ ಮಾತನಾಡುತ್ತಾ, "ಜೀವನದಲ್ಲಿ ಬದಲಾವಣೆಗಳಿಗೆ ಹೊಂದಿಕೊಂಡು, ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಸಾಧಕರಾಗಿ ಬೆಳೆಯಬಹುದು" ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆಯ ಸಂದೇಶ ನೀಡಿದರು.
ಅತಿಥಿಯಾಗಿ ಭಾಗವಹಿಸಿದ್ದ ಪ್ರೊ. ಅನಿತಾ ಕುಮಾರಿ ಜಿ ತಮ್ಮ ಭಾಷಣದಲ್ಲಿ, "ಪ್ರತಿಯೊಂದು ಅನುಭವವನ್ನು ಮೈಗೂಡಿಸಿಕೊಂಡಾಗ ಉತ್ತಮ ಸಾಧಕರಾಗಲು ಸಾಧ್ಯ" ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ವಿಶಿಷ್ಟಾ ಸಂಸ್ಥೆಯ ಸಂಸ್ಥಾಪಕರಾದ ಅರುಣ್ ಕುಮಾರ್ ಹಾಗೂ ತನುಜ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕ್ಕೆ ಬಂದವರು ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.