LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಅಂತರ್ಜಲ ಸಂರಕ್ಷಣೆ, ಬೋರ್ವೆಲ್ ರೀಚಾರ್ಜ್ ಮತ್ತು ಬರನಿರೋಧಕ ಬೆಳೆಗಳ ತಳಿಗೆ ಆದ್ಯತೆ

ಬಳ್ಳಾರಿ: ಜಾಗತಿಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವಎಲ್ ನಿನೋ' ಹವಾಮಾನ ವೈಪರೀತ್ಯದ ಪರಿಣಾಮವಾಗಿ ಉಂಟಾಗಬಹುದಾದ ತಾಪಮಾನ ಏರಿಕೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸರ್ಕಾರವು ಸಮಗ್ರ ಮತ್ತು ದೂರದೃಷ್ಟಿಯ ಕಾರ್ಯತಂತ್ರವನ್ನು ಕೈಗೆತ್ತಿಕೊಂಡಿದೆ. 

ಏನಿದು ಎಲ್ ನಿನೋ?:

                ದಕ್ಷಿಣ ಪೆಸಿಫಿಕ್ ಮಹಾಸಾಗರದ ಕೇಂದ್ರ ಮತ್ತು ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೆöÊ ನೀರು ಸಾಮಾನ್ಯಕ್ಕಿಂತ ಹೆಚ್ಚು ಕಾಯುವ ವಿದ್ಯಮಾನವನ್ನುಎಲ್ ನಿನೋ' (ಸ್ಪಾö್ಯನಿಷ್ ಭಾಷೆಯಲ್ಲಿಪುಟ್ಟ ಬಾಲಕ' ಅಥವಾಯೇಸು ಕ್ರಿಸ್ತ') ಎನ್ನಲಾಗುತ್ತದೆ. 

                ಘಟನೆಯು ಜಾಗತಿಕ ಗಾಳಿಯ ಮಾದರಿ ಹಾಗೂ ಮಳೆಯ ಪ್ರಮಾಣವನ್ನು ಏರುಪೇರು ಮಾಡುತ್ತದೆ. ಕಳೆದ 150 ವರ್ಷಗಳಲ್ಲೇ ಅತ್ಯಂತ ಪ್ರಬಲ ಎಲ್ ನಿನೋ ಆವರಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದರ ಪರಿಣಾಮವಾಗಿ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಕ್ಷೀಣಿಸಿ ಬರದ ಛಾಯೆ ಮೂಡುವ ಭೀತಿ ಎದುರಾಗಿದೆ. 

ತಾಪಮಾನ ಏರಿಕೆ ಮತ್ತು ಬರದ ಮುನ್ನೆಚ್ಚರಿಕೆ:

                ಭಾರತೀಯ ರಾಷ್ಟಿçà ಸಾಗರ ಮಾಹಿತಿ ಸೇವೆಗಳ ಕೇಂದ್ರ ನೀಡಿದ ಸೂಚನೆಯಂತೆ, ಹವಾಮಾನ ವೈಪರೀತ್ಯವು 2027 ಮೇ ತಿಂಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ.

ತಾಪಮಾನ ವೃದ್ಧಿ:

                ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗಲಿದ್ದು, ತೀವ್ರ ಕಾವು ಉಂಟಾಗಲಿದೆ. ಮುಂಗಾರು ವೈಫಲ್ಯ ಹಾಗೂ ಜಲಕ್ಷಾಮ, ಮಳೆಯ ಕೊರತೆಯಿಂದ ಜಲಾಶಯಗಳ ಮಟ್ಟ ಕುಸಿದು, ಕೃಷಿ ಹಾಗೂ ಕುಡಿಯುವ ನೀರಿಗೆ ಅಭಾವ ತಲೆದೋರಬಹುದು. ಕೃಷಿ ಉತ್ಪಾದನೆ ಕುಸಿದು ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಸರ್ಕಾರದ ಪ್ರಮುಖ ರಕ್ಷಣಾತ್ಮಕ ಕ್ರಮಗಳು ಹಾಗೂ ಕಾರ್ಯಕ್ರಮಗಳು:

                ಬೋರ್ವೆಲ್ ಮರುಪೂರಣ ಮತ್ತು ಅಂತರ್ಜಲ ರಕ್ಷಣೆ, ಕೆ-ಜಿಐಎಸ್ ಡಿಜಿಟಲ್ ನೋಂದಣಿ,  ರಾಜ್ಯದಲ್ಲಿರುವ ಸುಮಾರು 37 ಲಕ್ಷ ಬೋರ್ವೆಲ್ಗಳ ಸಮಗ್ರ ಮಾಹಿತಿಯನ್ನು ಕೆಎಸ್ಆರ್ಎಸ್ಎಸಿ ಕೆ-ಜಿಐಎಸ್ ಪೋರ್ಟಲ್ನಲ್ಲಿ ದಾಖಲಿಸಲಾಗುತ್ತಿದೆ. 

news_1783075729_0_534.webp

 

ತಾಂತ್ರಿಕ ತರಬೇತಿ ಹಾಗೂ ಪ್ರಗತಿ ಪರಿಶೀಲನೆ :

                ಬೋರ್ವೆಲ್ಗಳ ತಾಂತ್ರಿಕ ಪರಿಶೀಲನೆ, ರಿಪೇರಿ ಮತ್ತು ಮರುಪೂರಣ ಕಾರ್ಯಗಳಿಗಾಗಿ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ. ತೀವ್ರವಾಗಿ ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ (ಅತಿ ಹೆಚ್ಚು ಬಳಕೆಯಾದ ವಲಯಗಳಲ್ಲಿ) ಹೊಸ ಬೋರ್ವೆಲ್ ಕೊರೆಯುವುದನ್ನು ನಿರ್ಬಂಧಿಸಲಾಗಿದೆ. 

ಜಲ ಸಂರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ:

ವಿಬಿ-ಜಿ ರಾಮ್-ಜಿ ಯೋಜನೆ: ಗ್ರಾಮೀಣ ಪ್ರದೇಶಗಳಲ್ಲಿ ಮಳೆನೀರು ಸಂಗ್ರಹಣೆ, ವಿವಿಧ ಚೆಕ್ ಡ್ಯಾಮ್ಗಳ ನಿರ್ಮಾಣ (ಮಣ್ಣಿನ ತಡೆ, ಕಲ್ಲು ತುಂಬಿದ ತಂತಿ ಜಾಲದ ತಡೆ, ಕಲ್ಲಿನ ತಡೆ, ಚೆಕ್ ಡ್ಯಾಮ್ಸ್) ಹಾಗೂ ಸಾಂಪ್ರದಾಯಿಕ ನೀರಿನ ಮೂಲಗಳ ಪುನರುಜ್ಜೀವನವನ್ನು ಕೈಗೆತ್ತಿಕೊಳ್ಳಲಾಗಿದೆ. 

ಕಲುಷಿತ ನೀರು ಮರುಬಳಕೆ:  ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೈಗಾರಿಕೆ, ಉದ್ಯಾನವನ ಹಾಗೂ ನಿರ್ಮಾಣ ಕಾಮಗಾರಿಗಳಿಗೆ ಬಳಸುವ ವ್ಯವಸ್ಥೆ ಮಾಡಲಾಗುತ್ತಿದೆ. 

ವಾಟರ್ ಬಜೆಟಿಂಗ್: ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ನೀರಿನ ಸರಿಯಾದ ನಿರ್ವಹಣೆಗಾಗಿಜಲ ಆಯವ್ಯಯ' ಜಾರಿಗೆ ತರಲಾಗುತ್ತಿದೆ. 

ರೈತರಿಗೆ ಆಸರೆ: ಬರನಿರೋಧಕ ಬೆಳೆಗಳ ಪ್ರೋತ್ಸಾಹ:

                ಮಳೆ ಅಭಾವದಿಂದ ಉಂಟಾಗುವ ನಷ್ಟ ತಪ್ಪಿಸಲು ರೈತರು ಕಡಿಮೆ ನೀರು ಬಳಸುವ ಮತ್ತು ತೀವ್ರ ಶಾಖವನ್ನು ತಡೆಯಬಲ್ಲ ಬೆಳೆಗಳನ್ನು ಬೆಳೆಯಲು ಸರ್ಕಾರ ಉತ್ತೇಜಿಸುತ್ತಿದೆ.

ಸಿರಿಧಾನ್ಯಗಳು: ಶೇಂಗಾ, ಜೋಳ, ರಾಗಿ ಇತ್ಯಾದಿ,  ಕೇವಲ 250–400 ಮಿ.ಮೀ. ಮಳೆಯಲ್ಲೇ ಬೆಳೆಯಬಹುದು. 

ದ್ವಿದಳ ಧಾನ್ಯಗಳು: ಕಡಲೆ, ತೊಗರಿ, ಅಲಸಂದಿ ಮುಂತಾದ ಬೆಳೆಗಳು.  ಇವುಗಳ ಬೇರುಗಳು ಆಳಕ್ಕೆ ಇಳಿದು ತೇವಾಂಶ ಪಡೆಯುತ್ತವೆ ಹಾಗೂ ಮಣ್ಣಿನ ಸಾರ ಹೆಚ್ಚಿಸುತ್ತವೆ.

ಎಣ್ಣೆಕಾಳುಗಳು: ಸೂರ್ಯಕಾಂತಿ, ಎಳ್ಳು ಮತ್ತು ಹುಚ್ಚೆಳ್ಳು ಇತ್ಯಾದಿ. 400–750 ಮಿ.ಮೀ. ಮಳೆಯ ಅಗತ್ಯವಿದ್ದು, ಒಣ ಹವಾಮಾನ ತಡೆಯಬಲ್ಲವು.

                ಹವಾಮಾನ ವೈಪರೀತ್ಯದ ಕಠಿಣ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು ಪ್ರತಿಯೊಬ್ಬ ನಾಗರಿಕರೂ ಇಂಧನ ಬಳಕೆಯನ್ನು ಮಿತಿಗೊಳಿಸಬೇಕು, ಪುನರ್ಬಳಕೆ ಮಾಡಬಹುದಾದ ಇಂಧನ ಮೂಲಗಳಿಗೆ ಆದ್ಯತೆ ನೀಡಬೇಕು ಮತ್ತು ನೀರನ್ನು ಅತ್ಯಂತ ಮಿತವಾಗಿ ಬಳಸಿ ಸಂರಕ್ಷಿಸಬೇಕು.

                ಸರ್ಕಾರದ ಬೃಹತ್ ಜಲ ಸಂರಕ್ಷಣಾ ಅಭಿಯಾನಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಕರೆ ನೀಡಿದ್ದಾರೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ