ಮರಿಯಮ್ಮನಹಳ್ಳಿ: ಪಟ್ಟಣದ ಆರಾಧ್ಯದೈವಗಳಾದ ಐತಿಹಾಸಿಕ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ಉಭಯ ದೇವರುಗಳ ಜೋಡಿ ರಥೋತ್ಸವ ಮಾ. 27.03.2026 ಶುಕ್ರವಾರ ರಂದು ನಡೆಯಲಿದ್ದು ಮಂಗಳವಾರ ದೇವಸ್ಥಾನದ ಕಮಿಟಿಯಿಂದ ರಥೋತ್ಸವದ ಸಿದ್ದತೆ ಕೈಗೊಳ್ಳಲಾಗಿತ್ತು.
ಮಾ. 20 ರಂದು ಧ್ವಜಾರೋಹಣ ದಿಂದ ದೈವಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮಾ. 24 ಹನುಮಂತೋತ್ಸವ(ನಿಶ್ಚಿತಾರ್ಥ), ಮಾ. 25 ಗರುಡೋತ್ಸವ(ದೇವರ ಲಗ್ನ), ಮಾ. 26 ಬಿಳಿ ಆನೆ ಉತ್ಸವ ಹಾಗೂ ರಾತ್ರಿ 10ಕ್ಕೆ ಉಡಿತುಂಬುವ ಕಾರ್ಯಕ್ರಮ, ಮಾ. 27 ರಂದು ಬೆಳಗ್ಗೆ 9 ರಿಂದ 1 ಗಂಟೆ ವರೆಗೆ ಮಡಿತೇರು ಹಾಗೂ ಸಂಜೆ ಅದ್ಧೂರಿ ಜೋಡಿ ರಥೊತ್ಸವ ಜರುಗಲಿದ್ದು, 28 ರಂದು ಪೂರ್ಣಾಹುತಿ, ಕಂಕಣ ವಿಸರ್ಜನೆ, ವಸಂತೋತ್ಸವ(ಓಕುಳಿ) ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹೋಮ, ಹವನಗಳನ್ನು ಕೊಪ್ಪಳ ಜಿಲ್ಲೆಯ ಕಿನ್ನಾಳ ಮನೆತನದ ಪುರೋಹಿತರ ನೇತೃತ್ವದಲ್ಲಿ ನಡೆಲಿವೆ ಎಂದು ಧಾರ್ಮಿಕ ದತ್ತಿ ಇಲಾಖೆ ಪ್ರಕಟಣೆಯಲ್ಲಿ ಇಲಾಖೆ ತಿಳಿಸಿದೆ.