ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರೊ. ನಾಗೇಶ್ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಜ್ಜುಗೊಳಿಸುವಿಕೆ ಇಂದು ಅತ್ಯಗತ್ಯವಾಗಿರುವುದನ್ನು ವಿವರಿಸಿದರು. ಉದ್ಯೋಗ ಮೇಳಗಳಂತಹ ವೇದಿಕೆಗಳು ವಿದ್ಯಾರ್ಥಿಗಳಿಗೆ ಕಂಪನಿಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಸ್ಪರ್ಧಾತ್ಮಕ ಯುಗದಲ್ಲಿ ತಮಗೆ ಬೇಕಾದ ಮಾರ್ಗವನ್ನು ತೋರಿಸುತ್ತವೆ ಎಂದು ಹೇಳಿದರು.
ಆನ್ಲೈನ್ ಮೂಲಕ ಶ್ರೀಮತಿ ಸುಮತಿ ಕರ್ನಾಟಕ ಕೌಶಲ್ಯಾಭಿವೃದ್ಧಿ ಅಧಿಕಾರಿ ರವರು ಮಾತನಾಡಿ ಕೌಶಲ್ಯ ಶಿಕ್ಷಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಪ್ರತಿಯೊಬ್ಬ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಕೌಶಲ್ಯ ಭರಿತ ಆಗಬೇಕೆಂದು ಹೇಳಿದರು
ಪ್ರಾಸ್ತಾವಿಕ ಮಾತನಾಡಿದ ಡಾ. ವೆಂಕಟೇಶ್ ಬಾಬು ರವರು ಈ ಹಿಂದೆ ಪದವಿ ಯೊಂದಿಗೆ ಕೌಶಲ್ಯ ಎನ್ನುವ ಮಾತೃಡಿಯಲ್ಲಿತ್ತು ಆದರೆ ಈಗ ಕೌಶಲ್ಯವೇ ಪದವಿಯಾಗಿದೆ ವಿದ್ಯಾರ್ಥಿಗಳು ಪದವಿಯೊಂದಿಗೆ ಕೌಶಲ್ಯ ಪಡೆಯುವುದರ ಬದಲು ಕೌಶಲ್ಯವೇ ಪದವಿನ್ನಾಗಿ ಮಾಡಿಕೊಂಡರೆ ಅವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತದೆ ಆ ನಿಟ್ಟಿನಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಕಲಿಕೆ ಜೊತೆ ಕೌಶಲ್ಯ ಎಂಬ ವಿಷಯದಲ್ಲಿ ವಿವಿಧ ರೀತಿಯ ಕೋರ್ಸ್ಗಳ ತರಬೇತಿಯನ್ನು ನೀಡಿ ಆ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಉದ್ದೇಶದಿಂದ ಈ ಉದ್ಯೋಗಗಳನ್ನು ಆಯಸಲಾಗಿದೆ ಇತರದ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಮನೋಭಾವವನ್ನು ಬೆಳೆಸುತ್ತವೆ ಹಾಗೂ ತಮ್ಮ ಮುಂದಿನ ಜೀವನಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಡಾ. ಸಿದ್ಧೇಶ್ ಎಸ್ ಡಾ. ನಾಗರಾಜ ತಳವಾರ ಡಾ ಗುರುರಾಜ ಜಿ ಪಿ ಶ್ರೀಮತಿ ಪ್ರತಿಭಾ ಉಪಸ್ಥಿತರಿದ್ದರು
ವಿದ್ಯಾರ್ಥಿಗಳ ಉದ್ಯೋಗಾಭಿಲಾಷೆ, ಕೌಶಲ್ಯಾಭ್ಯಾಸ, ಸ್ವಯಂವಿಶ್ವಾಸ ಮತ್ತು ಹೊಸ ಅವಕಾಶಗಳನ್ನು ಬಳಸಿಕೊಳ್ಳುವ ಕುರಿತು ಅಮೂಲ್ಯ ಸಲಹೆಗಳನ್ನು ನೀಡಿದರು.
ಈ ಮೇಳದಲ್ಲಿ ನಾನಾ ಕ್ಷೇತ್ರಗಳ ಹಲವು ಪ್ರಮುಖ ಕಂಪನಿಗಳು ಪಾಲ್ಗೊಂಡಿದ್ದು, ಸುಮಾರು 850ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು. ವಿದ್ಯಾರ್ಥಿಗಳಿಗೆ ನೇರ ಸಂದರ್ಶನ, ಕೌನ್ಸೆಲಿಂಗ್ ಮತ್ತು ಉದ್ಯೋಗ ಮಾಹಿತಿ ನೀಡುವ ಅವಕಾಶ ಒದಗಿತು. ಬಹುತೇಕ ವಿದ್ಯಾರ್ಥಿಗಳು ಇಲ್ಲಿ ಭಾಗವಹಿಸಿ ತಮ್ಮ ವೃತ್ತಿ ಭವಿಷ್ಯದತ್ತ ಹೊಸ ಹೆಜ್ಜೆ ಇಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಬಿ ಸಿ ತಹಸಿಲ್ದಾರ್ ಅವರು ವಹಿಸಿ ಮಾತನಾಡುತ್ತಾ ಇತರಹದ ಉದ್ಯೋಗ ಮೇಳಗಳನ್ನು ಆಯೋಜಿಸಿತ್ತಿದ್ದೇವೆ. ಪ್ರತಿ ವರ್ಷ ಕಾಲೇಜಿನಲ್ಲಿ ಆಯೋಜನೆ ಮಾಡಿ ಅದಕ್ಕೆ ಬೇಕಾದ ಎಲ್ಲಾ ಸಹಕಾರಗಳನ್ನು ನೀಡಿ ವಿದ್ಯಾರ್ಥಿಗಳನ್ನು ಉದ್ಯೋಗಿಗಳನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು
ಭಾಗವಹಿಸಿದ ಒಟ್ಟು ವಿದ್ಯಾರ್ಥಿಗಳಲ್ಲಿ 141 ವಿದ್ಯಾರ್ಥಿಗಳು ವೇದ ಕಂಪನಿಗಳಿಗೆ ವಿವಿಧ ಹುದ್ದೆಗಳಿಗಾಗಿ ಆಯ್ಕೆಯಾದರೂ
16 ವಿದ್ಯಾರ್ಥಿಗಳಿಗೆ ತಕ್ಷಣದಲ್ಲಿ ಆದೇಶ ಪ್ರತಿಯನ್ನು ನೀಡಲಾಯಿತು
ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ ಚೈತ್ರ ಪಿ ಅವರು ನೆರವೇರಿಸಿದರು ಕಾರ್ಯಕ್ರಮದ ಪ್ರಾರ್ಥನೆಯನ್ನು ವಿದ್ಯಾರ್ಥಿ ಮುಕೇಶ್ ನೆರವೇರಿಸಿದರೆ ಅತಿಥಿಗಳಿಗೆ ಸ್ವಾಗತವನ್ನು ಪ್ರೋ ಸಂಗಪ್ಪ ಅವರು ನೆರವೇರಿಸಿದರು ಅಂತಿಮವಾಗಿ ಕಾರ್ಯಕ್ರಮದ ವಂದನಾರ್ಪಣೆಯನ್ನು ಪ್ರಭು ನಾಯಕ ಮಾಡಿದರು.