LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ಕಾರಿ ಶಾಲಾ ಮಕ್ಕಳ ಅಂದ ಹೆಚ್ಚಿಸಿದ ಟಿ-ಶರ್ಟ್, ಪ್ಯಾಂಟ್

ಸಿರುಗುಪ್ಪ : ತಾಲ್ಲೂಕಿನ ಸಮೀಪದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಭೈರಗಾಮದಿನ್ನೆಯಲ್ಲಿ ಸರ್ಕಾರಿ ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಂಗ ಸಂಶೋಧಕ ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ ಅವರು ಊರಿನವರ ಸಹಾಯ ಮತ್ತು ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ ಸಂಸ್ಥೆಯ ಸಹಕಾರದೊಂದಿಗೆ ಶನಿವಾರ ಮತ್ತು ಬುಧುವಾರ ಮಕ್ಕಳಿಗೆ ತೊಡಲು ನೀಲಿ, ಬಿಳಿ ಬಣ್ಣ ಮಿಶ್ರಿತ ಟಿ-ಶರ್ಟ್ ಮತ್ತು ಪ್ಯಾಂಟ್ ನ್ನು ವಿತರಿಸಲಾಯಿತು.



ಇದೇ ಸಂದರ್ಭದಲ್ಲಿ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ಮಾತಾನಾಡಿ ಇಂತಹ ವಿನೂತನ ಕಾರ್ಯಗಳ ಮೂಲಕ ಶಾಲಾ ಮಕ್ಕಳ ಸಂಖ್ಯೆಯನ್ನು ದ್ವಿಗುಣಗೊಳಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ಕೆ ಸಹಕರಿಸಿ ಶಾಲಾ ಮುಖ್ಯೋಪಾಧ್ಯಾಯ ದೊಡ್ಡಪ್ಪ ಕೋರೆ, ಅತಿಥಿ ಶಿಕ್ಷಕರಾದ ಆರ್.ಪಿ.ಈಶಪ್ಪ, ಕೆ.ಪುರುಷೋತ್ತಮ, ಶರನಾಡಗೌಡ, ಬಟ್ಟೆಗಳನ್ನು ಅಂದವಾಗಿ ತಯಾರಿಸಿಕೊಟ್ಟ ಬೆಂಗಳೂರಿನ ಮಾರ್ಶ್ ಪ್ಯಾಷನ್ ಮಾಲೀಕ ಚಂದನ್, ಗೆಳಯ ಆರ್.ಜಿ.ಲವ,ಪಿ.ಕೆ.ರವಿಕುಮಾರ್ ಹಾಗೂ ಊರಿನ ಪೋಷಕರಿಗೆ ಧನ್ಯವಾದಗಳು ಸಲ್ಲಿಸಿ ಬಟ್ಟೆ ವಿತರಿಸಿದರು.

 
"ಈ ಊರಿನಲ್ಲಿ ಶಿಕ್ಷಣ ಪ್ರೇಮಿ ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ ಹಾಗೂ ಕಾರಂತ ರಂಗಲೋಕ ಸಂಸ್ಥೆಯ ಸಹಕಾರದಿಂದ ನಮ್ಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಗುಣಮಟ್ಟ ಶಿಕ್ಷಣ ನೀಡುವಲ್ಲಿ ಸುತ್ತಮುತ್ತಲಿನ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಾಗಿದೆ"

ಕೆ.ದೊಡ್ಡಪ್ಪ ಕೋರೆ,ಮುಖ್ಯೋಪಾಧ್ಯಾಯರು.

 
"ಬಾಲ್ಯದಲ್ಲಿ ನಾವು ಅನುಭವಿಸಿದ ಮತ್ತು ಅನುಭವಿಸದ ಅನುಭವಗಳನ್ನು ಹಾಗೂ ವ್ಯವಸ್ಥಿತ ಶಿಕ್ಷಣವನ್ನು ಇಂದು ನಮ್ಮೂರ ಶಾಲಾ ಮಕ್ಕಳಿಗೆ ಒದಗಿಸುವುದಲ್ಲದೇ, ಸರ್ಕಾರಿ ಶಾಲೆಗಳ ಹಾಗೂ ಶಾಲಾ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಮಹದಾಸೆಯನ್ನು ನಾನು ಮತ್ತು ನಮ್ಮ ಸಂಸ್ಥೆ ಹೊಂದಿದೆ"

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ

ರಂಗ ಸಂಶೋಧಕ/ಕಾರ್ಯದರ್ಶಿ 

ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ (ರಿ)
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST