ಆಶ್ರಯ ಯೋಜನೆಗೆ ಸರ್ಕಾರದಿಂದ ಅನುಮೋದನೆ
ನಾಯಕನಹಟ್ಟಿ: ಪಟ್ಟಣ ಪಂಚಾಯಿತಿಯ 2ನೇ ವಾರ್ಡಿನ, ಕಾವಲು ಬಸವೇಶ್ವರ ನಗರದಲ್ಲಿರುವ 18ಎಕರೆ 38ಗುಂಟೆ ಗೋಮಾಳ ಜಮೀನಿನಲ್ಲಿ ಆಶ್ರಯ ಯೋಜನೆಯಡಿಯಲ್ಲಿ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ನೇತೃತ್ವದಲ್ಲಿ ಆಶ್ರಯ ಯೋಜನೆಗೆ ಸರ್ಕಾರದಿಂದ ಅನುಮೋದನೆಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಹೇಳಿದರು.
ಪಟ್ಟಣದ ಪಂಚಾಯಿತಿಯಲ್ಲಿ ಫಲಾನುಭವಿಗಳಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಮತ್ತು ಉಪಾಧ್ಯಕ್ಷರಾದ ಬೋಸಮ್ಮ ಸದಸ್ಯರಾದ ದಾಸಓಬಯ್ಯ ಫಲಾನುಭವಿಗಳಿಗೆ ಅರ್ಜಿಯನ್ನು ವಿತರಿಸಿದರು. ಜಿಲ್ಲಾಧಿಕಾರಿಗಳ ಆದೇಶದಂತೆ 555 ನಿವೇಶನಗಳನ್ನು ಕಡುಬಡವರಿಗೆ ನಿವೇಶನವನ್ನು ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ಅವರು ಫಲಾನುಭವಿಗಳು ಯಾವುದೇ ಇಲಾಖೆಯಲ್ಲಿಯಾಗಲೀ ಯಾವುದೇ ವಸತಿಯೋಜನೆ ಪಡೆದಿರಬಾರದು, ಪಡೆದಿಲ್ಲದವರಿಗೆ, ಕಡುಬಡವರು ಆಗಿರಬೇಕು, ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು ಅಂತವರಿಗೆ ಮಾತ್ರ ನಿವೇಶನವನ್ನು ಕೊಡಲಾಗುತ್ತದೆ ಎಂದರು.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.