LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಆಹಾರ ಸೇವನೆ ಮುಖ್ಯ

ನಾಯಕನಹಟ್ಟಿ : ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಒಳ್ಳೆಯ ಆಹಾರ ಸೇವನೆ ಮಾಡಬೇಕು, ಪ್ರತಿದಿನ ವ್ಯಾಯಾಮ ಮಾಡುವುದು ಸೂಕ್ತ ಎಂದು ಬೆಳಗಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶಲಾಕ್ಷಿ ಕಿವಿ ಮಾತು ಹೇಳಿದರು.

 

ಸಮೀಪದ ತುರುವನೂರು ಗ್ರಾಮದಲ್ಲಿ ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಹೋಬಳಿ ಮಟ್ಟದ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ನಂತರ ಮಾತನಾಡಿದ ಅವರು ಪ್ರತಿದಿನ ನಾವು ಸೇವನೆ ಮಾಡುವ ಆಹಾರವು ಗುಣಮಟ್ಟವಾಗಿರಬೇಕು ಹಾಗೂ ಮಿತವಾಗಿ ಬಳಸಬೇಕು, ಬೇರೆ ಬೇರೆ ತರಕಾರಿ ಸೊಪ್ಪು ಬಳಸಬೇಕು. ನಾವು ಮಾಡುವಂತ ಕೆಲಸದ ಒತ್ತಡದಲ್ಲಿ ಸರಿಯಾದ ಸಮಯಕ್ಕೆ ಊಟ ಮಾಡದೆ ಇದ್ದಲ್ಲಿ ದೇಹದಲ್ಲಿ ಬದಲಾವಣೆ ಏರುಪೇರು ಆಗಿ ಅನಾರೋಗ್ಯಕ್ಕೆ ಒಳಗಾಗುತ್ತೆವೆ ಎಂದು ತಿಳಿಸಿದರು. ನಮಗೆ ಕಾಯಿಲೆ ಬರಬಾರದು ಅಂದರೆ ಮತ್ತು ಅದು ಒಬ್ಬರಿಂದ ಇನ್ನೋಬ್ಬರಿಗೆ ಹರಡಬಾರದು ಅಂದರೆ ನಾವೇಲ್ಲರೂ ನಮ್ಮ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳಬೇಕು. ಕೈ ತೊಳಯದೆ ಮೂಗು ಅಥವಾ ಕಣ್ಣುಗಳನ್ನು ಮುಟ್ಟುವುದಾದರೆ ಸುಲಭವಾಗಿ ಶೀತ ಜ್ವರ ಬರುತ್ತದೆ ಎಂದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ಚೈತ್ರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚಿಕ್ಕಗೊಂಡನಹಳ್ಳಿ, ವಿಶಲಾಕ್ಷಿ ಪಿಡಿಓ ಬೆಳಗಟ್ಟ, ಲಲಿತ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಾಡನಾಯಕನಹಳ್ಳಿ, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಯವರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST