ಬಹುಗ್ರಾಮ ಕುಡಿಯುವ ನೀರು ಶುದ್ದೀಕರಣ ಘಟಕಕ್ಕೆ ಜಿ.ಪಂ ಸಿಇಓ ಭೇಟಿ
ಕಾರಟಗಿ : ತಾಲೂಕಿನ ಮೈಲಾಪುರ ಗ್ರಾ.ಪಂ ವ್ಯಾಪ್ತಿಯ ನಾಗನಕಲ್ ಹೊರ ವಲಯದ ರಾಜೀವ್ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಶುದ್ದೀಕರಣ ಘಟಕಕ್ಕೆ ಶನಿವಾರದಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ವರ್ಣಿತ್ ನೇಗಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಕಾರಟಗಿ ಪಟ್ಟಣ ಸೇರಿ ವಿವಿಧ ಹಳ್ಳಿಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗಬೇಕು. ಮಳೆಗಾಲ ಆರಂಭವಾಗಿದ್ದು ಜನರಿಗೆ ಪರಿಶುದ್ಧ ನೀರು ಒದಗಿಸಲು ಕ್ರಮವಹಿಸಬೇಕು, ಘಟಕದಲ್ಲಿನ ಮೋಟಾರು, ಯಂತ್ರಗಳು ತಾಂತ್ರಿಕ ಸಮಸ್ಯೆಗಳಿದ್ದರೆ ಕೂಡಲೇ ಸರಿಪಡಿಸಿಕೊಳ್ಳಬೇಕು ಎಂದು ಆರ್ ಡಬ್ಲ್ಯುಎಸ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾರಟಗಿ ತಾ.ಪಂ ಇಓ ಲಕ್ಷ್ಮೀದೇವಿ, ಆರ್ ಡಬ್ಲ್ಯು ಎಸ್ ಇಇ ಮಹೇಶ್ ಶಾಸ್ತ್ರಿ, ಎಇಇ ದೇವಣ್ಣ ಕಟ್ಟಿ, ಶಾಖಾಧಿಕಾರಿಗಳು ಸೇರಿದಂತೆ ತಾ.ಪಂ, ಗ್ರಾ.ಪಂ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.