LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಕೆ.ಎನ್.ರಾಜಣ್ಣ, ಬಿ.ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿ

ಬಳ್ಳಾರಿ: ನೇರ, ನಿಷ್ಟುರ, ಕಳಂಕ ರಹಿತ, ಮಾದರಿ ಹಿರಿಯ ರಾಜಕಾರಣಿ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದು ಅತ್ಯಂತ ಖಂಡನೀಯ, ಸುಳ್ಳು ನಾನಾ ಹಗರಣಗಳನ್ನು ಹೊರೆಸಿ ಒತ್ತಾಯದ ಮೂಲಕ  ರಾಜೀನಾಮೆಯನ್ನು ಪಡೆದ ಬಿ.ನಾಗೇಂದ್ರ ಇವರಿಬ್ಬರಿಗೂ ಕೂಡಲೇ ಯಾವುದೇ ನೆಪ ಹೇಳದೇ ಮತ್ತೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿಕುಮಾರ್ ಹಾಗೂ ಹೈಕಮಾಂಡ್ ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಮೀನಳ್ಳಿ ತಾಯಣ್ಣ ಅವರು ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯಾವುದೇ ಹೇಳಿಕೆ ನೀಡಲಿ, ಅದು ತಪ್ಪಾಗಿದ್ದರೆ, ಮುಜುಗರವಾಗುವ ರೀತಿಯಲ್ಲಿದ್ದರೆ, ಶೋಕಾಸ್ ನೋಟಿಸ್ ಕಾಲಾವಕಾಶ ನೀಡಬಹುದಿತ್ತು, ಏಕಾಏಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವುದು ಅತ್ಯಂತ ಖಂಡನೀಯ,

 

ಇದು ಅವರಿಗಷ್ಟೇ ಅಲ್ಲ,  ಇಡೀ ವಾಲ್ಮೀಕಿ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ಮಾಜಿ ಸಚಿವ ಬಿ.ನಾಗೇಂದ್ರ ಅವರು ಏನೂ ತಪ್ಪು ಮಾಡದಿದ್ದರೂ ಅವರನ್ನು ಒತ್ತಾಯದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಪಡೆದರು. 178 ಕೋಟಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ಅಂದ್ರೆ, ಹಣಕಾಸು ಇಲಾಖೆ ಸಿ.ಎಂ.ಸಿದ್ದರಾಮಯ್ಯ ಅವರ ಬಳಿಯೇ ಇದೆ, ಇವರ ಗಮನಕ್ಕೆ ಬಾರದೇ ಎಲ್ಲವನ್ನೂ ಬಿ.ನಾಗೇಂದ್ರ ಅವರ ಮೇಲೆ ಹೊರೆಸಿ ಅವರಿಂದಲೂ ರಾಜ್ಯ ಕಾಂಗ್ರೆಸ್ ಸರ್ಕಾರದ ಸಿ.ಎಂ.ಸಿದ್ದರಾಮಯ್ಯ ಅವರು ಒತ್ತಾಯದ ಮೂಲಕ ರಾಜೀನಾಮೆ ಪಡೆದರು, ಇದು ಅತ್ಯಂತ ಖಂಡನೀಯ. ಇಬ್ಬರಿಗೂ ಮತ್ತೆ ಸಚಿವ ಕೂಡಲೇ ಕಲ್ಪಿಸಬೇಕು, ನಿರ್ಲಕ್ಷಿಸಿದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.



ಕಳೆದ 40 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡುತ್ತಾ ಬಂದಿರುವ ಕೆ.ಎನ್.ರಾಜಣ್ಣ ಅವರು, ಎಂತಹ ಸಂದರ್ಭ ಬಂದರು ಸಿ.ಎಂ.ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ, ಇದ್ದುದ್ದನ್ನೇ ಇದ್ದ ಹಾಗೆ ಮಾತನಾಡುವ ಸ್ವಭಾವ ರಾಜಣ್ಣ ಅವರದ್ದು, ಯಾರ ಮುಲಾಜಿಗೆ, ಬೀಳದೇ ನೇರವಾಗಿ ಮಾತನಾಡುವ ಸ್ವಭಾವ ಅವರದ್ದು, ಹೈಕಮಾಂಡ್ ನಿಂದಾ ಒತ್ತಡ ಬಂದ್ರೆ, ರಾಜಣ್ಣ ಅವರ ಬೆನ್ನಿಗೆ ಸಿ.ಎಂ.ಸಿದ್ದರಾಮಯ್ಯ ಅವರು ನಿಲ್ಲಬೇಕಿತ್ತು. ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಲಿ ಪಶು ಮಾಡಲಾಯಿತು. ಇಂದಿನ ಸರ್ಕಾರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಇದೆ ರೀತಿ ಮಾಡಿ ರಾಜಕೀಯ ಭವಿಷ್ಯ ಹಾಳು ಮಾಡಿದ್ರು, ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಡಿಸಿಎಂ ಮಾಡಲಾಗುವುದು ಎಂದು ಈ ಹಿಂದೆ ಬಿಜೆಪಿ ಅವರು ಭರವಸೆ ನೀಡಿ, ಪುಕ್ಕಟೆ ಪ್ರಚಾರ ಪಡೆದರು, ನಂತರ ಆರೋಗ್ಯ ಖಾತೆ ಕೊಟ್ರು, ಎಲ್ಲ ಪಕ್ಷಗಳೂ ನಮ್ಮ ವಾಲ್ಮೀಕಿ ಸಮಾಜದ ನಾಯಕರನ್ನು ಪರೋಕ್ಷವಾಗಿ ಬೆಳೆಯಲು ಬಿಡುತ್ತಿಲ್ಲ, ಇದೆ ರೀತಿ ಮುಂದುವರೆದರೆ ಸಮಾಜ ಇಡಿ ರಾಜ್ಯಾದ್ಯಂತ ಸಿಡಿದೇಳಲಿದೆ ಎಂದು ಎಚ್ಚರಿಸಿದರು. ಯುವ ಮುಖಂಡ ಜೋಳದರಾಶಿ ತಿಮ್ಮಪ್ಪ, ನ್ಯಾಯವಾದಿ ಜಯರಾಂ, ಮುಖಂಡ ಶಿವಕುಮಾರ್ ಅವರು ಮಾತನಾಡಿ, ಕೆ.ಎನ್.ರಾಜಣ್ಣ ಹಾಗೂ ಬಿ.ನಾಗೇಂದ್ರ ಅವರಿಗೆ ಕೂಡಲೇ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಕೆ.ಹನುಮಂತಪ್ಪ, ಹನುಮಂತಪ್ಪ, ಗೋಪಾಲ್ ಸೇರಿದಂತೆ ಇತರರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ