LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕುಸ್ತಿ ಪಂದ್ಯದಲ್ಲಿ ಹೆಣ್ಣು ಮಕ್ಕಳು ಸಹ ಉತ್ತಮ ಪ್ರದರ್ಶನ

ನಾರಾಯಣ ದೇವರ ಕೆರೆ(ನಾಣಿಕೆರೆ) ಕುಸ್ತಿಯ ತವರೂರು

ಮರಿಯಮ್ಮನಹಳ್ಳಿ: ನಮ್ಮ ಮರಿಯಮ್ಮನಹಳ್ಳಿಗೆ ಇತಿಹಾಸ ಇದೆ. ಮಲ್ಲಾಪುರ ತಾಲ್ಲೂಕಿನ ನಾರಾಯಣ ದೇವರಕೆರೆ(ನಾಣಿಕೆರೆ) ಎಂದು ಗ್ರಾಮದಲ್ಲಿ ವಾಸವಾಗಿದ್ದರು. ಆಗ ಕುಸ್ತಿಗೆ ನಾಣಿಕೆರೆ ಹೆಸರು ವಾಸಿಯಾಗಿತ್ತು. ನಂತರ ತುಂಗಭದ್ರಾ ಜಲಾಶಯ ಅಣೆಕಟ್ಟು ನಿರ್ಮಾಣ ಆದ ನಂತರ ಮರಿಯಮ್ಮನಹಳ್ಳಿ ಗ್ರಾಮಕ್ಕೆ ಬಂದು ನೆಲಸಿದರು. ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.

ಪಟ್ಟಣದ ವಿನಾಯಕ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವಿಜಯ ನಗರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 14 ಮತ್ತು 17ನೇ ವಯೋಮಿತಿಯ ಬಾಲಕ-ಬಾಲಕಿಯರ 3 ದಿನಗಳ ಕಾಲ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಸ್ತಿ ಪಂದ್ಯದಲ್ಲಿ ಹೆಣ್ಣು ಮಕ್ಕಳು ಸಹ ಉತ್ತಮ ಪ್ರದರ್ಶನ ನೀಡಿದ್ದು, ವಿಜೇತ ಮಹಿಳಾ ಕುಸ್ತಿ ಪಟುಗಳು ರಾಷ್ಟ್ರ ಮತ್ತು ಅಂತರ್ ರಾಷ್ಟ ಮಟ್ಟದ ಕುಸ್ತಿ ಪಂದ್ಯವಾಳಿಯಲ್ಲೂ ಕೀರ್ತಿ ಪತಾಕೆ ಹಾರಿಸಲಿ. ಮೂರು ದಿನಗಳ ಕಾಲ ನಡೆದ ಅದ್ಧೂರಿ ಕುಸ್ತಿ ಪಂದ್ಯಾವಳಿ ಮೂಲಕ ಇತಿಹಾಸ ಸೃಷ್ಟಿ ಮಾಡುವಂತಾಗಿದ್ದು, ಮುಂದಿನ ದಿನಗಳಲ್ಲಿ ರಾಷ್ಟ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಸುವ ಚಿಂತನೆ ಇದೆ ಎಂದರು.

ವಿಜೇತ ಕುಸ್ತಿ ಪಟುಗಳಿಗೆ ಪದಕ, ಪ್ರಮಾಣ ಪತ್ರವನ್ನು  ಶಾಸಕ ನೇಮಿರಾಜ ನಾಯ್ಕ ವಿತರಣೆ ಮಾಡಿದರು.



ಈ ಸಂದರ್ಭದಲ್ಲಿ ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಾಳಯ್ಯ, ತಾ.ಪಂ.ಇಒ ಆಲಂ ಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ,  ವಿನಾಯಕ ಶಾಲಾ ಮುಖ್ಯಸ್ಥ ಕುಪ್ಪಿನಕೆರೆ ಮಂಜುನಾಥ, ಗದಗ ಪೈಲ್ವಾನ್ ವಸಂತ, ಜೆಡಿಎಸ್ ಅಧ್ಯಕ್ಷ ವೈ ಮಲ್ಲಿಕಾರ್ಜುನ, ಮುಖಂಡರಾದ ಚಿದ್ರಿ ಸತೀಶ, ಬಾದಾಮಿ ಮೃತ್ಯುಂಜಯ, ಎಲೆಗಾರ ಮಂಜುನಾಥ, ಸಜ್ಜದ ವಿಶ್ವನಾಥ, ದುರುಗಪ್ಪ, ಸೆರೆಗಾರ ನವೀನ, ಗುಂಡಾ ಸ್ವಾಮಿ ಇತರರು ಇದ್ದರು.
ಮರಿಯಮ್ಮನಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಅತ್ಯುತ್ತಮವಾಗಿ ಆಯೋಜನೆ ಮಾಡಿತ್ತು, ಇಷ್ಟು ವರ್ಷದ ಕುಸ್ತಿ ಪಂದ್ಯಾವಳಿಯಲ್ಲಿ ಇದು ತುಂಬಾ ಸಂತೋಷ ತಂದಿದೆ.

ಡಾ. ವಿನೋದ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬೆಂಗಳೂರು


Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST