LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಾಂತಿಯುತವಾಗಿ ನಡೆದ ಗಣೇಶ ವಿಸರ್ಜನೆ

ಬೆಂಗಳೂರು: ಕಲ್ಲು ತೂರಾಟದ ಬಳಿಕ ಶಾಂತ ಪರಿಸ್ಥಿತಿಗೆ ಮರಳುತ್ತಿರುವ ಮದ್ದೂರಿನಲ್ಲಿ ಇಂದು ನಡೆದ ಸಾಮೂಹಿಕ ಗಣಪತಿ ವಿಸರ್ಜನೆಯು ಶಾಂತಯುತವಾಗಿ ನಡೆದಿದೆ.

ಸಾಮೂಹಿಕ ಗಣಪತಿ ಮೆರವಣಿಗೆ ವಿಸರ್ಜನೆಯಲ್ಲಿ ಪಟ್ಟಣದವರಲ್ಲದೇ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಮಂದಿ ಪಾಲ್ಗೊಂಡಿದ್ದು, ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ವಿಸರ್ಜನೆ ಸ್ಥಳದಲ್ಲಿ ೩

ಸಾವಿರಕ್ಕೂ ಹೆಚ್ಚಿ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿತ್ತು.

 

ಸಾಮೂಹಿಕ ಗಣಪತಿ ಮೆರವಣಿಗೆ ವಿಸರ್ಜನೆಯಲ್ಲಿ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ಮಾಡಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಐಜಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

ಮೆರವಣಿಗೆಯ ಆರಂಭದಿಂದ ಹಿಡಿದು ವಿಸರ್ಜನೆ ಜೊತೆ ವಾಪಸಾಗುವವರೆಗೆ ದ್ರೋಣ್ ಕ್ಯಾಮರಾ ಕಣ್ಗಾವಲು ವ್ಯವಸ್ಥೆ ಮಾಡಲಾಗಿತ್ತು,ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ಬಂದೋಬಸ್ಥ್ ಕೈಗೊಂಡಿತ್ತು ಎಂದು ಹೇಳಿದರು.



ಪಟ್ಟಣದ ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶದಲ್ಲಿ ಆರ್‌ಎಎಫ್, ಅರೆಸೇನಾ ಪಡೆ ತುಕಡಿ ನಿಯೋಜಿಸಲಾಗಿದೆ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಪೊಲೀಸರು ಪಥಸಂಚಲನ ನಡೆಸಲಾಗಿದ್ದು ಪಟ್ಟಣದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದರು.

ಮೆರವಣಿಗೆ ಬೆಳಗ್ಗೆ ೧೧ ಗಂಟೆಗೆ ಮದ್ದೂರಿನ ಪ್ರವಾಸಿ ಮಂದಿರದಿಂದ ಬಳಿಯಿಂದ ಆರಂಭವಾಗಿ, ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕ ಅಶ್ವತ್ಥ ನಾರಾಯಣ ಹಾಗು ಜೆಡಿಎಸ್ ನಾಯಕರಾದ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು ಸೇರಿ ಹಲವರು ಭಾಗವಹಿಸಿದ್ದರು.

ಕಲ್ಲುತೂರಾಟ ಬಳಿಕ ಸಂಘರ್ಷದ  ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.



ಕಳೆದ ಸೆ.7ರ ರಾತ್ರಿ ಗಣೇಶ ವಿಸರ್ಜನೆಯ ವೇಳೆ ಪಟ್ಟಣದಲ್ಲಿ ಕಲ್ಲು ತೂರಾಟ ನಡೆದಿತ್ತು. ಈ ಸಂಬಂಧ ಈಗಾಗಲೇ ೨೨ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಪೊಲೀಸರೂ ಸಹ ಗಾಯಗೊಂಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಹಾಗೂ ಪ್ರತಿಭಟನಾ ನಿರತ ಹಿಂದೂಗಳ ಮೇಲೆ ಲಾಠಿಚಾರ್ಜ್ ನಡೆದ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ ರಾಜ್ಯ ಬಿಜೆಪಿ ಅಧ್ಯಕ್ಷರು ಶಾಸಕರಾದ  ವಿಜಯೇಂದ್ರ ಅವರು ಘಟನೆಯ ಸಂಬಂಧ ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ಈವರೆವಿಗೂ ಕೈಗೊಂಡಿರುವ ಕ್ರಮಗಳು ಶಾಂತಿಯುತ ಗಣೇಶೋತ್ಸವದ ಮೆರವಣಿಗೆಯ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಹಿನ್ನಲೆಯ ಕುರಿತು ಮಾಹಿತಿ ಪಡೆದರು.    ಕಾನೂನು ಸುವ್ಯವಸ್ಥೆ ವೈಫಲ್ಯದ ಕುರಿತು ಈ ಸಂಬಂಧ ಜಿಲ್ಲಾಡಳಿತಕ್ಕೆ ಪ್ರಶ್ನಿಸಿ ದರು.



ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷ ನಾಯಕರಾದ  ಆರ್ ಅಶೋಕ್  ವಿಧಾನಪರಿಷತ್ ವಿಪಕ್ಷ ನಾಯಕರಾದ  ಛಲವಾದಿ  ನಾರಾಯಣಸ್ವಾಮಿ ಮಾಜಿ ಸಚಿವರಾದ ಸಿ.ಟಿ. ರವಿ  ಯುವಮೋರ್ಚಾ ರಾಜ್ಯಾಧ್ಯಕ್ಷರಾದ ಧೀರಜ್ ಮುನಿರಾಜ್,ಸಂಸದರಾದ  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಜಿ ಸಚಿವರಾದ  ಸಿ.ಎಸ್.ಪುಟ್ಟರಾಜು ಶಾಸಕರಾದ  ಎಂ ಕೃಷ್ಣಪ್ಪ ರವರು,ರಾಜ್ಯ ಪ್ರಕೋಷ್ಠ  ಸಂಯೋಜಕರಾದ  ಎಸ್ ದತ್ತಾತ್ರಿ ರವರು, ಜಿಲ್ಲಾಧ್ಯಕ್ಷರಾದ  ಡಾ.ಇಂದ್ರೇಶ್ ಕುಮಾರ್ ರವರು, ಮುಖಂಡರಾದ  ಎಸ್.ಪಿ.ಸ್ವಾಮಿ ರವರು, ಇಂಡವಾಳು ಸಚ್ಚಿದಾನಂದ್ ರವರು,ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST