ನಾಯಕನಹಟ್ಟಿ : ಅಕ್ಟೋಬರ್ 02, 1869ರಂದು ಗುಜರಾತ್‌ನ ಪೋರಬಂದರಿನಲ್ಲಿ ಜನಿಸಿದ ಮೋಹನ್‌ದಾಸ ಕರಮಚಂದ ಗಾಂಧಿ ಬ್ರಿಟೀಶರ ಆಳ್ವಿಕೆಯ ವಿರುದ್ದ ಅಹಿಂಸೆಯ ಹೋರಾಟ ಮಾಡಿ ಭಾರತಕ್ಕೆ ಸ್ವತಂತ್ರ್ಯವನ್ನು ತಂದುಕೊಡುವಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು ಎಂದು ಪ.ಪಂ. ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಹೇಳಿದರು.
ಪಟ್ಟಣದ ಪಂಚಾಯಿತಿ ಕಾರ್ಯಾಲಯದಲ್ಲಿ 156ನೇ ಮಹತ್ಮಾಗಾಂಧಿ ಜಯಂತಿ ಮತ್ತು ಲಾಲ್‌ಬಹದ್ದೂರ್ ಶಾಸ್ತಿçಯವರ ಜಯಂತಿಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ಅಥವಾ ಬಾಪೂ ಎಂದು ಪ್ರೀತಿಯಿಂದ ಕರೆಯಲ್ಪಡುವ ಮೋಹನ್‌ದಾಸ್ ಕರಮಚಂದ ಗಾಂಧಿ ಅವರು ಭಾರತದ ಪ್ರಮುಖ ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕ ಅಸಹಕಾರ ಚಳುವಳಿ, ಕ್ಷಿಟ್ ಇಂಡಿಯಾ ಚಳುವಳಿ, ಖಿಲಾಫತ್‌ಚಳುವಳಿ, ಉಪ್ಪಿನ ಸತ್ಯಗ್ರಹ ಮೊದಲಾದ ಚಳುವಳಿಗಳನ್ನು ನಡೆಸಿ ತಮ್ಮ ಶಾಂತಿಯುತ ಹಾಗೂ ಅಹಿಂಸಾತ್ಮಕ ಹೋರಾಟದ ಮೂಲಕ ಮಹಾತ್ಮಗಾಂಧಿಯವರು ದೇಶದ ಮೂಲೆ-ಮೂಲೆಯಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡರು ಎಂದು ಅವರು ಮಾತನಾಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್ ಮಾತನಾಡಿ ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆಯ ಮೂಲಕ ಜಗತ್ತಿನ ಮಾನವ ಗೆದ್ದ ಮಹಾತ್ಮರಿವರು. ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಎಂದೆಂದಿಗೂ ಅಮರ, ಇಡೀ ಪ್ರಪಂಚವೇ ಮಹಾತ್ಮ ಗಾಂಧೀಜಿಯವರನ್ನು ಕೊಂಡಾಡುತ್ತಿದೆ. ಸ್ವತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರು ಎಂದು ಹೇಳಿದರು.
ಪಟ್ಟಣ ಪಂಚಾಯಿತಿಯ 9ನೇ ವಾರ್ಡ್ನ ಸದಸ್ಯರಾದ ಜೆ.ಆರ್.ರವಿಕುಮಾರ್ ಮಾತನಾಡಿ ಗಾಂಧಿ ಜಯಂತಿ ಭಾರತದ ರಾಷ್ಟಿçÃಯ ಹಬ್ಬ ರಾಷ್ಟçಪಿತ ಮಹಾತ್ಮ ಗಾಂಧಿಯವರ ಜನ್ಮ ದಿನವನ್ನು ಗಾಂಧಿ ಜಯಂತಿಯೆಂದು ಆಚರಿಸಲಾಗುತ್ತದೆ. ಸ್ವತಂತ್ರಕ್ಕಾಗಿ ಹೋರಾಟ ಮಾಡಿದ ಅವರು ಜಗತ್ತಿನಲ್ಲಿ ಶಾಂತಿ, ಅಹಿಂಸೆ ಹೋರಾಟದ ವಿಚಾರ ಬಂದಾಗ ನೆನಪಾಗುವುದೇ ರಾಷ್ಟçಪಿತ ಬಾಪು, ಪ್ರತಿಯೊಬ್ಬರೂ ಮಹಾತ್ಮಗಾಂಧಿಯವರ ಜೀವನದ ಆಶಯಗಳನ್ನು ಪಾಲಿಸಬೇಕಾಗಿದೆ. ಬ್ರಿಟೀಶ್ ಆಡಳಿತದ ವಿರುದ್ಧ ರಾಷ್ಟಿçÃಯ ಸ್ವಾತಂತ್ರ್ಯ ಹೋರಾಟವನ್ನು ಮುನ್ನೆಡಿಸಿ ರಾಷ್ಟçಪಿತ ಎನಿಸಿಕೊಂಡವರು ಮಹಾತ್ಮಗಾಂಧೀಜಿ. ಗಾಂಧೀಜಿಯವರ ರಾಜಕೀಯ ಜೀವನವು ದಕ್ಷಿಣ ಆಫ್ರೀಕಾದಲ್ಲಿ ಪ್ರಾರಂಭವಾಯಿತು. 1916ರಲ್ಲಿ ಅವರು ಭಾರತಕ್ಕೆ ಮರಳಿದರು ಮತ್ತು ರಾಷ್ಟ್ರೀಯ ಸ್ವಾತಂತ್ರ್ಯಹೋರಾಟದ ನಾಯಕತ್ವವನ್ನು ವಹಿಸಿಕೊಂಡರು. ಮಹಾತ್ಮ ಗಾಂಧೀಜಿಯವರು ಧೂಮಪಾನ, ಮಧ್ಯಪಾನ, ಅಶ್ಪುಶ್ಯತೆ, ತಮ್ಮ ಮಾಂಸಆಹಾರವನ್ನು ವಿರೋಧಿಸಿದರು.
ಪ.ಪಂ. ಸದಸ್ಯ ಜಾಗನೂರಹಟ್ಟಿ ಮಂಜುನಾಥ ಮಾತನಾಡಿ ಸ್ವಾತಂತ್ರ್ಯವನ್ನು ಸಾಧಿಸುವವರೆಗೂ ತಮ್ಮ ಜೀವನದದುಕ್ಕೂ ಬ್ರಿಟೀಶ್‌ರ ಆಡಳಿತದ ವಿರುದ್ಧ ಸಂಪೂರ್ಣ ತಾಳ್ಮೆ ಮತ್ತು ಧೈರ್ಯದಿಂದ ಹೋರಾಟ ಮಾಡಿದರು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶ್ರೀ ಕಾಂತ್ ಉಪಾಧ್ಯಕೆ ಬೋಸಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ಗುರುಶಾಂತಮ್ಮ, ಸುನಿತಮುದಿಯಪ್ಪ, ಪ.ಪಂ. ಸದಸ್ಯ ಜಾಗನೂರಹಟ್ಟಿ ಮಂಜುನಾಥ, ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಪೌರಕಾರ್ಮಿಕರು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇದ್ದರು.