ಬಳ್ಳಾರಿ : ಸಾಹಿತ್ಯದ ಎಲ್ಲಾ ಬಗೆಗಳಲ್ಲಿ ನಾಟಕವೇ ಹೆಚ್ಚು ರಮ್ಯವಾಗಿರುತ್ತದೆ ಮತ್ತು ಪ್ರಕಾಶಮಾನವಾಗಿ ಸರ್ವರಿಗೂ ವಿಷಯಗಳನ್ನು ತಲುಪಿಸುವಲ್ಲಿ ಸತತ ಪ್ರಯತ್ನ ಪಡುತ್ತಿರುತ್ತದೆ ಇಂತಹ ನಾಟಕ ನಮ್ಮ ನಿಮ್ಮೆಲ್ಲರ ಸಾಂಸ್ಕೃತಿಕ ಪರಂಪರೆಯ ನಮ್ಮ ಮುಂದೆ ಕನ್ನಡಿಯಾಗಿ ಬಂದಿದೆ ಎಂದು ರಂಗ ಜಂಗಮ ಸಂಸ್ಥೆ ಡಿ.ಕಗಲ್ಲು ಹಾಗೂ ಅಲಾಪ್ ಸಂಗೀತ ಕಲಾ ಟ್ರಸ್ಟ್ ಬಳ್ಳಾರಿ ಎರಡು ದಿನಗಳ ಕಾಲ ಹಮ್ಮಿಕೊಂಡ ಎರಡನೇ ದಿನದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಮರೋಪ ಸಮಾರಂಭದ ನುಡಿಯನ್ನು ಪಿ ಗಾದೆಪ್ಪ ಮಹಾಪೌರರು ಬಳ್ಳಾರಿ ಇವರು ಮಾತನಾಡಿದರು.
ಸಂಗೀತ ನೃತ್ಯ ನಾಟಕ ಈ ವಿಷಯಗಳ ಬೆಳವಣಿಗೆಗೆ ಸ್ಥಳೀಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುದಾನಗಳನ್ನ ಮತ್ತೆ ಸಹಕಾರವನ್ನು ನೀಡುವ ಮೂಲಕ ಅವುಗಳನ್ನು ಬೆಳೆಸುವ ಪ್ರಯತ್ನ ಮಾಡಬೇಕೆಂದು ಎಂದು ಡಾ. ನಿಷ್ಟಿ ರುದ್ರಪ್ಪ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಇವರು ಮಾತನಾಡಿದರು.
ಪ್ರತಿ ವರ್ಷ ಮಹಾನಗರ ಪಾಲಿಕೆಯಿಂದ ಸ್ಥಳೀಯ ಕಲಾವಿದರು ಇತರ ಪ್ರಕಾರಗಳಲ್ಲಿ ಗುರುತಿಸಿ ಪ್ರಶಸ್ತಿಗಳನ್ನ ನೀಡುವ ಒಂದು ಪರಿಪಾಠವನ್ನು ಕೂಡ ಹಮ್ಮಿಕೊಳ್ಳಬೇಕು ಎಂಬುದಾಗಿ ತಿಳಿಸಿದರು
ಮಾತು ಮತ್ತು ಕ್ರಿಯೆ ತಿಳುವಳಿಕೆ ಮತ್ತು ಅನುಭವ ಇವುಗಳ ನಡುವಿನ ಸಂಬಂಧವನ್ನು ತಿಳಿಯಬೇಕಾದರೆ ರಂಗಭೂಮಿಯ ನಾಟಕಗಳನ್ನು ನಾವು ನೋಡುವ ಮತ್ತು ಅಭ್ಯಾಸ ಮಾಡುವ ಹಾಗೂ ಪ್ರದರ್ಶನಗಳ ಶೈಲಿಯನ್ನು ನಾವು ಗಮನಿಸುತ್ತಾ ಹೋಗಬೇಕಾಗುತ್ತದೆ ಹಾಗಾಗಿ ರಂಗಭೂಮಿ ಸಾಹಿತ್ಯದ ವಿಚಾರ ಪ್ರಕಾರಗಳಲ್ಲಿ ಭಿನ್ನವಾಗಿ ನಿಲ್ಲುತ್ತದೆ ಎಂಬುದನ್ನ ಕನ್ನಡಪ್ರಭ ವರದಿಗಾರರಾದ ಕೆ. ಎಂ ಮಂಜುನಾಥ್ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆ ತನ್ನದೇ ಆದ ಒಂದು ಸಾಂಸ್ಕೃತಿಕ ಪರಂಪರೆಯನ್ನು ಕನ್ನಡ ನಾಡಿಗೆ ನೀಡಿರುವ ಸಂದರ್ಭದಲ್ಲಿ ಪ್ರಸ್ತುತ ವರ್ತಮಾನ ಕಾಲದಲ್ಲಿ ಇಂತಹ ನಾಟಕಗಳ ಸಂಯೋಜನೆ ಆಯೋಜನೆ ಬಹಳ ಮುಖ್ಯವಾಗುತ್ತದೆ ಆ ರಂಗ ಪರಂಪರೆ ಬೆಳೆಯಲು ಎಂಬುದಾಗಿ ಶಶಿಧರ್ ಮೇಟಿ ಯವರು ಮಾತನಾಡಿದರು.
ಭಾಷೆಯನ್ನು ಭಾವುಕರಾಗಿ ಅಭಿಮಾನ ಪೂರ್ವಕವಾಗಿ ವ್ಯಕ್ತಿತ್ವದ ದರ್ಶನ ನೀಡುವಲ್ಲಿ ವೈಜ್ಞಾನಿಕವಾಗಿ ನಾವು ಎಷ್ಟೇ ಬೆಳೆದ್ರು ನಮ್ಮ ಸಂಬಂಧಳಿಗೆ ಮೌಲ್ಯಗಳ ಆಯಾಮ ನೀಡುವ ರಂಗಭೂಮಿ ನಮ್ಮ ನಿಮ್ಮೆಲ್ಲರಿಗೂ ಹತ್ತಿರವಾಗುತ್ತದೆ ಹಾಗಾಗಿ ನಾಟಕಗಳಿಗೆ ತನ್ನದೇ ಆದ ವಾಸ್ತವದ ಪ್ರಜ್ಞೆಯೊಂದಿಗೆ ನಮ್ಮ ಮುಂದೆ ಬಂದು ನಿಂತಾಗ ಅಥವಾ ಸಮಕಾಲೀನ ನಾಟಕ ರಂಗ ಪರಂಪರೆಗೆ ಪ್ರತಿ ಕೃತಿಗಳಾಗಿ ಜವಾಬ್ದಾರಿಯನ್ನ ನಮಗೆ ತಿಳಿಸುವಲ್ಲಿ ತುಂಬಾ ಸಹಾಯ ಮಾಡುತ್ತದೆ ಎಂಬುದಾಗಿ ಸಮರೋಪ ಅಧ್ಯಕ್ಷತೆಯನ್ನು ವಹಿಸಿದ್ದ ಪನ್ನರಾಜ್ ಮಾತನಾಡಿದರು
ನಂತರ ಕಾರ್ಯಕ್ರಮದಲ್ಲಿ ಗೌರವ ಸನ್ಮಾನವನ್ನು ವಿಠ್ಠಲ್ ರಾವ್ ಸೋನಾರೆ ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕು ನಿವೃತ್ತ ಪ್ರಬಂಧಕರು ಅವರಿಗೆ ಮತ್ತು ಆಲಂಬಾಷ ಉಪನ್ಯಾಸಕರು ಇವರಿಗೆ ಸನ್ಮಾನ ನೀಡಿ ಗೌರವಿಸಲಾಯಿತು.
ವೇದಿಕೆ ಮೇಲೆ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಅಧ್ಯಕ್ಷ ಶ್ರೀ ಯಲ್ಲನಗೌಡ ಶಂಕರ ಬಂಡೆ, ಹಳ್ಳಿ ಮನೆ ಹೋಟೆಲ್ ಮಾಲಿಕರಾದ ಶ್ರೀ ದೊಡ್ಡಬಸಪ್ಪ ಉಪಸ್ಥಿತರಿದ್ದರು.
ಪ್ರಾರ್ಥನೆ ಗೀತೆಯನ್ನ ಕಲಬುರ್ಗಿ ರಂಗಾಯಣದ ನಟಿಯರಾದ ವಾಣಿಶ್ರೀ ಭಾಗ್ಯಶ್ರೀ ನೆರವೇರಿಸಿದರು. ಸ್ವಾಗತವನ್ನು ರಮಣಪ್ಪ ಭಜಂತ್ರಿ ನಿರೂಪಣೆಯನ್ನು ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ನೆರವೇರಿಸಿದರು
ಸಾಂಸ್ಕೃತಿ ಕಾರ್ಯಕ್ರಮಗಳು ಸಮೂಹ ನೃತ್ಯವನ್ನು ಸೂರ್ಯಕಲಾ ಟ್ರಸ್ಟ್ ಬಳ್ಳಾರಿ ಅಭಿಷೇಕ ನಿರ್ದೇಶನದಲ್ಲಿ ಮೂಡಿಬಂದಿತು.
ನಂತರ ಕಲ್ಬುರ್ಗಿ ರಂಗಾಯಣದಿಂದ ಕಾಲಚಕ್ರ ನಾಟಕ ಹುಲುಗಪ್ಪ ಕಟ್ಟಿಮನಿ ನಿರ್ದೇಶನದಲ್ಲಿ ಪ್ರದರ್ಶನ ಮಾಡಿ ಜನಮನ ಸೂರೆ ಗೊಳ್ಳುವ ಮೂಲಕ ಜನರ ಮನಸ್ಸು ಗೆಲ್ಲಲು ಯಶಸ್ವಿಯಾಯಿತು.