ಸಂಘದ ಪದಾಧಿಕಾರಿಗಳು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರವನ್ನು ಬಳ್ಳಾರಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ರವಾನಿಸಿದ್ದಾರೆ. ಜಿ.ಪಲ್ಲವಿ ವರ್ತನೆಯ ಕುರಿತು ತೀವ್ರ ಆಕ್ರೋಶ ಹಾಗೂ ಬೇಸರದೊಂದಿಗೆ ಮನವಿ ಸಲ್ಲಿಸಿರುವ ಮುಖಂಡರು ತಮ್ಮ ವಿರುದ್ಧ ಧ್ವನಿ ಎತ್ತಿದ 7 ಸಮುದಾಯದ ಮುಖಂಡರ ಮೇಲೆ ಸುಳ್ಳು ದೂರನ್ನು ದಾಖಲಿಸಿದ್ದಾರಂತೆ. ಇದು ಅವರ ಏಕಪಕ್ಷೀಯ, ಜವಾಬ್ದಾರಿಯುತವಲ್ಲದ ಆಡಳಿತ ಶೈಲಿಯ ದೃಢ ಸಾಕ್ಷಿಯಾಗಿದೆ.
ಪ.ಜಾ., ಪ.ಪಂ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ನಮ್ಮ ಸಮುದಾಯದ ಬಗ್ಗೆ ನೀಡಿದ ಅನಾಚಾರ ಹೇಳಿಕೆ ಹಾಗೂ ಅಕ್ರಮ ದೂರು ಹಿಂಪಡೆಯುವAತೆ ಒತ್ತಾಯಿಸಿದ ಮುಖಂಡರು ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು. ನಿಗಮದ ಅಧ್ಯಕ್ಷರ ಸ್ಥಾನಕ್ಕೆ ಅವರು ಯೋಗ್ಯರಾಗಿಲ್ಲವೆಂಬುದು ಸ್ಪಷ್ಟವಾಗಿದೆ. ಅವರ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳಬೇಕು. ಮಾಜಿ ಸಚಿವರಾದ ಹೆಚ್. ಆಂಜನೇಯರವರಿಗೆ ಹಾಗೂ 49 ಅಲೆಮಾರಿ ಸಮುದಾಯದ ಮುಖಂಡರ ಮುಂದೆ ಬಹಿರಂಗ ಕ್ಷಮೆಯಾಚಿಸಬೇಕು. ಬಸವರಾಜ ನಾರಾಯಣಕರ್, ಶಿವಕುಮಾರ.ವೈ, ಲೋಹಿತಾಕ್ಷ, ಚಾವಡೆ ಲೋಕೇಶ್, ವೀರೇಶ, ಸುಭಾಷ್ ಚವಣ್ ಮತ್ತು ಶಾಂತಕುಮಾರ ಈ ಏಳು ಜನರ ವಿರುದ್ಧ ಹೂಡಿದ್ದ ಮೊಕದ್ದಮೆಯನ್ನು ವಾಪಸ್ಸು ಪಡೆದು ಇವರ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಸಂಬಂಧಪಟ್ಟ ಸಚಿವರು ಈ ಎಲ್ಲಾ ಕ್ರಮಗಳನ್ನು ತಕ್ಷಣ ಕೈಗೊಳ್ಳದಿದ್ದಲ್ಲಿ, ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ 49 ಅಲೆಮಾರಿ ಸಮುದಾಯದ ಮುಖಂಡರು ತೀವ್ರ ಹೋರಾಟ ನಡೆಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿಯೂ ಈ ವೇಳೆ ಹೇಳಿದರು.
ಜಿಲ್ಲಾ ಗೌರವಾಧ್ಯಕ್ಷ ಡಿ.ಮಾದೇವಪ್ಪ, ಜಿಲ್ಲಾಧ್ಯಕ್ಷ ಡಾ. ಜಂಬುದನ್, ಜಿಲ್ಲಾ ಉಪಾಧ್ಯಕ್ಷ ಡಿ.ಎರಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಿ.ರಂಗಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಡಿ. ರಾಮಯ್ಯ, ಜಂಟಿ ಕಾರ್ಯದರ್ಶಿಗಳು ಡಿ. ರಾಮಸ್ವಾಮಿ, ಖಜಾಂಚಿ ಡಿ. ಲಕ್ಷ್ಮಣ, ಸಂಘಟನಾ ಕಾರ್ಯದರ್ಶಿ ಡಿ.ಆರ್.ಸುಂಕಪ್ಪ, ಸಮಾಜದ ಹಿರಿಯ ಮುಖಂಡರಾದ ಡಿ.ಮುನಿಸ್ವಾಮಿ, ಡಿ.ಗೋವಿಂದ, ಡಿ.ಶಂಕ್ರಪ್ಪ, ಡಿ.ವೆಂಕಟೇಶ್, ಡಿ. ಸೂರ್ಯನಾರಾಯಣ ಸದಸ್ಯರಾದ ಡಿ.ಬಸವರಾಜ, ಡಿ.ತಿಮ್ಮಯ್ಯ, ಡಿ.ಹರಿಕೇರ್ ನಾರಾಯಣ ಮತ್ತು ಡಿ.ಶಿವು ಇನ್ನಿತರರು ಈ ನಿಯೋಗದಲ್ಲಿ ಇದ್ದರು.