LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಿ.ಪಲ್ಲವಿ ಅವರನ್ನು ಅಮಾನತ್ತುಗೊಳಿಸಿ - ಮುಖ್ಯಮಂತ್ರಿಗಳಿಗೆ ಒತ್ತಾಯ

ಬಳ್ಳಾರಿ: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿರವರು ನಮ್ಮ ಅಲೆಮಾರಿ ಸಮುದಾಯದವರ ಮೇಲೆ ನೀಡಿರುವ ಹೇಳಿಕೆ ಹಾಗೂ ದೂರನ್ನು ಹಿಂಪಡೆದು ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಸಂಘಟನೆಗಳ ಮಹಾ ಒಕ್ಕೂಟವಾದ ಕರ್ನಾಟಕ ರಾಜ್ಯ ಎಸ್‌ಸಿ. ಎಸ್‌ಟಿ. ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡಿದೆ.

 

ಬಳ್ಳಾರಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲೆಯ ಕುರುಗೋಡು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಕುರಿತು ಪತ್ರ ಬರೆದಿದ್ದು, ಮಾಜಿ ಸಚಿವರಾದ ಹೆಚ್. ಆಂಜನೇಯ ನೇತೃತ್ವದಲ್ಲಿ ಅಲೆಮಾರಿಗಳ ರಾಜ್ಯ ಸಮ್ಮೇಳಕ್ಕೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಗೆ 49 ಅಲೆಮಾರಿ ಸಮುದಾಯದ ಮುಖಂಡರು ಹಾಗೂ ರಾಜ್ಯಾಧ್ಯಕ್ಷರನ್ನು ಮಾತ್ರ ಅಹ್ವಾನಿಸಿತ್ತು. ಆಹ್ವಾನ ಇಲ್ಲದಿದ್ದರೂ ನಿಗಮದ ಅಧ್ಯಕ್ಷರು, ಮಾಜಿ ಸಚಿವ ಹೆಚ್. ಆಂಜನೇಯ ಅವರು ನಡೆಸುವಂತಹ ಸಭಾ ಮಂಟಪಕ್ಕೆ ಬಂದು ವಿನಾಕಾರಣ ಗೊಂದಲವನ್ನುಂಟು ಮಾಡಿದ್ದಾರೆ. ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ಒತ್ತಾಯ ಮಾಡಿದರು.



ಮಾಜಿ ಸಚಿವರಿಗೂ ಹಾಗೂ ಸಭೆಯನ್ನು ಆಯೋಜಿಸಿರುವಂತಹ ಅಲೇಮಾರಿ ಸಮುದಾಯದ ಮುಖಂಡರಿಗೂ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಏಕಪಕ್ಷೀಯವಾಗಿ ಕೆಲಸ ಮಾಡುವುದರ ವಿರುದ್ಧ ಧ್ವನಿ ಎತ್ತಿದ 7 ಜನರ ಸಮುದಾಯದ ಮುಖಂಡರ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ. ನಿಗಮದ ಅಧ್ಯಕ್ಷರು ಅಲೆಮಾರಿ ಸಮುದಾಯದ ಒಬ್ಬ ಜವಾಬ್ದಾರಿ ಮುಖಂಡರು ಆದರೂ ಕೂಡ ವಿಕ ಪಕ್ಷೀಯವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಜಗಜ್ಜಾಹೀರಾಗಿದೆ.

 

ಅವರು ಏಕಪಕ್ಷೀಯವಾಗಿ ಕೆಲಸ ಮಾಡಿರುವ ದಾಖಲೆಗಳು ನಮ್ಮ ಹತ್ತಿರ ಇವೆ. ಅತೀ ಶೀಘ್ರದಲ್ಲಿ ಅವರನ್ನು ನಿಗಮದ ಅಧ್ಯಕ್ಷರ ಸ್ಥಾನದಿಂದ ವಜಾಗೊಳಿಸಿ ನಿಗಮದ ಅಧ್ಯಕ್ಷರು ನಡೆಯುವ ಸಭೆಯನ್ನು ಅಡ್ಡಿ ಮಾಡಿದ ಸಲುವಾಗಿ ಮಾಜಿ ಸಚಿವರಾದ  ಹೆಚ್. ಆಂಜನೇಯ ಅವರಿಗೆ ಹಾಗೂ ನಮ್ಮ ೪೯ ಅಲೇಮಾರಿ ಸಮುದಾಯಕ್ಕೂ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಪ್ರಕರಣ ದಾಖಲಿಸಿರುವ ಬಸವರಾಜ ನಾರಾಯಣಕರ್, ಲೋಹಿತಾಕ್ಷ, ಚಾವಣಿ ಲೋಕೇಶ, ವೀರೇಶ, ಶಿವು, ಸುಭಾಶ್ ಚವ್ಹಾಣ್ ಮತ್ತು ಶಾಂತಕುಮಾರ ರವರ ಮೇಲೆ ಮಾಡಿರುವ ಸುಳ್ಳು ಆರೋಪದ ದೂರನ್ನು ಹಿಂಪಡೆಯಬೇಕೆಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

 

ಜಿ.ಪಲ್ಲವಿ ಅವರು ಈ ಸಮಾಜ ಸೇವಕರ ವಿರುದ್ಧ ನೀಡಿರುವ ಪ್ರಕರಣವನ್ನು ತ್ವರಿತವಾಗಿ ಹಿಂಪಡೆದು ನಿಗಮದ ಆವರಣದಲ್ಲಿಯೇ ಮಾಜಿ ಸಚಿವರಾದ ಹೆಚ್.ಅಂಜನೇಯ ಅವರಿಗೆ ಹಾಗೂ 7 ಜನರನ್ನು ಸನ್ಮಾನಿಸಿ ಕ್ಷಮೆಯಾಚಿಸಬೇಕು. ಒಂದು ವೇಳೆ ಕ್ಷಮೆ ಯಾಚಿಸಲು ಹಿಂದೇಟು ಹಾಕಿದರೆ ರಾಜ್ಯಾಧ್ಯಾಂತ ವಾಸಿಸುವ 49 ಅಲೆಮಾರಿ ಸಮುದಾಯದ ಎಲ್ಲರೂ ರಾಜ್ಯ ರಾಜಧಾನಿಯಲ್ಲಿ ಧರಣಿ ಹಮ್ಮಿಕೊಳ್ಳಲಾಗುತ್ತದೆ. ಅಲೆಮಾರಿಗಳು ಒಂದೊತ್ತಿನ ಊಟಕ್ಕೂ ಪರದಾಡುವವರು ಎಷ್ಟು ದಿನ ಧರಣಿ ಮಾಡುತ್ತೇವೆಯೋ ಧರಣಿ ಮಾಡಲು ಬಂದಂತಹ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬದ ವೆಚ್ಚದ ಜವಾಬ್ದಾರಿ ಸರ್ಕಾರವೇ ಭರಿಸಬೇಕಾಗುತ್ತದೆಂದು ಎಚ್ಚರಿಸಿ, ಮನವಿ ಸಲ್ಲಿಸಿದರು.

 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ, ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ವೈ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ರಂಗಯ್ಯ, ಜಿಲ್ಲಾ ಕಾರ್ಯಾಧ್ಯಕ್ಷ ರಾಮಾಂಜಿನಿ, ಜಿಲ್ಲಾ ಖಜಾಂಚಿ ಕೆ.ಚನ್ನಬಸಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಡಿ.ರಾಮಯ್ಯ, ವೆಂಕಟೇಶ್ ಮತ್ತು ಜಿಲ್ಲಾ ಜಂಟಿ ಕಾರ್ಯದಶಿ ಶೈಲಾ ಸೀತಾರಾಮ್, ವಿವಿಧ ಸಮುದಾಯಗಳ ಮುಖಂಡರಾದ ವೈ.ಶಂಕ್ರಪ್ಪ, ಹನುಮಪ್ಪ, ಚೌಡಪ್ಪ, ರಾಮುಲು, ತೋಳಪ್ಪ, ಹನುಮಂತಪ್ಪ ಇನ್ನಿತರರು ಈ ನಿಯೋಗದಲ್ಲಿದ್ದರು. 
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST