ಬೆಂಗಳೂರು : ಸರ್ಕಾರಿ ಶಾಲೆಗಳ ಮಕ್ಕಳ ಮುನ್ನಡೆಗೆ ನಮ್ಮ ನಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಸರ್ಕಾರಿ ಶಾಲಾ ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಉಚಿತ ನೋಟ್ ಬುಕ್ ಮತ್ತು ವೃದ್ಧರಿಗೆ ಕಂಬಳಿ ವಿತರಣೆ ಮಾಡಲಾಯಿತು.
ಸಂಜಯ್ ಗಾಂಧಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಲಗ್ಗೆರೆಯ ಶ್ರೀ ಜಯದುರ್ಗ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ಅಭಯ ಸಮಾಜ ಸೇವಾ ಸಂಘ ಸಹಕಾರದೊಂದಿಗೆ ಶಾಲಾ ಆವರಣದಲ್ಲಿ ಮೂರನೇ ವರ್ಷದ 70 ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ಅಧ್ಯಕ್ಷರಾದ ಜಯಲಕ್ಷ್ಮೀ, ಮಂಜೇಗೌಡ ಅವರು ಮಕ್ಕಳಿಗೆ ಉಚಿತ ನೋಟ್ಬುಕ್ ವೃದ್ಧರಿಗೆ ಕಂಬಳಿ ವಿತರಿಸಿದರು.
ಮಂಜುನಾಥ್ ಶೃಂಗೇರಿ, ಕೃಷ್ಣಯ್ಯ, ಅಕ್ಷತಾ ಅನಿತಾ, ಚನ್ನಬಸಣ್ಣ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.