ಈ ಕುರಿತು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮರಾಜು ಫೌಂಡೇಶನ್ ನ ರೂವಾರಿ ರಾಮರಾಜು ಅವರು, ಬಳ್ಳಾರಿಯ ಸ್ವಾಮಿ ವಿವೇಕಾನಂದ ರಕ್ತ ಕೇಂದ್ರದ ಸಹಯೋಗದಲ್ಲಿ ನಗರದ ಮೋಕಾ ರಸ್ತೆಯಲ್ಲಿರುವ ಕೆ ಆರ್ ಎಸ್ ಫಂಕ್ಷನ್ ಹಾಲ್ ನಲ್ಲಿ ಬೆಳಿಗ್ಗೆ 8 ರಿಂದ 5:30 ರವರೆಗೆ ಆಯೋಜಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಪ್ರತಿಯೊಬ್ಬ ದಾನಿಗಳಿಗೂ ಪ್ರಮಾಣ ಪತ್ರ ಹಾಗೂ ಹೆಲ್ಮೆಟ್ ಉಡುಗೊರೆಯಾಗಿ ನೀಡಲಾಗುತ್ತದೆ ಎಂದರು.

ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ರಾಮ ರಾಜು ಫೌಂಡೇಶನ್ ನ ಶ್ರೀರಾಮರಾಜು ಅವರು ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಪಠ್ಯಪುಸ್ತಕ ವಿತರಣೆ, ಶಾಲಾ ಗ್ರಂಥಾಲಯಗಳಿಗೆ ಪುಸ್ತಕ, ಕೋವಿಡ್ ಸಮಯದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ, ಸಸಿ ನೆಡುವಂತಹ ಹಲವಾರು ಸಮಾಜಮುಖಿ ಸೇವೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಮೂರನೇ ವರ್ಷದ ಅಂಗವಾಗಿ ಬೃಹತ್ ಉಚಿತ ರಕ್ತದಾನ ಶಿಬಿರ ಆಯೋಜಿಸಿರುವುದಾಗಿ ಹೇಳಿದರು.
ರಕ್ತದಾನಿಗಳು ಹೆಚ್ಚಿನ ಮಾಹಿತಿಗೆ ಶಿಬಿರದ ಉಸ್ತುವಾರಿ ಗಳಾದ ದಿವಾಕರ್ : 9845314624, ಪಂಡಿತ್ ಸ್ವಾಮಿ 7899914899, ವೀರೆಶ್ 9900684310 ಅರುಣ್ 8553116692. ಇವರನ್ನು ಸಂರ್ಪಕಿಸಬೇಕೆಂದು ಅವರು ತಿಳಿಸಿದರು.