LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಡಿಮೆ ಬೆಲೆಗೆ ಭೂಮಿ ಪಡೆದು ಮೋಸ : ಶಿವಮೂರ್ತಿ ಆರೋಪ

ನಾಯಕನಹಟ್ಟಿ : ಟಾಟಾ ಪವರ್ ಸೋಲಾರ್ ಕಂಪನಿಯವರು ದಲಿತರ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ 1 ಎಕರೆಗೆ 3 ರಿಂದ 4 ಲಕ್ಷದೊಳಗೆ ಭೂಮಿಯನ್ನು ಖರೀದಿಸಿ ದಲಿತರಿಗೆ ಮಹಾವಂಚನೆ ಮಾಡಿದ್ದಾರೆ ಎಂದು ರಾಜ್ಯ ಸಂಚಾಲಕರಾದ ಭೀಮನಕೆರೆ ಶಿವಮೂರ್ತಿ ಅರೋಪಿಸಿದ್ದಾರೆ.

 

ಸಮೀಪದ ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ಸೋಲಾರ್ ಕಂಪನಿಗೆ ಭೂಮಿಯನ್ನು ಕಳೆದುಕೊಂಡ ದಲಿತ ಕುಟುಂಬಗಳಿಗೆ ಟಾಟಾ ಪವರ್ ಕಂಪನಿಯಲ್ಲಿ ಉದ್ಯೋಗ ಕೊಡಬೇಕೆಂದು ಒತ್ತಾಯಿಸಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದರು.



ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು ಸವರ್ಣಿಯರ ಸಮುದಾಯಗಳ ಜಮೀನನ್ನು 1ಎಕರೆಗೆ 10ರಿಂದ 12 ಲಕ್ಷ ಹಣ ಕೊಟ್ಟು ಖರೀದಿಸಿದ್ದಾರೆ. ದಲಿತರ ಭೂಮಿ, ಸವರ್ಣಿಯರ ಭೂಮಿ ಎಂದು ತಾರತಮ್ಯ ಮಾಡಿದ ಕಂಪನಿಯವರ ವಿರುದ್ಧ ಹೋರಾಟ ಮಾಡುತ್ತೇವೆ. ಅತ್ಯಂತ ಕಡಿಮೆ ದರದಲ್ಲಿ ಭೂಮಿಯನ್ನು ಕಳೆದುಕೊಂಡ ಬೇಡರೆಡ್ಡಿಹಳ್ಳಿ ಗ್ರಾಮದ ದಲಿತರು ಈಗ ಬೀದಿ ಪಾಲಾಗಿದ್ದಾರೆ. ಅವರು ಜೀವನ ಮಾಡುವುದೇ ಕಷ್ಟಕರವಾಗಿದೆ. ಹಾಗಾಗಿ ಸದರಿ ಭೂಮಿಯ ಕುಟುಂಬದ ಸದಸ್ಯರಿಗೆ ನೌಕರಿಯನ್ನು ಕೊಡಬೇಕೆಂದು ಮನವಿ ಮಾಡಿಕೊಂಡರು.

 

ಕರ್ನಾಟಕ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎನ್.ಪ್ರಕಾಶ್ ಮಾತನಾಡಿ, ರಾಜ್ಯದ ಬಹುಪಾಲು ಸೋಲಾರ್ ಕಂಪನಿಯವರು ದಲಿತರ ಭೂಮಿಯನ್ನು ಕಬಳಿಸಿ ಸಣ್ಣ ಹಿಡುವಳಿದಾರರಾದ ದಲಿತರನ್ನು ಭೂ ಹಿಡುವಳಿಯಿಂದ ಒಕ್ಕಲೆಬ್ಬಿಸಿ ಅಮಾಯಕ ದಲಿತರನ್ನು ವಂಚಿಸಿರುತ್ತಾರೆ. ನಂತರವು ಕೂಡ ಸಾರ್ವಜನಿಕರು ಅನ್ಯಾಯದ ಬಗ್ಗೆ ನ್ಯಾಯ ಕೇಳುವಂತಿಲ್ಲ. ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮದ ದಲಿತರು ತಮ್ಮ ಇತಿಹಾಸದ ಬಗ್ಗೆ ಜ್ಞಾನವಿಲ್ಲದ ರಾಜಕೀಯದ ತಿಳುವಳಿಕೆ ಇಲ್ಲದ ಸಮುದಾಯಗಳ ಭೂಮಿಯನ್ನು ಟಾಟಾ ಪವರ್ ಕಂಪನಿಯವರು ಬೇಡರೆಡ್ಡಿಹಳ್ಳಿ ಗ್ರಾಮದ ಸರ್ವೇ ನಂ:77ರಲ್ಲಿ 10 ಕುಟುಂಬದವರ 34 ಎಕರೆ ಜಮೀನನ್ನು ಅತ್ಯಂತ ಕಡಿಮೆ ದರದಲ್ಲಿ ಭೂಮಿ ಖರೀದಿಸಿದ್ದಾರೆ. ಈ ರೀತಿ ತಾರತಮ್ಯವನ್ನು ಮಾಡಿ ವಂಚಿಸಿದ ಟಾಟಾ ಪವರ್ ಕಂಪನಿಯವರ ವಿರುದ್ಧ ತಾರತಮ್ಯದಿಂದ ಭೂಮಿಯನ್ನು ಖರಿದಿಸಿದ ದಲಿತರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.



ಈ ಸಂದರ್ಭದಲ್ಲಿ ಭೀಮನಕೆರೆ ಶಿವಮೂರ್ತಿ ರಾಜ್ಯ ಸಂಚಾಲಕರು ಚಿತ್ರದುರ್ಗ, ಬಿ.ಓ.ತಿರುಮಲೇಶ್ ಜಿಲ್ಲಾ ಸಂಘಟನ ಸಂಚಾಲಕರು ಚಿತ್ರದುರ್ಗ, ಎಂ.ರಾಧ ಜಿಲ್ಲಾ ಸಂಘಟನಾ ಸಂಚಾಲಕರು, ಎನ್.ಪ್ರಕಾಶ್ ಜಿಲ್ಲಾ ಸಂಚಾಲಕರು ಬೆಂಗಳೂರು, ಪಿ.ಜಯಣ್ಣ ಜಿಲ್ಲಾ ಸಂಚಾಲಕರು ಬೆಂಗಳೂರು, ಮಾರುತಿ ಕಡಬನಕಟ್ಟೆ ಜಿಲ್ಲಾ ಸಂಚಾಲಕ, ಮಂಜುನಾಥ ವರವು ಜಿಲ್ಲಾ ಸಂಘಟನ ಸಂಚಾಲಕರು, ಎಂ.ರಾಜಣ್ಣ ತಾಲೂಕು ಸಂಚಾಲಕರು, ಸತೀಶ ಬೂದಿಹಳ್ಳಿ, ಪಾತಲಿಂಗಪ್ಪ, ಪುಟ್ಟಮ್ಮ, ಮಂಜಮ್ಮ, ತಿಮ್ಮಕ್ಕ, ಮೈಲಾರಿಗರಕಟ್ಟೆ ಹಾಗೂ ಬೇಡರೆಡ್ಡಿಹಳ್ಳಿ ಗ್ರಾಮದ ಮನ್ನೆಕೋಟೆ ಮಹಿಳೆಯರು, ಯುವಕರು, ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST