ಮೊಳಕಾಲ್ಮುರು : ಅತೀ ಹಿಂದುಳಿದ ಪ್ರದೇಶವಾದ ಮೊಳಕಾಲ್ಮುರು ತಾಲೂಕು ಇಂದು ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ತಾಲೂಕಿನ ಜನತೆಗೆ, ಉಪನ್ಯಾಸಕರುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳ ಸಂತೋಷದಾಯಕವಾಗಿದೆ. ಇಂತಹ ಪ್ರಶಸ್ತಿ ಪಡೆಯಲು ತಾಲೂಕಿನ ವಿದ್ಯಾರ್ಥಿಗಳು ಪ್ರಾಚಾರ್ಯರು ಲಿಂಗೇಶ್ವರ ಹಾಗೂ ತರಬೇತಿ ನೀಡಿರುವಂತಹ ಉಪನ್ಯಾಸಕರಾದ ವಿಶ್ವ ರಾಜ್ ರವರ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿದೆ.

ಚಿತ್ರದುರ್ಗದ ವೀರವನಿತೆ ಓಬವ್ವ ಸ್ಟೇಡಿಯಂನಲ್ಲಿ ನಡೆದಂತಹ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಮೊಳಕಾಲ್ಮುರು ತಾಲ್ಲೂಕಿನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಹುಶಃ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳ ಸುರಿಮಳೆಯೇ ಮಾಡಿದ್ದಾರೆ.

ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ 14ನೇ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು ದಾವಣಗೆರೆ ವಿಶ್ವವಿದ್ಯಾಲಯ ತಂಡದ ಆಯ್ಕೆ 2025-26ರಲ್ಲಿ ಒಟ್ಟು 124 ಕಾಲೇಜುಗಳು ಭಾಗವಹಿಸಿದ ಕ್ರೀಡಾಕೂಟದಲ್ಲಿ ನಮ್ಮ ಮೊಳಕಾಲ್ಮುರು ತಾಲ್ಲೂಕಿನ ವಿದ್ಯಾರ್ಥಿಗಳು ಪ್ರತಿ ಸ್ಪರ್ಧಿಗಳಾಗಿ ಭಾಗವಹಿಸಿ ಒಟ್ಟು 50 ಅಂಕಗಳೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದ ಸಮಗ್ರ ಪ್ರಶಸ್ತಿ ಮತ್ತು ಮಹಿಳೆಯರ ವಿಭಾಗದ ಸಮಗ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಕಾಲೇಜಿನ ಅಖಿಲಾ ಬಿಕಾಂ- 1500ಮೀ ಪ್ರಥಮ, ಸಂತೋಷ್ - 10,000ಮೀ ಪ್ರಥಮ
, ದರ್ಶನ್ - ದ್ವಿತೀಯ, ಆಕಾಶ್ - ಹೈ ಜಂಪ್ - ದ್ವಿತೀಯ
, ಚಂದ್ರ ಕಲಾ- 10.000ಮೀ - ತೃತೀಯ
, 5 ಕೀ ಮೀ ನಡಿಗೆ - ಚಂದ್ರಿಕ - ಪ್ರಥಮ
ಶಿವಮ್ಮ - ದ್ವಿತೀಯ, 20 ಕೀ ಮೀ ನಡಿಗೆ - ತಿಪ್ಪೇಶ್ - ದ್ವಿತೀಯ, ದರ್ಶನ್ _ ತೃತೀಯ
,ಶಾಂತಮ್ಮ - 800ಮೀ - ತೃತೀಯ, ಮುರುಳಿ - ಟ್ರಿಪಲ್ ಜಂಪ್ - ತೃತೀಯ, 400*100 ಮಹಿಳಾ ರಿಲೇ - ಪ್ರಥಮ- ತಿಪ್ಪೇಶ್ ಬಿ - 5000ಮೀ - ಪ್ರಥಮ, ಚಂದ್ರಕಲಾ - 5000ಮೀ - ತೃತೀಯ, 21 ಕೀ ಮೀ ಹಾಫ್ ಮ್ಯಾರಥನ್ -, ದರ್ಶನ್ - ಪ್ರಥಮ
ಸಂತೋಷ್ _ ದ್ವಿತೀಯ, 400*100 ಪುರುಷ ರಿಲೇ - ಪ್ರಥಮ- ಒಟ್ಟು 25ಕ್ಕೂ ಅಧಿಕ ಪದಕಗಳನ್ನು ಗೆದ್ದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಎನ್ ವೈ ಗೋಪಾಲಕೃಷ್ಣ ಅವರು ಹಾಗೂ ಸದಸ್ಯರು ಅಭಿನಂದನೆ ತಿಳಿಸಿದ್ದಾರೆ. ಕಾಲೇಜಿನ ಪ್ರಾಂಶಪಾಲರಾದ ಲಿಂಗೇಶ್ವರ ವೈ ಮತ್ತು ಕ್ರೀಡಾ ಸಂಚಾಲಕರಾದ ವಿಶ್ವರಾಜ್ ಅವರು ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಪಟ್ಟಣದ ಬಸ್ ನಿಲ್ದಾಣದಿಂದ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದರು.

ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳು ವಿಶ್ವ ವಿದ್ಯಾಲಯ ಮಟ್ಟದಲ್ಲಿ ಮಟ್ಟದಲ್ಲಿ ಸಮಗ್ರ ಪ್ರಶಸ್ತಿ ಪಡೆದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಇಂತಹ ಪ್ರಶಸ್ತಿ ಪಡೆಯಲು ಸಹಕರಿಸಿದ ಅಧ್ಯಕ್ಷರು ಹಾಗೂ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರಿಗೆ ಧನ್ಯವಾದಗಳು ತಿಳಿಸುತ್ತೇವೆ.
ಲಿಂಗೇಶ್ವರ ಪ್ರಾಚಾರ್ಯರು ಪ್ರಥಮ ದರ್ಜೆ ಕಾಲೇಜ್ ಮೊಳಕಾಲ್ಮುರು.
ನಮ್ಮ ತಾಲ್ಲೂಕಿನಲ್ಲಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ ಆದರೆ ಅಂತಹ ಕ್ರೀಡಾಪಟುಗಳನ್ನು ಗುರುತಿಸುವ ಕೆಲಸ ನಾವುಗಳು ಮಾಡಬೇಕು. ನಮ್ಮ ಕಾಲೇಜಿನ ಅನೇಕ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಶಕ್ತಿ ಸಾಮರ್ಥ್ಯವಿದೆ. ಈ ಕ್ರೀಡಾಕೂಟದಲ್ಲಿ ಒಟ್ಟು 124 ಕಾಲೇಜ್ ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಉತ್ತಮ ಸಲಕರಣೆಗಳು. ಈ ಸಮಗ್ರ ಪ್ರಶಸ್ತಿ ನಮಗೆ ಜವಾಬ್ದಾರಿ ಹೆಚ್ಚು ಮಾಡಿದೆ. ಮುಂದಿನ ದಿನಗಳಲ್ಲಿ ಇದನ್ನೇ ಮುಂದುವರೆಸಲು ಶ್ರಮ ವಹಿಸುತ್ತೇವೆ.
ವಿಶ್ವ ರಾಜ್, ಕ್ರೀಡಾ ಸಂಚಾಲಕರು ಹಾಗೂ ಉಪನ್ಯಾಸಕರು