ಸಿರುಗುಪ್ಪ : ತಾಲೂಕಿನ ಬೈರಗಾಮದಿನ್ನೆ ಗ್ರಾಮದಲ್ಲಿ 2023-24ನೇ ಸಾಲಿನ ಕೆ.ಕೆ.ಆರ್ ಡಿ.ಬಿ ಅನುದಾನದಡಿಯಲ್ಲಿ ನಿರ್ಮಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಮೂರು ಕೊಠಡಿಗಳನ್ನು ಶಾಸಕ ಬಿ.ಎಂ.ನಾಗರಾಜ 0ಉದ್ಘಾಟಿಸಿದರು.
ಕಳೆದ ಮಂಗಳವಾರ ' ಸರ್ಕಾರಿ ಶಾಲೆಗೆ ಉದ್ಘಾಟನೆ ಭಾಗ್ಯ ಎಂದು?' ಶೀರ್ಷಿಕೆ ಅಡಿಯಲ್ಲಿ ವರದಿಯನ್ನು ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿತ್ತು.

ಸುದ್ದಿಯನ್ನು ನೋಡಿದ ಶಾಸಕರು, ಸಮಸ್ಯೆಯನ್ನು ಗಣನೆಗೆ ತೆಗೆದುಕೊಂಡು ಕೂಡಲೇ ಮಕ್ಕಳಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿದರು.