LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫೇಲಾದವರ ಕೈ ಹಿಡಿವ ಪ್ರೇರಣಾ..!

ಬರೀ 30 ದಿನಗಳಲ್ಲೇ ಬದಲಾವಣೆ ರೀ..

ಶಿಕ್ಷಣ ಕಬ್ಬಿಣ ಕಡೆಲೆ ಎಂದವರಿಗೆ ಕಬ್ಬಿನ ಹಾಲಾಗಿಸುವ ಪ್ರೇರಣ

ಓದಿನಲ್ಲಿ ಹಿಂದೆ ಬಿದ್ದವರಿಗೆ ಪ್ರೇರಾಣ (ಶಕ್ತಿ)

ಫೇಲ್ ಆದವರ ಫಾಸ್ ಮಾಡಿಸೋ ಪ್ರೇರಣ

ತಿಪಟೂರು : ಆಗದುಯೆಂದು ಕೈಕಟ್ಟಿ ಕೂತರೆ ಆಗದು ಕೆಲಸವು ಮುಂದೆ.. ಎಂಬ ಬಂಗಾರದ ಮನಷ್ಯ ಚಲನಚಿತ್ರದ ಹಾಡು ಇಂದಿಗೂ ಎಂದೆಂದಿಗೂ ನಮಗೆ ನೀತಿ ಪಾಠವೇ.. ಕನ್ನಂಬಾಡಿ ಕಟ್ಟಿದ ಸರ್.ಎಂ ವಿಶ್ವೇಶ್ವರಯ್ಯ ಕೂಡ ಫೇಲ್ ಆಗಿಯೇ ಮತ್ತೆ ಫಾಸ್ ಆಗಿ ಸಾಧಿಸಿ ತೋರಿಸಿದ್ದು ಭಾರತ ರತ್ನ ಆಗಿದ್ದು.. ಹೌದು ಈ ಜಗತ್ತಿನಲ್ಲಿ ಎಲ್ಲವೂ ಸಾಧ್ಯ ಆದರೆ ಮನಸ್ಸನ್ನು ಆಯಾ ಕೆಲಸಕ್ಕೆ ತೊಡಗಿಸುವ ಮನಸ್ಸುಮಾಡಬೇಕಷ್ಟೆ..

 ಪರೀಕ್ಷೆಯಲ್ಲಿ ಚನ್ನಾಗಿ ಅಂಕಗಳಿಸಿ ಪಾಸಾದ ಮಕ್ಕಳನ್ನು ಎಲ್ಲರೂ ಇಷ್ಟಪಡ್ತಾರೆ..ಆದರೆ ಪರೀಕ್ಷೆಯಲ್ಲಿ ಫೇಲ್ ಆದ ನಿರ್ಲಕ್ಷ್ಯಕ್ಕೊಳಗಾದ ವಿದ್ಯಾರ್ಥಿಗಳಿಗೂ ಬಾಳಿದೆ ಬದುಕಿ ತೋರಿಸಬಹುದು ಎಂಬ ದಾರಿ ತೋರಿಸುತ್ತಿದೆ ತುಮಕೂರಿನ ತಿಪಟೂರಿನ ಪ್ರೇರಣಾ ಎಂಬ ವಿದ್ಯಾಸಂಸ್ಥೆ..!

ಹೌದು ಈ ಮಾತು ನೂರಕ್ಕೆ ನೂರಷ್ಟು ಸತ್ಯ.. ಅದು ಹೇಗೆಂತೀರಾ.. ಈ ಸಂಸ್ಥೆಗೆ ಒಮ್ಮೆ ಭೇಟಿ ಕೊಟ್ಟು ನೋಡಿದರೆ ಫೇಲಾದ ವಿದ್ಯಾರ್ಥಿಗಳು ಮತ್ತೆ ಫಾಸಾಗಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಸಾಕಷ್ಟು ಯಶೋಗಾಥೆಗಳು ಸಾಕ್ಷಿ ಸಮೇತ ಸಿಗಲಿದೆ. ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಓದಲು ಬರೆಯಲು ಬಾರದ ಮಕ್ಕಳನ್ನು ತನ್ನ ತೆಕ್ಕೆ ತೆಗೆದುಕೊಂಡು ತಮ್ಮ ಸಂಸ್ಥೆಯಲ್ಲಿ ದಾಖಲುಮಾಡಿಕೊಂಡು ಮಕ್ಕಳ ಮನೋಶಾಸ್ತ್ರದ ಆಧಾರದ ಮೇಲೆ ಅವರ ಮಟ್ಟಕ್ಕಿಳಿದು ತಿದ್ಧಿ ತೀಡಿ ಮತ್ತೆ ಪರೀಕ್ಷೆಯಲ್ಲಿ ಪಾಸ್ ಮಾಡಿಸುತ್ತಿರುವ ಕಲೆ ಇಲ್ಲಿನ ಸಂಸ್ಥೆಗೆ ಕರಗತವಾಗಿದೆ.



ಬರೀ 30 ದಿನಗಳಲ್ಲೇ ಬದಲಾವಣೆ ರೀ.. :

ತುಮಕೂರು ಜಿಲ್ಲೆ ತಿಪಟೂರು ನಗರದ ಹೃದಯ ಭಾಗದಲ್ಲಿರುವ ಪ್ರೇರಣಾ ಸಂಸ್ಥೆ 30 ವರ್ಷಗಳಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಪೇಲಾದ ವಿದ್ಯಾರ್ಥಿಗಳಿಗೆ ಆಸರೆಯಾಗಿ ಅವರನ್ನು ಸಂಸ್ಥೆಗೆ ದಾಖಲಿಸಿಕೊಂಡು ಶಾಲೆಗಳಲ್ಲಿ ಹತ್ತು ವರ್ಷಗಳು ಓದಲು ಬರೆಯಲು ಬರದ ಹಾಗೂ ನಿರ್ಲಕ್ಷ್ಯಕ್ಕೊಳಗಾದ ವಿದ್ಯಾರ್ಥಿಗಳಿಗೆ ಬರೀ 30 ದಿನಗಳಲ್ಲಿ ಓದು ಬರಹ ಕಲಿಸಿ ಪರೀಕ್ಷೆಗೆ ಸಜ್ಜು ಗೊಳಿಸುತ್ತಾರೆ ಕೆಲವು ವಿದ್ಯಾರ್ಥಿಗಳು ಪಾಸ್‌ಆದರೆ ಇನ್ನೂ ಕೆಲವು ಮಕ್ಕಳು ಫ್ರಸ್ಟ್ ಕ್ಲಾಸ್, ಇನ್ನೂ ಕೆಲವು ಮಕ್ಕಳು ಡಿಸ್ಟಿಂಕಷನ್ ನಲ್ಲೂ ಪಾಸ್ ಆಗಿರುವ ಉದಾಹರಣೆಗಳುನ್ನು ನಿವು ಸಂಸ್ಥೆಗೆ ಬಂದು ನೋಡಿದರೆ ಗೊತ್ತಾಗಲಿದೆ ಪ್ರೇರಣ ಸಮಸ್ಥೆಯ ಶಕ್ತಿ.

ಸ್ಪೂರ್ತಿ,ಪ್ರೇರಣೆಯ ಕಲಿಕೆ :

ಪ್ರೇರಣದಲ್ಲಿ ಫೇಲಾದ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರತ್ಯೇಕವಾಗಿ ಕೂರಿಸಿಕೊಂಡು ನಗುಮೊಗದಿ ಪ್ರೀತಿ ವಾತ್ಸಲ್ಯದಿಂದ ಬಾಲ್ಯದ ದಿನಗಳಲ್ಲಿ ತತ್ಸಾರಮಾಡಿ ಕಲಿಯದೇ ಹೋದ ಮಗ್ಗಿ,ಲೆಕ್ಕ ಜತೆಗೆ ಕನ್ನಡ, ಹಿಂದಿ, ಇಂಹ್ಲೀಷ್ ಅಕ್ಷರ,ಕಾಗುಣಿತ,ಎಲ್ಲವನ್ನೂ ಕಲಿಸಿ ಭದ್ರವಾದ ಅಡಿಪಾಯ ಹಾಕಿಯೇ ಪರೀಕ್ಷೆಯ ಪಾಠ ಶುರುಮಾಡಿಕೊಳ್ಳುತ್ತಾರೆ..

ಶಿಕ್ಷಣ ಕಬ್ಬಿಣ ಕಡಲೆಯೆಂದು ಭಾವಿಸಿರುವ ಮಕ್ಕಳಿಗೆ ಶಿಕ್ಷಣ ಕಬ್ಬಿನ ಹಾಲು ಎಂದು ತೋರಿಸಲು ಮನೋವಿಕಾಸದ ಆಧಾರದ ಮೇಲೆ ಮಕ್ಕಳಿಗೆ ಶಿಕ್ಷಣದ ಜತೆಗೆ ಆಟ,ಕ್ರೀಡೆ,ಧ್ಯಾನ,ಓದಿನ ಹವ್ಯಾಸ, ಸಂವಹನ ಕಲೆ ಕಲಿಸುತ್ತಾ ಪರೀಕ್ಷೆಯ ಪಾಠಗಳನ್ನು ಕಲಿಸಿ ಮಕ್ಕಳು ತಾತ್ಸಾರದಿಂದ ಕಳೆದು ಕೊಂಡಿದ್ದ ಶಾಲಾ ಪಾಠಪ್ರವಚನಗಳನ್ನು ಕಡಿಮೆ ಅವಧಿಯಲ್ಲೇ ಕಲಿಸಿಕೊಡುವ ಕಾಯಕ ಇಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ.

ವಿವಿಧ ಪದವಿ, ಹುದ್ದೆಗಳಲ್ಲಿ ಪ್ರೇರಣಾ ಪ್ರಾಡಕ್ಟ್‌ಗಳು :

ನಮ್ಮ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಸ್ ಆಗಿ ಇಂದು ಇಂಜಿನಿಯರಿಂಗ್ ಡಿಪ್ಲೊಮಾ, ಐಟಿಐ, ಎಂ.ಎ, ಎಂ ಎಸ್ಸಿ ಬಿ.ಎಡ್ ಮತ್ತಿತರ ಶಿಕ್ಷಣ ಪಡೆದಿದ್ದಾರೆ, ಕೆಲವರು ಪೋಲೀಸ್, ಮಿಲಿಟರಿ. ಸಬ್ ಇನ್ಸ್‌ಪೆಕ್ಟರ್, ಶಿಕ್ಷಕರಾಗಿ  ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ, ಕೆಲವರು ಒಳ್ಳೆಯ ವ್ಯಾಪಾರಸ್ಥರು ಕೂಡ ಆಗಿಬಿಟ್ಟಿದ್ದಾರೆ ರೀ..

ಪ್ರೇರಣದಲ್ಲಿ ಪರಿಣಿತ ಶಿಕ್ಷಕರು :

ಇಲ್ಲಿ ವಿಷಯ ಪರಿಣಿತಿ ಪಡೆದ ಶಿಕ್ಷಕರು ಇದ್ದು ಮಕ್ಕಳ ಮನಸ್ಸಿಗೆ ಅನುಗುಣವಾಗಿ ಉಪಾಯವಾಗಿ ಮಕ್ಕಳ ಕಲಿಕೆಯನ್ನು ಉತ್ತೇಜಿಸುವ ನುರಿತ ಶಿಕ್ಷಕರಿದ್ದಾರೆ. ಎಸ್ಸೆಸ್ಸೆಲ್ಸಿ ಮಾತ್ರವಲ್ಲದೆ 1 ತರಗತಿಯಿಂದ 10 ನೇ ತರಗತಿವರೆಗಿನ ಯಾವುದೇ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರೆ ಅವರಿಗೆ ಕೂಡ ಒಂದು ತಿಂಗಳ ತರಬೇತಿ  ವ್ಯವಸ್ಥೆ ಜತೆಗೆ ವ್ಯಕ್ತಿತ್ವ ವಿಕಸನ ಪಾಠವೂ ಸಾಮಾಜಿಕ ಮೌಲ್ಯವನ್ನು ಕಲಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುವಂತೆ ಮಾಡುವ ಧ್ಯೇಯವೂ ಇಲ್ಲಿ ಸಾಕಾರವಾಗುತ್ತಿದೆ.

 

 
ಓದಲು ಬರೆಯಲು ಬಾರದ ಹಾಗೂ ಫೇಲಾದ ಮಕ್ಕಳನ್ನು ಕೂರಿಸಿ ಓದಿಸಿ ಪಾಸ್ ಮಾಡಿಸಿ ಮಕ್ಕಳಿಗೆ ಬದುಕುವ ದಾರಿ ತೋರುತ್ತಿದ್ದೇವೆ. ಇಂತಹ ವಿದ್ಯಾರ್ಥಿಗಳಿದ್ದರೆ ದಯಮಾಡಿ ಕರೆ ತನ್ನಿ ಅವರಿಗೂ ಒಂದು ಬದುಕು ಇದೆ.

- ಬಾನು ಪ್ರಕಾಶ್, ಮುಖ್ಯಸ್ಥರು ಪ್ರೇರಣಾ,ತಿಪಟೂರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST