LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಡಿಡಿಜಿಯವರ ಸನ್ಮಾನ ಸಮಾರಂಭ : ಸಾಧನೆಯ ಸಂಭ್ರಮ

ಬೆಂಗಳೂರು: ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯವು ಪ್ರಧಾನಮಂತ್ರಿಗಳ ಆರ್‌ಡಿಸಿ ಬ್ಯಾನರ್ 2025-26 ಅನ್ನು   ಗೆಲ್ಲುವ ಮೂಲಕ  ಅದ್ಭುತ ಸಾಧನೆ ಮಾಡಿದೆ. ಈ ಸಾಧನೆಗೆ ಕಾರಣರಾದ ಎಲ್ಲರನ್ನು  ಗೌರವಿಸುವ ಉದ್ದೇಶದಿಂದ ಕೊರಮಂಗಲದಲ್ಲಿನ ಜೆಎನ್‌ಸಿ ಕಾಲೇಜಿನಲ್ಲಿ ಭವ್ಯ ಡಿಡಿಜಿಯವರ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

 

ರಾಷ್ಟ್ರಮಟ್ಟದ ಈ ಐತಿಹಾಸಿಕ ಸಾಧನೆಯನ್ನು ಸಂಭ್ರಮಿಸಲು ಅಧಿಕಾರಿಗಳು, ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿಗಳು, ಕ್ಯಾಡೆಟ್‌ಗಳು ಹಾಗೂ ಗಣ್ಯ ಅತಿಥಿಗಳು ಒಂದೇ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಳೆದ ವರ್ಷ ಸೇರಿದಂತೆ ಈ ವರ್ಷವೂ  ಪ್ರಧಾನಮಂತ್ರಿಗಳ ಬ್ಯಾನರ್ ಅನ್ನು ಸತತವಾಗಿ ಗೆಲ್ಲುವಲ್ಲಿ ಯಶಸ್ವಿಯಾಗಲು ಕಾರಣ ಕರ್ನಾಟಕ ಮತ್ತು ಗೋವಾ  ನಿರ್ದೇಶನಾಲಯದ ಅಚಲ ಶಿಸ್ತು, ಕಟ್ಟುನಿಟ್ಟಾದ ತರಬೇತಿ ಮಾನದಂಡಗಳು ಮತ್ತು ಶ್ರೇಷ್ಠತೆಗೆ ಸಲ್ಲಿಸಿದ ಸಾಮೂಹಿಕ ಬದ್ಧತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.

 

ಸಮಾರಂಭದ ಸಂದರ್ಭದಲ್ಲಿ ಉಪ ಮಹಾನಿರ್ದೇಶಕರಾದ (ಡಿಡಿಜಿ) ಏರ್ ಕಮೋಡೋರ್ ಬವಿನ್ಮರದ್ ಅರುಣಕುಮಾರ್ ವಿ.ಎಸ್.ಎಂ ಅವರು, ರಿಪಬ್ಲಿಕ್ ಡೇ ಕ್ಯಾಂಪ್ 2025-26 ರಲ್ಲಿ ಈ ಮಹತ್ವದ ಯಶಸ್ಸನ್ನು ಸಾಧಿಸಲು ಶ್ರಮಿಸಿದ ಅಧಿಕಾರಿಗಳು, ತರಬೇತಿ ಸಿಬ್ಬಂದಿ ಹಾಗೂ ಕ್ಯಾಡೆಟ್‌ಗಳನ್ನು ಸನ್ಮಾನಿಸಿದರು.

 

ತಮ್ಮ ಭಾಷಣದಲ್ಲಿ ಡಿಡಿಜಿಯವರು ಘಟಕದ ನಾಯಕತ್ವ, ಯೋಜನೆ ಹಾಗೂ ಅಜೇಯ ಮನೋಭಾವವನ್ನು ಶ್ಲಾಘಿಸಿ, ನಮ್ಮ ಈ  ಸಾಧನೆ ದೇಶದ ಎನ್‌ಸಿಸಿ ಘಟಕಗಳಿಗೆ ಮಾದರಿಯೆಂದು ಕರೆದುಕೊಂಡರು. ೩೩ ವರ್ಷಗಳ ನಂತರ ಸತತವಾಗಿ ಎರಡನೇ ಬಾರಿ ವಿಜಯ ಸಾಧಿಸಿರುವುದು ಈ ವರ್ಷದ ಮತ್ತೊಂದು ವಿಶೇಷ ಎಂದರು.

 

ಅಂತಿಮವಾಗಿ ಕಾರ್ಯಕ್ರಮವು `ಎನ್‌ಸಿಸಿಯ ಏಕತೆ ಮತ್ತು ಶಿಸ್ತು' ಎಂಬ ತತ್ವವನ್ನು ಸದಾ ಪಾಲಿಸುವುದಾಗಿ ಪುನಃ ಪ್ರತಿಜ್ಞೆ ಮಾಡುವ ಮೂಲಕ ಮುಂದೆಯೂ  ಕ್ಯಾಡೆಟ್‌ಗಳು ಇನ್ನಷ್ಟು ಉನ್ನತ ಮಟ್ಟದಲ್ಲಿ  ಸಾಧಿಸಲು, ರಾಷ್ಟ್ರಕ್ಕೆ ಹೆಚ್ಚಿನ ಕೀರ್ತಿಯನ್ನು ತರಲು ಪ್ರೇರಣೆಯಾಯಿತು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST