LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸನ್ಮಾನ

ನಾಯಕನಹಟ್ಟಿ : ನಾನು ಒಬ್ಬ ಪ್ರಗತಿ ಪರ ರೈತರ ಕುಟುಂಬದಲ್ಲಿ ಜನಸಿ ಬಂದವನು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್ ಹೇಳಿದರು.

 

ಪಟ್ಟಣದ ಪಂಚಾಯಿತಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ.ವಾಸುದೇವ ಮೇಟಿ ಬಣದ ವತಿಯಿಂದ ಸನ್ಮಾನಿಸಿ ಸ್ವೀಕರಿಸಿಕೊಂಡು ನಂತರ ಮಾತನಾಡಿದ ಅವರು ನಾನು ಜಾತಿ ಬೇದ ಮಾಡುವ ವ್ಯಕ್ತಿಯಲ್ಲ ನಮ್ಮ ರಕ್ತದಲ್ಲೇ ಇಲ್ಲ, ನಾವೇಲ್ಲರೂ ಒಂದೇ ಅಂದುಕೊಂಡಿದ್ದೇನೆ ಎಂದರು. ಇತ್ತೀಚಿಗೆ ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ಈರುಳ್ಳಿ ಬೆಳೆದ ರೈತರು ಕೈ ಹೊತ್ತುಕೊಂಡು ಕುಳಿತ್ತಿದ್ದಾರೆ. ಈರುಳ್ಳಿಯಲ್ಲಿ ಬೆಳೆಯಲು ಮಾಡಿರುವ ಖರ್ಚು ಕೈಗೆ ಸಿಗದಂತ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ದರ ಕುಸಿತ ರೈತನ ಕಣ್ಣ ಸಹ ನೀರು ಸುರಿಯುತ್ತಿದೆ. ಈರುಳ್ಳಿ ಬೆಲೆ ಕುಸಿತದಿಂದ ನಮ್ಮ ರೈತರು ಕಂಗಾಲಾಗಿದ್ದಾರೆ. ಬೆಳೆಗೆ ಮಾಡಿದ ಖರ್ಚು ಸಹ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

 

ಮನುಷ್ಯನ ಮನಸ್ಸು ಪರಿಶುದ್ಧವಾಗಿದ್ದರೆ ದೇವರು ಒಲಿಯುತ್ತಾನೆ, ಆಶೀರ್ವಾದ ಮಾಡುತ್ತಾನೆ. ಮತ್ತೆ ಸ್ವಾರ್ಥ ಇರಬಾರದು, ಭದ್ರ ಮೇಲ್ದಂಡೆ ಯೋಜನೆ ಬಂದರೆ ರೈತರಿಗೆ ಅನುಕೂಲವಾಗುತ್ತದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಈ ಮೂಳಕಾಲ್ಮೂರು ಕ್ಷೇತ್ರ ಬಡತನದ ರೇಖೆಯಲ್ಲಿದೆ. ಮಾಡಿದಷ್ಟು ನೀಡು ಭಿಕ್ಷೆ ಎಂಬ ವಚನ ನುಡಿದಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಎಲ್ಲಾರನ್ನು ಆಶೀರ್ವದಿಸಲಿ ಎಂದರು.



ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹೋಬಳಿ ಅಧ್ಯಕ್ಷರಾದ ಡಾ.ನಾಗರಾಜ್ ಮೀಸೆ ಮಾತನಾಡಿ ಅಲ್ಪಸಂಖ್ಯಾತರಾದAತಹ ಸೈಯದ್ ಅನ್ವರ್‌ರವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವುದು ನಮಗೆಲ್ಲಾ ಹೆಮ್ಮೆ ಅನಿಸುತ್ತಿದೆ ಎಂದರು. ನಮ್ಮ ಪುಣ್ಯಕ್ಷೇತ್ರ ನಾಯಕನಹಟ್ಟಿಯಲ್ಲಿ ಹಿಂದು, ಮುಸ್ಲಿಂ ಅಣ್ಣ-ತಮ್ಮಂದಿರಂತೆ ಇದ್ದೇವೆ. ನಮ್ಮ ಹಿಂದುಗಳ ಯಾವುದೇ ಹಬ್ಬ ಹರಿದಿನಗಳು ಇದ್ದರು ಅವರು ಮುಂದೆ ನಿಂತುಕೊಂಡು ನಡೆಸುವಂತಹ ಏಕೈಕ ನಾಯಕ ಸೈಯದ್ ಅನ್ವರ್ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಸೈಯದ್ ಅನ್ವರ್‌ರವರಿಗೆ ದೇವರು ಒಳ್ಳೆದು ಮಾಡಲಿ ಎಂದು ತಿಳಿಸಿದರು.

 

ಪಟ್ಟಣ ಪಂಚಾಯಿತಿ ಸದಸ್ಯ ಜಾಗನೂರಹಟ್ಟಿ ಮಂಜುನಾಥ ಮಾತನಾಡಿ ಕರ್ನಾಟಕ ರಾಜ್ಯ ರೈತ ಸಂಘದವರು ಹೀಗೆ ಒಳ್ಳೆಒಳ್ಳೆ ಕಾರ್ಯಕ್ರಮಗಳನ್ನು ಮಾಡಿ ಇಂತಹ ಸನ್ಮಾನ ಕಾರ್ಯಕ್ರಮಗಳನ್ನು ಇಟ್ಟುಕೊಂಡಾಗ ಸರ್ಕಾರ ಅಧಿಕಾರಿಗಳಾಗಿರಲಿ, ಪಟ್ಟಣ ಪಂಚಾಯಿತಿ ಸದಸ್ಯರುಗಾಗಲಿ, ಪಟ್ಟಣ ಪಂಚಾಯಿತಿ ಉನ್ನತ ಹುದ್ದೆಗಳಲ್ಲಿ ಆಯ್ಕೆಯಾದಂತವರಿಗೆ ಇಂತಹ ಕಾರ್ಯಕ್ರಮಗಳನ್ನು ಇಟ್ಟುಕೊಂಡಾಗ ಅವರಲ್ಲಿ ಏನೋ ಒಂದು ಮನೋಭಾವ ಬಂದು ತಮ್ಮ ಕೆಲಸಗಳನ್ನು ಉತ್ಸಾಹಭರಿತವಾಗಿ ಕೆಲಸ ಮಾಡುತ್ತಾರೆ ಎಂದರು.

 

ಈ ಸಂದರ್ಭದಲ್ಲಿ ಉಪಸ್ಥಿತರಾದ ನಾಯಕನಹಟ್ಟಿ ಪ.ಪಂ ಉಪಾಧ್ಯಕ್ಷರಾದ ಬೋಸಮ್ಮ ಮಂಜುನಾಥ ರವರನ್ನು ಸನ್ಮಾನಿಸಿದರು, ಸ್ಥಾಯಿ ಸಮಿತಿ ಸದಸ್ಯ ಓಬಯ್ಯದಾಸ್, ಕರ್ನಾಟಕ ರಾಜ್ಯ ರೈತ ಸಂಘ ಹೋಬಳಿ ಉಪಾಧ್ಯಕ್ಷ ನಾಗರಾಜ್, ಕರ್ನಾಟಕ ರಾಜ್ಯ ರೈತ ಸಂಘ ನಗರ ಉಪಾಧ್ಯಕ್ಷ ಸಿ.ಎಸ್.ರಾಘವೇಂದ್ರ, ಕರ್ನಾಟಕ ರಾಜ್ಯ ರೈತ ಸಂಘ ಗೌರವ ಅಧ್ಯಕ್ಷ ಮಂಜುನಾಥ ಗೌಡಗೆರೆ, ಸದಸ್ಯ ಓಬಯ್ಯ, ಬಸವರಾಜ್, ಹಾಗೂ ಇನ್ನೂ ಇತರರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST