LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿವಿಧ ಸೌಲಭ್ಯಗಳಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ನಾಯಕನಹಟ್ಟಿ: ಸ್ವಾತಂತ್ರ್ಯ ಬಂದು 78 ವರ್ಷ ಕಳೆದರು ನಾಯಕನಹಟ್ಟಿಯಲ್ಲಿ ಸರ್ಕಾರಿ ಬಸ್ ನಿಲ್ದಾಣ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜ್, ಕರ್ನಾಟಕ ಪಬ್ಲಿಕ್ ಶಾಲೆ, ಸರ್ಕಾರಿ ಐ.ಟಿ.ಐ ಕಾಲೇಜ್ ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ (ಡಾ.ವಾಸುದೇವ ಮೇಟಿ ಬಣ) ನಾಯಕನಹಟ್ಟಿ ಹೋಬಳಿ ಘಟಕದ ಅಧ್ಯಕ್ಷರಾದ ನಾಗರಾಜ್ ಮೀಸೆ ಆರೋಪಿಸಿದರು.

 

ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿ ವತಿಯಿಂದ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಉಪವಾಸ ಸತ್ಯಗ್ರಹ ಹಮ್ಮಿಕೊಂಡಿದ್ದರು.

 

ನAತರ ಮಾತನಾಡಿದ ಅವರು ನಾಯಕನಹಟ್ಟಿಯಲ್ಲಿ ಸುಮಾರು ಕೈ ಬೆರಳೆಣಿಕೆಯ ಖಾಸಗಿಯವರ ಕೈವಾಡದಿಂದ ಜನ ಪ್ರತಿನಿಧಿಗಳು ರಾಜಕಾರಣೀಗಳು ಅಧಿಕಾರಿಗಳ ಅವರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿಯೇ ಅತೀ ದೊಡ್ಡ ಹೋಬಳಿಯಾದಂತಹ ಐತಿಹಾಸಿಕ ಶತಮಾನಗಳ ಇತಿಹಾಸಯುಳ್ಳ ರಾಜ್ಯದಲ್ಲಿಯೇ ಅತೀ ದೊಡ್ಡ ಜಾತ್ರ ಮಹೋತ್ಸವ ನಡೆಯುವಂತಹ ಶ್ರೀ ಗುರು ತಿಪ್ಪೇರುದ್ರಸ್ವಾಮಿ ನೆಲಸಿರುವಂತಹ ಹಾಗೂ ರಾಜಹಟ್ಟಿ ಮಲ್ಲಪ್ಪ ನಾಯಕನ ಆಳ್ವಿಕೆಯ ಸಂಸ್ಥಾನವಾದ ರಾಜ್ಯದಲ್ಲಿ ಅತೀ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು, ರಾಜ್ಯದಲ್ಲಿಯೇ ಅತೀ ಹಿಂದುಳಿದ ಪ್ರದೇಶವಾಗಿದೆ ಎಂದರು. ಇಲ್ಲಿ ಅತೀ ಹೆಚ್ಚಿನ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಇದ್ದು ಸರ್ಕಾರಿ ಬಸ್ ಇಲ್ಲದ ಕಾರಣ ಮುಂದಿನ ತರಗತಿಗೆ ಹೋಗಲು ಬಹಳ ವಿದ್ಯಾರ್ಥಿನಿಯರು ವಂಚಿತರಾಗಿದ್ದಾರೆ ಎಂದು ದೂರಿದರು. ರೈತ ಬೆಳೆದಂತ ಬೆಳೆಗಳನ್ನು ಖರಿದಿಸಲು ಖರಿದಿ ಕೇಂದ್ರ ಇವೆಲ್ಲವೂ ಮುಖ್ಯ ಬೇಡಿಕೆಗಳಾಗಿದ್ದು ನಮ್ಮ ಹಕ್ಕಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲಭೂತ ಸೌಕಾರ್ಯಗಳಿಲ್ಲದೆ. ನಮ್ಮ ಹೋಬಳಿಯ ಜನತೆ ಸಂಪೂರ್ಣವಾಗಿ ವಂಚಿತರಾಗಿದ್ದಾರೆ ಸ್ವಾತಂತ್ರö್ಯ ಬಂದು 78 ವರ್ಷಗಳಾದರು ಎಷ್ಟೋ ಸರ್ಕಾರಗಳು ರಾಜ್ಯದಲ್ಲಿ ಬಂದು ಹೋದರು ಇಲ್ಲಿ ಆಯ್ಕೆಯಾದಂತ ಜನ ಪ್ರತಿನಿಧಿಗಳು, ಶಾಸಕರು, ಸಂಸದರು, ಮೇಲಿನ ಬೇಡಿಕೆಗಳನ್ನು ಹಿಡೇರಿಸಲಾಗದೆ ವಿಫಲರಾಗಿದ್ದಾರೆ. ನಮ್ಮ ಹೋಬಳಿಯ ಸಂಘ ಸಂಸ್ಥೆಗಳು ವಿದ್ಯಾರ್ಥಿ ಒಕ್ಕೂಟಗಳು, ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ಅನೇಕ ಬಾರಿ ಮಾದ್ಯಮಗಳಲ್ಲಿ ಪತ್ರಿಕೆಗಳಲ್ಲಿ ಪ್ರಸಾರ ಮಾಡಿದರು. ಸರ್ಕಾರದಿಂದ ಜನಪ್ರತಿನಿಧಿಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲದ ಕಾರಣ ಇಂದು ನಾವು ಉಪವಾಸ ಸತ್ಯಗ್ರಹ ಮಾಡಲು ಮುಂದಾಗಿದ್ದೇವೆ ಎಂದರು. ಮತ್ತು ಚುನಾವಣೆ ಸಂದರ್ಭದಲ್ಲಿ ಶಿಕ್ಷಣಕ್ಕೆ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುತ್ತೇನೆ ಎಂದು ಹೇಳಿದ್ದಿರಲ್ಲ ಆ ಕೊಟ್ಟ ಮಾತು ಉಳಿಸಿಕೊಳ್ಳಿ ಎಂದರು.



ಕರ್ನಾಟಕ ರಕ್ಷಣ ವೇದಿಕೆ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷರಾದ ಮುತ್ತಯ್ಯ ಮಾತನಾಡಿ ನಾಯಕನಹಟ್ಟಿ ಹೋಬಳಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಡುಬಡ ಜನರಿದ್ದಾರೆ. ನಾಯಕನಹಟ್ಟಿ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆಗಬೇಕು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹೋಗಲು ಕೆಎಸ್‌ಆರ್‌ಟಿಸಿ ಬಸ್ ಬಿಡಬೇಕು ಎಂದು ಮನವಿ ಮಾಡಿಕೊಂಡರು.

 

ನಾಯಕನಹಟ್ಟಿ ಕರ್ನಾಟಕ ರಕ್ಷಣ ವೇದಿಕೆ ಕನ್ನಡ ಸೇನೆ ಹೋಬಳಿ ಅಧ್ಯಕ್ಷರಾದ ಜೋಗಿಹಟ್ಟಿ ಮಂಜುನಾಥ ಮಾತನಾಡಿ ಶಕ್ತಿ ಯೋಜನೆಯಿಂದ ನಾಯಕನಹಟ್ಟಿಯಲ್ಲಿ ಸಂಪೂರ್ಣ ವಿಫಲವಾಗಿದೆ. ಸರಿಯಾದ ಸಮಯಕ್ಕೆ ಬಸ್ ಇಲ್ಲದ ಕಾರಣ ವಿದ್ಯಾರ್ಥಿಗಳು ಪ್ರತಿದಿನ ಕಾಲೇಜ್‌ಗೆ ತೆರಳಲು ಸಾಧ್ಯವಾಗುತ್ತಿಲ್ಲ. ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣನವರು ಚಿತ್ರದುರ್ಗ ಸಂಸದರಾದ ಗೋವಿಂದ ಕಾರಜೋಳ ರವರು ಅಭಿವೃದ್ಧಿ ಮಾಡದೆ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ದೂರಿದರು. ಶಾಸಕರಿಂದ, ಗೋವಿಂದ ಕಾರಜೋಳ ರವರಿಂದ ಎಲ್ಲಾವು ಸಾಧ್ಯ, ಅವರು ಸಚಿವರಿಗೆ ಒಂದು ಮಾತು ಹೇಳಿದರೆ ಸಾಕು ಬಸ್ ನಿಲ್ದಾಣವಾಗುತ್ತದೆ, ಸರ್ಕಾರಿ ಶಾಲಾ ಕಾಲೇಜುಗಳು ನಿರ್ಮಾಣ ಮಾಡಬಹುದು ಎಂದು ಅವರು ಹೇಳಿದರು.

 

ಈ ಸಂದರ್ಭದಲ್ಲಿ ರೈತಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ವಿದ್ಯಾರ್ಥಿ ಒಕ್ಕೂಟಗಳು, ಕನ್ನಡ ಪರ ಸಂಘಟನೆಗಳು, ವಿಶ್ವಕರ್ಮ ಸಮಾಜ, ಸವಿತಾ ಸಮಾಜ, ಕಟ್ಟಡ ಕಾರ್ಮಿಗಕ ಸಂಘ, ಮಹಿಳಾ ಸ್ವ-ಸಹಾಯ ಸಂಘಗಳು, ಟೈಲರ್ ಅಸೋಸಿಯೆಷನ್ ಇನ್ನೂ ಅನೇಕ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.

 

ಈ ಸಂದರ್ಭದಲ್ಲಿ ನಗರ ಘಟಕ ಉಪಾಧ್ಯಕ್ಷ ಸಿ.ಎಸ್.ರಾಘವೇಂದ್ರ, ನಾಯಕನಹಟ್ಟಿ ಹೋಬಳಿ ಘಟಕ ಕಾರ್ಯದರ್ಶಿ, ಮಂಜುನಾಥ ಕೆ.ಎಂ., ಜಿಲ್ಲಾ ಉಪಾಧ್ಯಕ್ಷರಾದ ಪಟೇಲ್ ಮಲ್ಲಿಕಾರ್ಜುನ ಮತ್ತು ನಿಜಲಿಂಗಪ್ಪ, ಜಿಲ್ಲಾ ಕಾರ್ಯದರ್ಶಿ ನವೀನ್, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ನಾಗರಾಜ್ ಕೆರೆಯಾಗಳಲ್ಲಿ, ಮಹಿಳಾ ತಾಲ್ಲೂಕು ಅಧ್ಯಕ್ಷರಾದ ವಿಜಯಲಕ್ಷಿö್ಮÃ, ಕರ್ನಾಟಕ ರಕ್ಷಣ ವೇದಿಕೆಯ ಕನ್ನಡ ಸೇನೆಯ ಪದಾಧಿಕಾರಿಗಳು. ನಗರ ಘಟಕ ಅಧ್ಯಕ್ಷ ಓ.ತಿಪ್ಪೇಸ್ವಾಮಿ, ನಾಯಕನಹಟ್ಟಿ ಕಾಂತರಾಜ್, ಅನುಸೂಯಮ್ಮ, ಸತೀಶ್, ಪುನಿ, ಜಯಣ್ಣ, ಮಲ್ಲೂರಹಳ್ಳಿ ಪ್ರಸನ್ನ, ರೈತ ಸಂಘನೆಯ ಪದಾಧಿಕಾರಿಗಳು, ಹಾಗೂ ಇನ್ನೂ ಇತರರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST