LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೈತರು ಕಾಮಗಾರಿಗಳ ನಿರ್ವಹಣೆಗೆ ಕೈಜೋಡಿಸಬೇಕು

ಬಳ್ಳಾರಿ :                ಗೋಕಟ್ಟೆ, ಚೆಕ್ ಡ್ಯಾಂ, ಕಂದಕ ಬದು ನಿರ್ಮಾಣ ಇನ್ನು ಹಲವಾರು ಕಾಮಗಾರಿಗಳನ್ನು ನಿರ್ಮಿಸಿದ್ದು, ಇವುಗಳ ನಿರ್ವಹಣೆ ಕೇವಲ ಇಲಾಖೆ ಅಥವಾ ಪಂಚಾಯತಿಯ ಕರ್ತವ್ಯವೆಂದು ಪರಿಗಣಿಸದೇ, ರೈತರು ಸಹ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಹೇಳಿದರು.

ಬುಧವಾರ ಬಳ್ಳಾರಿ ತಾಲ್ಲೂಕಿನ ರೂಪನಗುಡಿ ಹೋಬಳಿಯ ಯಾಳ್ಪಿ ಕಗ್ಗಲ್ಲು ಗ್ರಾಮದಲ್ಲಿ ಕೃಷಿ ಇಲಾಖೆಯ ಜಲಾನಯನ ಅಭಿವೃದ್ಧಿ ಇಲಾಖೆಯಡಿ ವಾಟರ್‌ಶೆಡ್ ಮಹೋತ್ಸವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ರೈತ ಉತ್ಪಾದಕ ಸಂಘವನ್ನು ರಚನೆ ಮಾಡಬೇಕು. ಪಿಎಂಎಫ್‌ಎAಇ ಯೋಜನೆಯನ್ನು ರೈತ ಮಹಿಳೆಯರು ಹಾಗೂ ಸ್ವ ಸಹಾಯ ಸಂಘದವರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಮಣ್ಣಿನ ಗುಣಲಕ್ಷಣ ಕಾಪಾಡಲು ರೈತರು ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ವ್ಯವಸಾಯವು ಕೈಗಾರಿಕೆ ಹಾಗೂ ಇತರೆ ವಲಯಗಳಿಗಿಂತ ಅತಿ ಮುಖ್ಯ ವಲಯ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಕೆ.ಎಂ ಸೋಮಸುಂದರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಲಾನಯನ ಅಭಿವೃದ್ಧಿ ಇಲಾಖೆಯಡಿ ಹಲವು ಕಾಮಗಾರಿ ಪೂರ್ಣಗೊಳಿಸಿದ್ದು, ಇಲ್ಲಿಯವರೆಗೂ ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳಾದ ಕ್ಷೇತ್ರಬದು ನಿರ್ಮಾಣ (1029.93 ಹೆ), ಚೆಕ್ ಡ್ಯಾಂ (17 ಸಂಖ್ಯೆ), ಗೋಕಟ್ಟೆಗಳ ನಿರ್ಮಾಣ (30 ಸಂಖ್ಯೆ) ಹಾಗೂ ಪಿ.ಟಿ.(9 ಸಂಖ್ಯೆ)ಗಳನ್ನು ನಿರ್ಮಿಸಲಾಗಿದೆ. 74 ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ನೀಡಲಾಗಿದೆ ಎಂದು ಯೋಜನೆಯ ಮಾಹಿತಿ ಹಂಚಿಕೊAಡರು.

ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಕೃಷಿ ವಿಜ್ಞಾನಿ ಡಾ.ಪಾಲಯ್ಯ, ಡಾ.ರವಿ ಹಾಗೂ ಡಾ.ಕೃಷ್ಣಮೂರ್ತಿಯವರ ಸಮ್ಮುಖದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆಯ ಬಗ್ಗೆ ತಾಂತ್ರಿಕ ಅಧಿವೇಶನ ಏರ್ಪಡಿಸಲಾಯಿತು.

ಪಿಎಂಕೆಎಸ್‌ಯೈ ಡಬ್ಲೂö್ಯಡಿಸಿ 2.0 ಯೋಜನೆಯ ಕೈಪಿಡಿ ಹಾಗೂ ಇತರೆ ತಾಂತ್ರಿಕತೆಗಳ ಕರಪತ್ರಗಳ ಬಿಡುಗಡೆ ಮಾಡಲಾಯಿತು.

ಹಗರಿ ಫಾರ್ಮನ ಸರ್ಕಾರಿ ಪ್ರೌಢಶಾಲೆಯ ಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಗ್ರಾಮದ ಸ್ವಸಹಾಯ ಸಂಘದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಸೋಮವಾರ ಆಯೋಜಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಪ್ರಶಸ್ತಿಪತ್ರ ಹಾಗೂ ಬಹುಮಾನ ವಿತರಿಸಿದರು.

ಉಪ ಕೃಷಿ ನಿರ್ದೇಶಕ ಎಸ್.ಎನ್.ಮಂಜುನಾಥ ಅವರು ಮಣ್ಣು ನೀರು ಮತ್ತು ಸ್ವಾಭಾವಿಕ ಸಂಪನ್ಮೂಲಗಳ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಭೋದಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ತಾಲ್ಲೂಕು ಕೃಷಿಕ ಸಮಾಜ ನಿರ್ದೇಶಕರಾದ ಸಮುದ್ರರಾಜ, ವೈ.ಗೋಪಾಲರೆಡ್ಡಿ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಿಂಗಮ್ಮ ಪೂಜಾರಿ, ಮಾಜಿ ಅಧ್ಯಕ್ಷ ಸೋಮಲಿಂಗಪ್ಪ, ಸದಸ್ಯರಾದ ಶಂಕರಗೌಡ, ಪದ್ಮಾವತಿ ಕರಿಬಸವನಗೌಡ, ಕೆ ಬಸವನಗೌಡ, ಲಕ್ಷಿö್ಮ ಮಹಾಲಿಂಗ, ಲಕ್ಷಿö್ಮ ದ್ಯಾವಣ್ಣ, ಗ್ರಾಮದ ರೈತರಾದ ಲೋಕನಗೌಡ, ಜನಾರ್ಧನರೆಡ್ಡಿ ಸೇರಿದಂತೆ ಕೃಷಿ ಇಲಾಖೆಯ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು, ಆತ್ಮ ಸಿಬ್ಬಂದಿ, ಕರ್ನಾಟಕ ಗಣಿ ಪರಿಸರ ಪುನಶ್ಚೇನ ಸಿಬ್ಬಂದಿ, ಕೃಷಿ ಸಂಜೀವಿನಿ ಸಿಬ್ಬಂದಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ ವರ್ಗದವರು ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST