LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಕಾರ್ಖಾನೆಗೆ ದೌರ್ಜನ್ಯದಿಂದ ರೈತರ ಭೂಮಿ ಕಿತ್ತುಕೊಂಡರು: ಭೀಮಸೇನ ಕಲಕೇರಿ

ಕೊಪ್ಪಳ : ಬಲ್ಡೋಟ ಇತರೆ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ, ಬಸಾಪುರ ಕೆರೆ ಎಂಎಸ್ಪಿಎಲ್ ಅತಿಕ್ರಮಣದಿಂದ ಮುಕ್ತಗೊಳಿಸಲು, 20 ಕಾರ್ಖಾನೆ ದೂಳು ಬಾಧಿತ ಹಳ್ಳಿಗಳ ಪರಿಸರ ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ 6ನೇ ದಿನದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಕರ್ನಾಟಕ ರಾಜ್ಯ ರೈತ ಸಂಘ (ಬಡಗಲಪುರ ನಾಗೇಂದ್ರ ಬಣ) ಜಿಲ್ಲಾ ಘಟಕದಿಂದ ಯಶಸ್ವಿಗೊಳಿಸಿದರು.

 

ಜಿಲ್ಲಾಧ್ಯಕ್ಷ  ಭೀಮಸೇನ ಕಲಕೇರಿ ಇವರು ಜನರ ಅಭಿವೃದ್ಧಿ ಮಾಡುತ್ತೇವೆ ಎಂದು ತುಂಗಭದ್ರಾ ತಟದ ಭೂಮಿಯನ್ನು ಕೆ. ಐ. ಎ. ಡಿ. ಬಿ. ಎನ್ನುವ ಸರ್ಕಾರದ  ಗೂಂಡಾ ಏಜೆನ್ಸಿಯಿಂದ ಭೂಮಿ ಕಿತ್ತುಕೊಂಡರು. ನಮ್ಮ 25ಕ್ಕೂ ಹೆಚ್ಚು ಹಳ್ಳಿಗಳ ಜನರ ಸಂಪೂರ್ಣ ಆರೋಗ್ಯ, ಪರಿಸರ ಹಾಳು ಮಾಡಿದ್ದಾರೆ. ಈಗ ಇವರನ್ನು ಓಡಿಸುವ ಅವಕಾಶ ಒದಗಿ ಬಂದಿದೆ. ಆ ನೇತೃತ್ವದ ಜವಾಬ್ದಾರಿ ರಾಜ್ಯ ರೈತ ಸಂಘ ವಹಿಸುತ್ತದೆ. ಸಚಿವ ಎಂಬಿ. ಪಾಟೀಲ್ ಕಿರ್ಲೋಸ್ಕರ ವಿಸ್ತರಣೆಯಾಗುತ್ತದೆ ಎಂದು ಪುಣೆ ಬೀದಿಯಲ್ಲಿ ನಿಂತು ಕೂಗಿರುವುದನ್ನು ನಾವು ಖಂಡಿಸುತ್ತೇವೆ ಎಂದರು. ಕಾರ್ಯಾಧ್ಯಕ್ಷ ಕನಕಪ್ಪ ಪೂಜಾರ ಇಲ್ಲಿ ಸ್ಥಾಪಿಸಿದ ಯಾವುದೇ ಕಾರ್ಖಾನೆಗಳಲ್ಲಿ ಸ್ಥಳಿಯರಿಗೆ ಉದ್ಯೋಗ ಕೊಟ್ಟಿಲ್ಲ. ಇವರು ಉದ್ಯೋಗ ಕೊಡುತ್ತೇವೆ ಎನ್ನುವುದು ಕೇವಲ ಭ್ರಮೆ ಎಂದರು.



ಯಂಕಪ್ಪ ಕಬ್ಬೇರ ಕಾಸನಕಂಡಿ, ಸುಡುಗಾಡಪ್ಪ ಕಾಸನಕಂಡಿ, ಶರಣಪ್ಪ ಕುಂಬಾರ, ನಾಗಪ್ಪ ಗೋಡೆಕಾರ. ಯಲ್ಲಪ್ಪ ಸಿದ್ದರು, ಶೇಖಪ್ಪ ಮೈನಳ್ಳಿ, ಅಮರೇಶ ಕರಡಿ ಕುಕನಪಳ್ಳಿ, ಸತ್ಯಾಗ್ರಹಕ್ಕೆ ಬೆಂಬಲಿಸಿ ಮಾತನಾಡಿದರು. ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್..ಪೂಜಾರ, ಕೆ.ಬಿ. ಗೋನಾಳ, ಶರಣು ಗಡ್ಡಿ,, ಮಂಜುನಾಥ ಗೊಂಡಬಾಳ, ಮಹಾದೇವಪ್ಪ ಎಸ್. ಮಾವಿನಮಡು, ಚನ್ನವೀರಯ್ಯ ಹಿರೇಮಠ ಕುಣಿಕೆರಿ,  ಮಖಬೂಲ್ ರಾಯಚೂರು, ಕೆ. ಶಶಿಕಲಾ, ಸುಂಕಮ್ಮ, ಡಿ.ಎಂ.ಬಡಿಗೇರ,, ಮಖಬೂಲ್ ರಾಯಚೂರು, ಬಸವರಾಜ ನರೇಗಲ್, ಹುಸೇನಪ್ಪ ಮೆಣೆದಾಳ, ನಿಂಗಪ್ಪ ಇಂದರಗಿ, ಶರಣಬಸಪ್ಪ ದಾನಕೈ, ಯಲ್ಲಪ್ಪ ಸಿದ್ದರು, ಯಮನೂರಪ್ಪ ಹಾಲಳ್ಳಿ ಬಸಾಪುರ, ಯಮನೂರಪ್ಪ ಮಾಲಿಪಾಟೀಲ್, ಸುರೇಶ ಹುರಳಿ, ಮಾಂತೇಶ ಮಡಿವಾಳ, ಹನುಮಪ್ಪ ಕದ್ರಳ್ಳಿ, ಶಿವಪ್ಪ ಹಡಪದ, ನಾಗರಾಜ ಯಲಿಗಾರ,, ಬಸವರಾಜ ಹೂಗಾರ, ಮಲ್ಲಪ್ಪ ಕುಣಿಕೆರಿ, ನಿಂಗನಗೌಡ ಗ್ಯಾರಂಟಿ, ಬಸನಗೌಡ ಯಲಮಗೇರಿ ಇದ್ದರು

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ