LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಂ.5 ಡಿಸ್ಟ್ರಿಬ್ಯೂಟರ್ ಉಪ ಕಾಲುವೆ ದುರಸ್ತಿಗೆ ರೈತರ ಆಗ್ರಹ

ಕೊಪ್ಪಳ: ಜಿಲ್ಲೆಯ ಅಗಳಕೇರಿ ಮತ್ತು ಹಿಟ್ನಾಳ ಸೀಮೆಯಲ್ಲಿ ಹಾದು ಹೋಗುವ ತುಂಗಭದ್ರಾ ಎಡದಂಡೆ ನಾಲೆಯ 5ನೇ ವಿತರಣಾ ಕಾಲುವೆಯ 1ನೇ ಪಿ.ಓ. ಕಾಲುವೆ ತ್ಯಾಜ್ಯದಿಂದ ತುಂಬಿಕೊಂಡಿದ್ದು ದುರಸ್ತಿಗೊಳಿಸುವಂತೆ ಕೃಷಿಕರು ತುಂಗಭದ್ರಾ ಜಲಮಂಡಳಿಗೆ ಮನವಿ ಮಾಡಿದ್ದಾರೆ.

ನಾಲೆಯ 5ನೇ ವಿತರಣಾ ಕಾಲುವೆಯಿಂದ ಕೋಳೂರಮ್ಮ ದೇವಿಯ ದೇವಾಲಯ ಹಿಂಭಾಗ ಮತ್ತು ಅಗಳಕೇರಿ ಹಳ್ಳದವರೆಗೆ ಹಾದು ಹೋಗಿರುವ ಉಪ ಕಾಲುವೆ ನೀರು ಪಕ್ಕದ ರೈತರ ಜಮೀನಿನಲ್ಲಿ ಊಟಿಯ ಸ್ವರೂಪದಲ್ಲಿ ಗೋಚರಿಸಿದೆ. ಸುಮಾರು ಅರ್ಧ ಕಿ.ಮೀ. ಉದ್ದದ ಉಪ ಕಾಲುವೆಯ ತುಂಬ ತ್ಯಾಜ್ಯದ ಗಿಡಗಳು ಬೆಳೆದು ನಿಂತಿವೆ. ಸಾಲದ್ದಕ್ಕೆ ಈ ಉಪ ಕಾಲುವೆಗೆ ವ್ಯರ್ಥವಾದ ಹಾಸಿಗೆ, ಬಟ್ಟೆಗಳನ್ನು ಬಿಸಾಡುವುದರಿಂದ ನೀರು ಜಮೆಗೊಂಡು ಮುಂದಕ್ಕೆ ಹರಿಯದಂತಾಗಿದೆ.



ಇದರಿಂದ ಕಾಲುವೆಯ ಕೆಳಭಾಗದ ರೈತರ ಜಮೀನಿನಲ್ಲಿ ನೀರು ಊಟಿ ಉಲ್ಬಣಿಸಿ, ವರ್ಷಪೂರ್ತಿ ನೀರು ಗದ್ದೆಯಲ್ಲಿ ಸಂಗ್ರಹಗೊಳ್ಳುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭತ್ತ ನಾಟಿ ಮಾಡುವ ರೈತರ ಕೃಷಿ ಚಟುವಟಿಕೆಗಳಿಗೆ ಸಮಸ್ಯೆ ಉಲ್ಬಣಿಸಿದೆ. ತುಂಗಭದ್ರಾ ಜಲ ಮಂಡಳಿ ಅಧಿಕಾರಿಗಳು ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ಸಿಮೆಂಟ್ ಕಾಂಕ್ರೀಟ್ ಕಾಲುವೆ ನಿರ್ಮಿಸಿ ರೈತರಿಗೆ ನೆರವಾಗಬೇಕು. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆ ಹಿಡಿಯಬೇಕೆಂದು ಕೋಳೂರಮ್ಮ ಗುಡಿ ವ್ಯಾಪ್ತಿಯ ರೈತರು `ಕಾಡಾ' ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. 
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST