ಸಂಡೂರು : ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ಹೋಬಳಿಯ ಮೆಟ್ರಿಕಿ ಗ್ರಾಮ ಪಂಚಾಯತಿಯ ಎಂ ಬಸಾಪುರ, ಮತ್ತು ವಡ್ಡು ಬಸಾಪುರ ಗ್ರಾಮಗಳಲ್ಲಿ ಕೃಷಿ ವಿಜ್ಞಾನ ಕೇಂದ್ರ ಹಗರಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಂಪ್ಲಿ, ಕೃಷಿ ನಿರ್ದೇಶನಾಲಯ ಬಳ್ಳಾರಿ, ಕೃಷಿ ಇಲಾಖೆ ಸಂಡೂರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ , ಡೇ- ಎನ್.ಆರ್.ಎಲ್.ಎಂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಇವರ ಸಂಯುಕ್ತಾಶ್ರಯದಲ್ಲಿ 2025-26 ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಎಣ್ಣೆಕಾಳು ಯೋಜನೆಯ ಕುರಿತು ಮತ್ತು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಂಜುನಾಥ್ ಉಪ ಕೃಷಿ ನಿರ್ದೇಶಕರು ಬಳ್ಳಾರಿ, ದಯಾನಂದ್. ಎಂ ಸಹಾಯಕ ಕೃಷಿ ನಿರ್ದೇಶಕರು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಂಪ್ಲಿ, ಆಡಿ ಪಾಲಯ್ಯ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ಬಳ್ಳಾರಿ, ಆಡಿ, ರವಿ. ಎಸ್. ವಿಜ್ಞಾನಿಗಳು ಕೃಷಿಜ್ಞಾನ ಕೇಂದ್ರ ಹಗರಿ, ಆಡಿ ಖಾಲಿಬಾವಿ ಮುಖ್ಯಸ್ಥರು ಕೃಷಿ ವಿಸ್ತರಣಾ ಕೇಂದ್ರ ಹೂವಿನ ಹಡಗಲಿ, ಶ್ರೀಮತಿ ನಡಫ್ ಸಹಾಯಕ ನಿರ್ದೇಶಕರು ಬಳ್ಳಾರಿ ರೈತ ಮಹಿಳೆ. ಶ್ರೀಮತಿ ವಿದ್ಯಾವತಿ ಸಹಾಯಕ ನಿರ್ದೇಶಕರು ರೈತ ಮಹಿಳೆ ಕಂಪ್ಲಿ, ಸೋಮಶೇಖರ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಓಖಐಒ ಸಂಡೂರ್ ರವಿಚಂದ್ರ ವ್ಯವಸ್ಥಾಪಕರು ಕೃಷಿ ಜೀವನೋಪಾಯ, ಧನಂಜಯ್ ಆತ್ಮ ಯೋಜನೆ ಕೃಷಿ ಇಲಾಖೆ ಸಂಡೂರು,
ಮಂಜುನಾಥ್ ಎಸ್.ಎನ್ ಉಪ ಕೃಷಿ ನಿರ್ದೇಶಕರು ಬಳ್ಳಾರಿ, ಇವರು ಮಾತಾಡಿ 2025-26 ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಎಣ್ಣೆಕಾಳು ಯೋಜನೆಯ ಕುರಿತು ಸಂಡೂರು ತಾಲೂಕಿನ ತೋರಣಗಲ್ ಹೋಬಳಿಯ ಎಂ ಬಸಾಪುರ ಮತ್ತು ಎಸ್ ಬಸಾಪುರದಲ್ಲಿ ರೈತರಿಗೆ ಶೇಂಗಾ ಬೆಳೆಯಲ್ಲಿ ಅಧಿಕ ಇಳುವರಿ ಬರಲು ಕೈಗೊಳ್ಳಬೇಕಾದ ಕ್ರಮಗಳು, ಕೀಟಭಾದೆ ತಡೆಗಟ್ಟುವಿಕೆ, ಶೇಂಗಾ ಬೀಜಗಳ ಆಯ್ಕೆ, ಗೊಬ್ಬರ ಕೀಟನಾಶಕ ಸಿಂಪಡಣೆ, ಶೇಂಗಾ ಬೆಳೆಯಲ್ಲಿ ಅಧಿಕ ಇಳುವರಿ ಬರಲು ಕೈಗೊಳ್ಳಬೇಕಾದ ಕ್ರಮಗಳು ಬಗ್ಗೆ ರೈತರಿಗೆ ತಿಳಿಸಿದರು.
ದಯಾನಂದ್. ಎಂ ಸಹಾಯಕ ಕೃಷಿ ನಿರ್ದೇಶಕರು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕಂಪ್ಲಿ, ಇವರು ಮಾತಾಡಿ ಮಣ್ಣು ಪರೀಕ್ಷೆಯ ಬಗ್ಗೆ ಪಿ ಎಮ್ ಕಿಸಾನ್ ಯೋಜನೆ ಮತ್ತು ಕೃಷಿ ಇಲಾಖೆಯಿಂದ ದೊರಕುವ ಎಲ್ಲಾ ಸೌಲಭ್ಯಗಳು ಸಮಗ್ರವಾದ ಮಾಹಿತಿಯನ್ನು ಪ್ರತ್ಯಕ್ಷವಾಗಿ ರೈತರ ತೋಟಗಳಲ್ಲಿ ಮಾಹಿತಿಯನ್ನು ಎಲ್ಲಾ ಮಾನ್ಯರು ರೈತರಿಗೆ ತಿಳಿಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಒಃಏ ಗಳಾದ ಶಿಲ್ಪಾ ಮತ್ತು ಉಷಾ ಅರ್ಜುನ್, , LCRPs ಗಳು ಕೃಷಿ ಮತ್ತು ಪಶು ಸಖಿಗಳು ಹಾಗೂ ಮಹಿಳಾ ರೈತರು ಮತ್ತು ರೈತ ಬಾಂಧವರು ಭಾಗವಹಿಸಿದ್ದರು.