ಈ ವೇಳೆ ಮಾತನಾಟಡಿದ ನಾಯಕನಹಟ್ಟಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದಿಯಪ್ಪ, ಇತಂಹ ಶಿಬಿರಗಳ ಹಮ್ಮಿಕೊಂಡಿರುವುದರಿಂದ ಪಟ್ಟಣದ ಸುತ್ತಮುತ್ತ ಇರುವ ಕಡುಬಡವರಿಗೆ ಅನುಕೂಲವಾಗುತ್ತದೆ, ಮನುಷ್ಯನಿಗೆ ಹೊರ ಜಗತ್ತನ್ನು ನೋಡುವುದಕ್ಕೆ ಆನಂದಿಸಬೇಕಾದರೆ ಕಣ್ಣು ತುಂಬಾ ಮುಖ್ಯ ಕಣ್ಣು ಇಲ್ಲಂದರೆ ಜೀವನ ಕತ್ತಲು ಇದ್ದಂತೆ ಏನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾರು ಜೋಪಾನವಾಗಿ ನಿಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಬೇಕು. ಯಾವುದೇ ಒತ್ತಡ ತೆಗೆದುಕೊಳ್ಳಬೇಡಿ, ಆರೋಗ್ಯ ರಕ್ಷಣೆಯ ಜೊತೆಗೆ ಮನುಷ್ಯನಿಗೆ ಕಣ್ಣಿನ ದೃಷ್ಠಿ ತುಂಬಾ ಅವಶ್ಯಕತೆ ಇರುವುದರಿಂದ ನಾವು ಕಾಪಾಡಿಕೊಳ್ಳಬೇಕು ಎಂದರು.

ಬಡಜನರಿಗೆ ಉಚಿತವಾಗಿ ಕಣ್ಣಿನ ಶಿಬಿರ ತಪಾಸಣೆ ಹಮ್ಮಿಕೊಂಡಿದ್ದು , ಮದರ್ ತರೇಸಾ ಗ್ರಾಮೀಣ ಸಂಸ್ಥೆ ಇನ್ನೂ ಇಂತಹ ಹಲವಾರು ಆರೋಗ್ಯ ಕಾರ್ಯಕ್ರಮಗಳು ಮಾಡಲಿ ಹಾಗೇ ಶಿವಮೂಗ್ಗ ಶಂಕರ ಕಣ್ಣಿನ ಆಸ್ಪತ್ರೆ ರಾಜ್ಯಾಂದತ್ಯ ಬಡವರಿಗೆ ಕಣ್ಣಿನ ಶಿಬಿರಗಳಿಂದ ದಾರಿದೀಪವಾಗಿದೆ ಎಂದು ನಾಯಕನಹಟ್ಟಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದಿಯಪ್ಪ ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಸುನೀತಾ ಮುದಿಯಪ್ಪ, ತಾಲ್ಲೂಕು ಕರವೇ ಅಧ್ಯಕ್ಷ ಮುತ್ತಯ್ಯ, ಮದರ್ ತೆರೇಸಾ ಸಂಸ್ಥೆ ಸಂಸ್ಥಾಪಕ ಶಿವಮೂರ್ತಿ ಬಿ, ತಾಲ್ಲೂಕು ನಗರ ಘಟಕ ಅಧ್ಯಕ್ಷ ಸೋಮಣ್ಣ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಹೋಬಳಿ ಅಧ್ಯಕ್ಷ ಕೆ.ಜಿ.ಮಂಜುನಾಥ, ಕರವೇ ಕನ್ನಡ ಸೇನೆ ಮಹಿಳಾ ಹೋಬಳಿ ಅಧ್ಯಕ್ಷೆ ತಿಪ್ಪಮ್ಮ ಚಿನ್ನಮಲ್ಲಯ್ಯ, ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಮಂಜುನಾಥ, ನಗರ ಘಟಕದ ಅಧ್ಯಕ್ಷ ಓ.ತಿಪ್ಪೇಸ್ವಾಮಿ, ಪ್ರೇಮ್‌ಕುಮಾರ್ , ಪ್ರಸನ್ನ ಕುಮಾರ್, ಅರುಣ್‌ಕುಮಾರ್, ಶಂಕರ್ ಆಸ್ಪತ್ರೆ ಸಿಬ್ಬಂದಿ ತ್ಯಾಗರಾಜ, ಶಿವಪ್ರಸಾದ್, ಮದರ್ ತೆರೇಸಾ ಸಿಬ್ಬಂದಿ ಉದಯಕಿರಣ್, ಮಮತ, ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ಆ್ಯಂಬುಲೆನ್ಸ್ ನೌಕರರ ಸಂಘದ ಅಧ್ಯಕ್ಷ ಚಿನ್ನಮಲ್ಲಯ್ಯ ಓ.ಎಂ ಹಾಗೂ ಇನ್ನೂ ಇತರರು ಇದ್ದರು.