ಇಲ್ಲಿನ ಸತ್ಯನಾರಾಯಣ ಪೇಟೆ 1ನೇ ಕ್ರಾಸ್ ನಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಶ್ರೀಮಠಕ್ಕೆ ದಯ ಮಾಡಿಸಿದ ಶ್ರೀಗಳು ಶುಕ್ರವಾರ ಬೆಳಿಗ್ಗೆ ತಮ್ಮ ನೇತೃತ್ವದಲ್ಲಿ ಚಾತುರ್ಮಾಸ್ಯ ಹಿನ್ನೆಲೆ ಲೋಕಕಲ್ಯಾಣಾರ್ಥ ಶ್ರೀ ಸುದರ್ಶನ ಹೋಮ, ಭಕ್ತರಿಗೆ ತಪ್ತ ಮುದ್ರಧಾರಣೆ, ಸಂಸ್ಥಾನ ಪೂಜೆ, ಶ್ರೀ ಗುರುರಾಯರಿಗೆ ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ, ಮಹಾನೈವೇದ್ಯ ಸೇರಿದಂತೆ ವಿವಿಧ ಪೂಜೆಗಳನ್ನು ವಿಜೃಂಭಣೆಯಿAದ ನೆರವೇರಿಸಿದ ಬಳಿಕ ಭಕ್ತರನ್ನುದ್ದೇಶಿಸಿ ಅವರು ಪ್ರವಚನ ನೀಡಿದರು.

ನಮ್ಮ ಸಂಸ್ಕೃತಿ, ಪದ್ಧತಿಗಳನ್ನು ನಾವು ಪಾಲಿಸಬೇಕು, ನಾವು ನಮ್ಮ ಧರ್ಮವನ್ನು ಪಾಲಿಸಿದರೆ, ಧರ್ಮ ನಮ್ಮ ರಕ್ಷಿಸಲಿದೆ. ಶ್ರಾದ್ಧ ಕರ್ಮಾದಿ ಮಾಡಲು ಆರ್ಥಿಕವಾಗಿ ನಮ್ಮವರು ಸಮಸ್ಯೆ ಎದುರಿಸುತ್ತಿದ್ದರೆ, ಅಂತವರು ನಮ್ಮ ಮಠಕ್ಕೆ ಬಂದು ಉಚಿತವಾಗಿ ಮಾಡಿಕೊಳ್ಳುವ ವ್ಯವಸ್ಥೆಯಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಶ್ರೀರಾಘವೇಂದ್ರ ಸ್ವಾಮಿಗಳವರ ಮಠ ಭಕ್ತರ ಮಠವಾಗಿದೆ ಎಂದರು.
ಶ್ರೀಗಳ ಸಂಸ್ಥಾನ ಪೂಜೆ ವೀಕ್ಷಣೆಗೆ ಆಗಮಿಸಿದ ಸಾವಿರಾರು ಭಕ್ತರಿಗೆ ಅನುಕೂಲವಾಗುವಂತೆ ಎಲ್ ಇಡಿ ಪರದೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ನೆರೆದ ಭಕ್ತರು ಪೂಜೆ, ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿ ಕಣ್ತುಂಬಿಕೊAಡು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಶ್ರೀಮಠದ ಆಡಳಿತಾಧಿಕಾರಿ ಪಂ.ಪ್ರಸನ್ನಾಚಾರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ನಂತರ ಎಲ್ಲ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಮುಖಂಡರು, ಗಣ್ಯರು, ಶ್ರೀಮಠದ ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು.