LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಪ್ರತಿಯೊಬ್ಬರಲ್ಲೂ ಆರೋಗ್ಯಕ್ಕೆ ಆದ್ಯತೆ ಹೆಚ್ಚಲಿ : ಡಾ. ಬಿ.ಕೆ. ಸುಂದರ್

ಬಳ್ಳಾರಿ:  ಪ್ರತಿಯೊಬ್ಬರೂ ಆರೋಗ್ಯ ಸಂರಕ್ಷಣೆಗಾಗಿ ಆದ್ಯತೆ ನೀಡಬೇಕಾದ ಅನಿವಾರ್ಯತೆ ಬಂದಿದೆ ಎಂದು ಡಾ. ಬಿ.ಕೆ. ಸುಂದರ್ ಅವರು ತಿಳಿಸಿದ್ದಾರೆ‌.

 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸದಸ್ಯರುಗಳಿಗೆ 'ಆರೋಗ್ಯ ಮಹತ್ವ' ಕುರಿತುಅವರು ಮಂಗಳವಾರ ಮಾತನಾಡಿ, ಪ್ರತಿಯೊಬ್ಬರೂ ದೈಹಿಕ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಆರೋಗ್ಯವಂತರಾಗಲು ತಿಳಿಸಿದರು.

 

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮಯ - ಹಣ ಮತ್ತು ಜ್ಞಾನವನ್ನು ವಿನಿಯೋಗ ಮಾಡಲಾಗುತ್ತಿದೆ. ಆರೋಗ್ಯದ ಕಡೆ ಪ್ರತಿಯೊಬ್ಬರೂ ಗಮನ ನೀಡುತ್ತಿದ್ದಾರೆ ಎಂದರು.

news_1782840151_1_936.webp

 

ಆರೋಗ್ಯ ಸುಧಾರಣೆಗಾಗಿ ಪ್ರೇರಣೆ ನೀಡುವ ವ್ಯವಸ್ಥೆ ನಿರ್ಮಾಣವಾಗಿದೆ. ಆಹಾರ ಪದ್ಧತಿಯೂ ಬದಲಾಗಿದೆ. ಆದರೆ, ಆರೋಗ್ಯ ಸುಧಾರಣೆಯಲ್ಲಿ ನಿರಂತರತೆಯ ಅಗತ್ಯವಿದೆ ಎಂದರು.

 

ಒತ್ತಡ, ಜೀವನಶೈಲಿ, ಆಹಾರ, ಇನ್ನಿತರೆಗಳ ಕಾರಣ 'ಒಬೆಸಿಟಿ' - ಹೃದ್ರೋಗ ; ಡಯಾಬಿಟಿಸ್ ಹೀಗೇ ಆರೋಗ್ಯ ಸಮಸ್ಯೆಗಳು ಅನೇಕರನ್ನು ಸಹಜವಾಗಿಯೇ ಕಾಡುತ್ತಿವೆ. ದಿನಗಳಲ್ಲಿ ಆರೋಗ್ಯ ಸುಧಾರಣೆಗೆ ದೈಹಿಕ ಶ್ರಮ ಅಗತ್ಯ ಎಂದರು.

 

 

ಬಳ್ಳಾರಿಸೈಕ್ಲಿಸ್ಟ್ ಅಂಡ್ ರನ್ನರ್ಸ್  ಫೌಂಡೇಶನ್ ಆಗಸ್ಟ್ ‍2 ಭಾನುವಾರ ಏರ್ಪಡಿಸಿರುವ 'ಸ್ಟೀಲ್ಸಿಟಿ ರನ್'' ನಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದರು.

 

ಅಲ್ಲದೇ, ಡಾ.ಬಿ.ಕೆ‌. ಸುಂದರ್ ಅವರು, ಸಿಪಿಆರ್ ನಲ್ಲಿ ಲುಕ್,‌ ಲಿಸನ್  ಅಂಡ್ ಫೀಲ್ ಮಾಡಬೇಕು. ಎದೆಯ ಮಧ್ಯಭಾಗದಲ್ಲಿ ಎದೆಯನ್ನು ಒತ್ತುವ ಕುರಿತು ಜಾಗೃತಿ ಮೂಡಿಸಿದರು.

news_1782840151_0_213.webp

 

ಬಳ್ಳಾರಿಸೈಕ್ಲಿಸ್ಟ್ ಅಂಡ್ ರನ್ನರ್ಸ್  ಫೌಂಡೇಶನ್ ಡಾ. ರವಿಶಂಕರ್ ಸಜ್ಜಲ್ ಅವರು, ದೈಹಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಪ್ರತಿಯೊಬ್ಬರೂ ಆರೋಗ್ಯ ಸುಧಾರಣೆ ಮಾಡಿಕೊಳ್ಳಬೇಕು ಎಂದರು.

 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಹಾಗೂ ಗೌರವ ಕಾರ್ಯದರ್ಶಿಗಳಾದ ಕೆ. ಸಿ. ಸುರೇಶಬಾಬು ಅವರು‌‌ ಡಾ. ಬಿ.ಕೆ. ಸುಂದರ್ ಅವರನ್ನು ಗೌರವಿಸಿದರು.

 

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಹಾಗೂ ವಿ. ರಾಮಚಂದ್ರ, ಖಜಾಂಚಿಗಳಾದ ಸಿ.ಎಸ್. ಸತ್ಯನಾರಾಯಣ,

 

ಬಳ್ಳಾರಿಸೈಕ್ಲಿಸ್ಟ್ ಅಂಡ್ ರನ್ನರ್ಸ್  ಫೌಂಡೇಶನ್ ಪ್ರಶಾಂತ ಶಾರಡ, ಸಂದೀಪ್ ಶರ್ಮ, .ಕೆ. ವೆಂಕಟೇಶ್ ಹಾಗೂ‌‌ ವಿವಿಧಕಮಿಟಿಗಳ ಚೇರ್ಮೆನ್ ಗಳು,‌‌‌ ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ