ಪಟ್ಟಣದಲ್ಲಿ ನಡೆದ ರಸ್ತೆ ಸುರಕ್ಷತ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಬೈಕ್ ಸವಾರರಿಗೆ ಜಾಗೃತಿ ಮೂಡಿಸಿದರು. ಹೆಲ್ಮೆಟ್ ಧರಿಸದೆ ಇರುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತದೆ. ನಿಮ್ಮನ್ನು ನಂಬಿ ನಿಮ್ಮ ಕುಟುಂಬ ಇರುತ್ತದೆ. ಅಪಘಾತವಾದರೆ ಮೊದಲು ತಲೆಗೆ ಏಟು ಬೀಳುತ್ತದೆ. ತಲೆಯನ್ನು ರಕ್ಷಣೆ ಮಾಡಿಕೊಳ್ಳಲು ಗುಣ ಮಟ್ಟದ ಹೆಲ್ಮೆಟ್ ಧರಿಸುವುದು ಕಡ್ಡಾಯ. ಹೆಲ್ಮೆಟ್ ಧರಿಸುವುದರಿಂದ ಅಪಘಾತಗಳಲ್ಲಿ ತಲೆಗೆ ಬಿದ್ದು ಗಾಯಗಳಾಗುವುದನ್ನು ತಡೆಯುತ್ತದೆ. ನಿಮ್ಮನ್ನು ನಂಬಿ ಕುಟುಂಬ ಬದುಕುತ್ತದೆ. ಜೀವನ ಕಳೆದುಕೊಳ್ಳಬೇಡಿ ಜೀವ ಮರಳಿ ಬಾರದು, ಸ್ವಲ್ಪ ಯೋಚಿಸಿ ಎಂದು ಬೈಕ್ ಸವಾರರಿಗೆ ವಿನಂತಿಸಿದರು. ಚಿಕ್ಕ ವಯಸ್ಸಿನವರು ವಾಹನ ಚಾಲನೆ ಮಾಡಿದರೆ ವಾಹನ ಮಾಲೀಕರಿಗೆ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಪಘಾತವಾದರೆ ಯಾವುದೇ ರೀತಿಯ ವಿಮಾ ಸೌಲಭ್ಯ ದೊರೆಯುವುದಿಲ್ಲ. ಅಪಘಾತಕ್ಕೆ ಹಿಡಾದ ಮನುಷ್ಯ ಸಾವಿಗಿಡಾದರೆ, ಗಾಯಗೊಂಡರೆ ಮಾಲೀಕನೆ ಪರಿಹಾರ ಕಟ್ಟಬೇಕಾಗುತ್ತದೆ ಎಂದರು. ವಾಹನ ಸವಾರರು ಯಾವುದೇ ಕಾರಣಕ್ಕೂ ಮಧ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ತಿಳಿಸಿದರು.

ಅವಸರದಲ್ಲಿ ಹೆಲ್ಮೆಟ್ ಹಾಕಿಕೊಳ್ಳಲಿಲ್ಲ ಹಾಗೆ ಬಂದು ಬಿಟ್ಟೆ ಇತ್ತೀಚಿಗೆ ಅಪಘಾತಗಳು ಹೆಚ್ಚಾಗಿ ಬಹಳಷ್ಟು ಜನ ಸಾವು ಸಂಭವಿಸುತ್ತಿದೆ. ಆಗಾಗಿ ಯಾರು ಹೆಲ್ಮೆಟ್ ಧರಿಸದೆ ಬೈಕ್‌ನ್ನು ಹತ್ತಬಾರದು ಮನೆಯಲ್ಲಿ ನಮಗೋಸ್ಕರ ಕುಟುಂಬ ಕಾಯುತ್ತಿರುತ್ತದೆ. ಅಪಘಾತ ಸಂಭವಿಸಿ ಏನಾದರು ಅನಾಹುತವಾದರೆ ಯಾರು ಹೊಣೆ. ಹೆಲ್ಮೆಟ್ ಹಾಕಿಕೊಂಡರೆ ಜೀವಕ್ಕೆ ಹಾನಿಯಾಗುವುದಿಲ್ಲ. ಇನ್ನೂ ಮುಂದೆ ನಾನು ತಪ್ಪು ಮಾಡಲ್ಲ ಹೆಲ್ಮೆಟ್ ಹಾಕುತ್ತೇನೆ ಎನ್ನುತ್ತಾರೆ ನಾಯಕನಹಟ್ಟಿ ಅಂಬೇಡ್ಕರ್ ಕಾಲೋನಿ ರಮೇಶ್ ಟಿ.
ಈ ಸಂದರ್ಭದಲ್ಲಿ ಉಪಸ್ಥಿತರಾದ ಅಣ್ಣಪ್ಪನಾಯಕ, ರಾಘವೇಂದ್ರ, ಶಿವಣ್ಣ, ಬಾಷ, ವಿರೇಶ್, ರಮೇಶ್, ಹಾಲೇಶ್, ಮಹೇಶ್, ಅಜಯ್, ದೇವರಾಜ್‌ಕೋಟಿ, ಕುಮಾರ್, ಹಾಗೂ ಬೈಕ್ ಸವಾರರು, ಗ್ರಾಮಸ್ಥರು ಇದ್ದರು.