ಅವರು ಪಟ್ಟಣದ ಪ್ರಿಯದರ್ಶಿನಿ ಶಾಲಾ ಆವರಣದಲ್ಲಿ ಕೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹೊಸಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮರಿಯಮ್ಮನಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬ ಮಕ್ಕಳಲ್ಲಿ ವಿಭಿನ್ನವಾದ ಪ್ರತಿಭೆ ಅಡಕವಾಗಿರುತ್ತದೆ ಅದನ್ನು ಶಿಕ್ಷಕರು ಉತ್ತಮ ವೇದಿಕೆ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡುವಂತಾಗಲಿ ಪ್ರತಿ ಮಕ್ಕಳನ್ನು ಒಂದೇ ರೀತಿ ಕಾಣುವಂತಾಗ ಬೇಕು ಎಂದರು.

ನಂತರ ಕ್ಷೇತ್ರ ಸಮನ್ವಯಾಧಿಕಾರಿ ಶಿವಕುಮಾರ ಮಾತನಾಡಿ, ಪ್ರತಿಭೆ ಯಾರ ಸ್ವತ್ತಲ್ಲ,ಯಾರಲ್ಲಿ ಪ್ರತಿಭೆ ಇರುತ್ತೋ ಅವರು ಯಾವತ್ತೂ ಉನ್ನತ ಸ್ಥಾನ ಅಲಂಕರಿಸುತ್ತಾರೆ. ಆ ನಿಟ್ಟಿನಲ್ಲಿ ಶಿಕ್ಷಕರು ಸೂಕ್ಷ್ಮವಾಗಿ ಮಕ್ಕಳ ಪ್ರತಿಭೆ ಗುರುತಿಸಿ ವೇದಿಕೆ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು .
ಪಟ್ಟಣ ಪಂಚಾಯತಿ ಅಧ್ಯಕ್ಷ ಆದಿಮನಿ ಹುಸೇನ್ ಬಾಷ ಕಾರ್ಯವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಅಯ್ಯಪ್ಪ, ಶಿಕ್ಷಣ ಸಂಯೋಜಕ ಎಂ ರಾಜ, ಪ್ರಾಚಾರ್ಯರಾದ ಫಕೀರಪ್ಪ, ಎಂ ಅಶೋಕ, ಮುಖ್ಯಗುರುಗಳಾದ ಶಿವಕುಮಾರ, ಪ್ರವೀಣ, ಗುರುವಪ್ಪ, ಚಂದ್ರಶೇಖರ, ವೆಂಕಟೇಶ, ಶಿಕ್ಷಕಿಯರಾದ ಮಮತಾ, ಲಲಿತ, ಸಂಪನ್ಮೂಲ ವ್ಯಕ್ತಿ ಕರಿಬಸಪ್ಪ ಇದ್ದರು. ಉಪನ್ಯಾಸಕರಾದ ಪಿ ರಾಮಚಂದ್ರ ಮತ್ತು ಹನುಮಂತಪ್ಪ ನಿರ್ವಹಿಸಿದರು. ಮರಿಯಮ್ಮನಹಳ್ಳಿಯ ಪ್ರಾಥಮಿಕ ಶಾಲೆಗಳ ಮಕ್ಕಳು ವಿವಿಧ ವೇಷಗಳನ್ನು ಧರಿಸಿಕೊಂಡು ಬಂದು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.