LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಒಂದು ವರ್ಷದೊಳಗಿನ ಮಕ್ಕಳಿಗೆ ಲಸಿಕೆಗಳನ್ನು ತಪ್ಪದೆ ಹಾಕಿಸಿ

ರಾಯಚೂರು : ಮಕ್ಕಳ ಬಾಲ್ಯದಲ್ಲಿ ಮಾರಣಾಂತಿಕವಾಗುವ ಕಾಯಿಲೆಗಳನ್ನು ತಡೆಗಟ್ಟಲು ವಯಸ್ಸಿಗನುಸಾರ ಲಸಿಕೆಗಳನ್ನು ಹಾಕಿಸಲು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ವಿನಂತಿಸಿದರು.

ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿ ರಾಯಚೂರು ನಗರದ ಸಿಯಾತಲಾಬ್‌ ನಗರ ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯ ಮಡಿವಾಳ ಓಣಿಯ ವೀರಭದ್ರ ದೇವಸ್ಥಾನದಲ್ಲಿ ಮಕ್ಕಳಿಗೆ ಹಾಕುವ ಲಸಿಕೆಗಳ ಬಗ್ಗೆ ಪಾಲಕರಿಗೆ ಮಾಹಿತಿ ನೀಡುತ್ತಾ ನಮ್ಮ ವೈಯಕ್ತಿಕ ಕೆಲಸ ಕಾರ್ಯಗಳು ಇದ್ದರೂ ಸಹ ಹುಟ್ಟಿನಿಂದ 01 ವರ್ಷದೊಳಗೆ ತಪ್ಪದೆ ಲಸಿಕೆ ಹಾಕಿಸುವುದರಿಂದ ಮಗುವಿನ ಸುರಕ್ಷತೆಗೆ ಎಲ್ಲರೂ ಸೇರಿ ಆಧ್ಯತೆ ನೀಡಿದಂತಾಗುವುದು, ಅಲ್ಲದೆ ಗರ್ಭಿಣಿಯರಿಗೆ ಖಡ್ಡಾಯವಾಗಿ ಎರಡು ಸಾರಿ ಟಿಡಿ ಚುಚ್ಚುಮದ್ದು ಹಾಕಿಸಿ, ವೈದ್ಯರ ಸಲಹೆಯಂತೆ ನಿಯಮಿತವಾಗಿ ತಪಾಸಣೆ ಮಾಡಿಸಿ ಕಬ್ಬಿಣಾಂಶ ಮಾತ್ರೆಗಳನ್ನು ಸೇವಿಸಲು  ಕೋರಿದರು.



ಈ ಸಂದರ್ಭದಲ್ಲಿ ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌ ದಾಸಪ್ಪನವರ, ಮನೆ ಬೇಟಿ ಮಾಡಿ ಗಂಡಾಂತರ ಗರ್ಭಿಣಿಯರ ತೆಗೆದು ಕೊಳ್ಳಬೇಕಾದ ಕಾಳಜಿ ಬಗ್ಗೆ ತಿಳಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ರೇಣುಕಾ, ಆಶಾ ಕಾರ್ಯಕರ್ತೆ ಭಾಗ್ಯಮ್ಮ, ಸೇರಿದಂತೆ ತಾಯಂದಿರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST