ಅಧ್ಯಕ್ಷರಾಗಿ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ವೆಂಕಟೇಶ್ ಬಾಬು ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ದೇವರಾಜ್ ಅರಸ್ ಪ್ರಥಮ ದರ್ಜೆ ಕಾಲೇಜೀನ ಪ್ರೊ ದೇವೇಂದ್ರಪ್ಪ ಜಿ ಒ, ಖಜಾಂಚಿಯಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆಯ ಸಹ ಪ್ರಾಧ್ಯಾಪಕಿ ಪ್ರೊ ಸುನಿತಾ ಕೆ.ಬಿ., ಉಪಾಧ್ಯಕ್ಷರಾಗಿ ಹರಿಹರ ಸರ್ಕಾರಿ ಕಾಲೇಜಿನ ಪ್ರೊ ಬಾಬು ಕೆ. ಎ ಹಾಗೂ ಹಿರಿಯೂರಿನ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ ಅಣ್ಣಪ್ಪ ಡಿ ಅವರು ಆಯ್ಕೆಯಾಗಿದ್ದಾರೆ.
ಇವರುಗಳು ಮುಂದಿನ ಎರಡು ವರ್ಷಗಳ ಕಾಲ (2025–27) ವೇದಿಕೆಯನ್ನು ಮುನ್ನಡೆಸಲಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಡಾ. ವೆಂಕಟೇಶ್ ಬಾಬು ಅವರು, “ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಅಧ್ಯಾಪಕರನ್ನೂ ಹಾಗೂ ವಾಣಿಜ್ಯ ಶಾಸ್ತ್ರ ವಿಷಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯಗಳನ್ನು ಈ ವೇದಿಕೆಯ ಮೂಲಕ ಕೈಗೊಳ್ಳುವುದೇ ನಮ್ಮ ಮುಖ್ಯ ಗುರಿಯಾಗಿದೆ. ಉತ್ತಮ ಶೈಕ್ಷಣಿಕ ಚಟುವಟಿಕೆ ಹಾಗೂ ಗುಣಮಟ್ಟದ ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆ ಹೊಂದಿದ್ದೇವೆ” ಎಂದು ಹೇಳಿದರು.
ಈ ಮೂಲಕ ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಅಧ್ಯಾಪಕರ ವೇದಿಕೆಯು ನವ ಚೈತನ್ಯದೊಂದಿಗೆ ಮುಂದಿನ ಅಧ್ಯಾಯವನ್ನು ಆರಂಭಿಸಿದೆ.