LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಜೀವಿನಿ ಜೀವರಕ್ಷಕ ಟ್ರಸ್ಟ್ನ ಹೋಬಳಿ ಅಧ್ಯಕ್ಷರಾಗಿ ಆಯ್ಕೆ

ನಾಯಕನಹಟ್ಟಿ : ಸಂಜೀವಿನಿ ಜೀವರಕ್ಷಕ ಟ್ರಸ್ಟ್ನ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ  ಅಧ್ಯಕ್ಷರಾಗಿ ಮಧು ಈ  ತೊರೆಕೋಲಮ್ಮನಹಳ್ಳಿ ಆಯ್ಕೆಯಾಗಿದ್ದಾರೆ

ಸಂಜೀವಿನಿ ಜೀವರಕ್ಷಕ ಟ್ರಸ್ಟ್ ಚಿತ್ರದುರ್ಗದ ಸಮಾಜ ಸೇವಾ ಸಂಸ್ಥೆಯಾಗಿದ್ದು, ಚಿತ್ರದುರ್ಗ  ಜಿಲ್ಲೆಯ ಜನರ ಪ್ರೀತಿ ವಿಶ್ವಾಸಗಳಿಂದ ಇಂದು ಇಡೀ ರಾಜ್ಯದ್ಯಂತ ರಸ್ತೆ ಅಪಘಾತ ಜಾಗೃತಿಗೊಂದು ಅಭಿಯಾನ ಶೀರ್ಷಿಕೆ ಅಡಿಯಲ್ಲಿ ರಸ್ತೆ ಅಪಘಾತಕ್ಕೆ ಒಳಗಾದವರ ರಕ್ಷಣೆ ಹಾಗೂ ನೆರವು ನೀಡುವುದು ಹಾಗೂ ಅಪಘಾತ ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾಯಕವನ್ನು ಮಾಡುತ್ತಿದೆ.

ಈ ನಿಟ್ಟಿನಲ್ಲಿ ನಾಯಕನಹಟ್ಟಿ ಹೋಬಳಿಯ ಮಧು  ನಾಯಕನಹಟ್ಟಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ  ರಸ್ತೆ ಅಪಘಾತಗಳ ಸುರಕ್ಷಿತ ಬಗ್ಗೆ ಜಾಗೃತಿ  ಮೂಡಿಸಲಾಯಿತು. ಇದೇ ವೇಳೆ ಮಧು ಅವರ ಕೆಲಸವನ್ನು ಮೆಚ್ಚಿ ನಾಯಕನಹಟ್ಟಿ ಹೋಬಳಿಯ ಅಧ್ಯಕ್ಷರನ್ನಾಗಿ  ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ (ರಿ) ನಾ ರಾಜ್ಯಾಧ್ಯಕ್ಷರಾದ ಶ್ರೀ ರಂಗಸ್ವಾಮಿರವರು ಆಯ್ಕೆ ಮಾಡಿದ್ದಾರೆ.

ಡಾ.ಸೌಮ್ಯ ಮಂಜುನಾಥ ರಾಜ್ಯ ಪ್ರಧಾನ ಕಾರ್ಯದರ್ಶಿ ,  , ಪ್ರಸನ್ನ ಮಲ್ಲೂರಹಳ್ಳಿ ಅಧ್ಯಕ್ಷರು ವಿದ್ಯಾರ್ಥಿ ಘಟಕ  ಮತ್ತು ನವೀನ ಆರ್ ಓಬಯ್ಯನಹಟ್ಟಿ , ನವೀನ , ತಿಮೇಶ , ಬಸವರಾಜು ಹಾಗೂ ಸಮಸ್ತ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನಾ ಪದಾಧಿಕಾರಿಗಳು ಹಾಗೂ ಪತ್ರಕರ್ತ  ಟಿ. ಟಿ.ಹರೀಶ್  ಅಭಿನಂದನೆಗಳು ಸಲ್ಲಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST