ಅವರು ಪಟ್ಟಣ ಸಮೀಪದ ದೇವಲಾಪುರ ಗ್ರಾಮದಲ್ಲಿ ಮಂಗಳವಾರ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಸಂಸ್ಥೆ ಆಯೋಜಿಸಿದ್ದ 3 ತಿಂಗಳ ಕಾಲ ಉಚಿತ ಹೊಲಿಗೆ ಯಂತ್ರ ತರಬೇತಿ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಾತನಾಡಿದರು.

ಮಹಿಳೆ ಸ್ವಯಂ ಉದ್ಯೋಗ ಪಡೆದುಕೊಂಡಾಗ ಇಡೀ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ದೂರು ಮಾಡುವುದಕ್ಕೆ ಸಾಧ್ಯವಾಗುತ್ತದೆ.ಪ್ರತಿಯೊಬ್ಬ ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸಬಲೀಕರಣರದಾಗ ಮಾತ್ರ ದೇಶ ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ಪಿಎಸ್.ಐ ತಾರಾ ಬಾಯಿ ಉಚಿತ ಹೊಲಿಗೆ ಯಂತ್ರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ,ಕೌಶಲ್ಯ ಅಭಿವೃದ್ಧಿಗಳಿಂದ ಮಾತ್ರ ನಾವು ಸ್ವಯಂ ಉದ್ಯೋಗ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ನೀವು ಸರಿಯಾಗಿ ತರಬೇತಿ ಪಡೆದುಕೊಂಡು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿದಾಗ ನೀವು ಕಲಿತಿದ್ದು ಸಾರ್ಥಕವಾಗುತ್ತದೆ. ಮಹಿಳೆಯರು ಸ್ವಯಂ ಉದ್ಯೋಗ ಕಂಡುಕೊಂಡರೆ ಕುಟುಂಬದ ನಿರ್ವಹಣೆಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಡಣಾಯಕನಕೆರೆ ಗ್ರಾ.ಪಂ ಸದಸ್ಯ ನಾಗಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಣಾಯಕನಕೆರೆ ಗ್ರಾ.ಪಂ ಉಪಾಧ್ಯಕ್ಷೆ ನೇತ್ರಾ ಸೂರ್ಯಪ್ರಕಾಶ ವಹಿಸಿದ್ದರು.ಕಾರ್ಯಕ್ರಮ ಸ್ವಾಗತಿದ್ದು ಶೃತಿ ನಿರೂಪಣೆಯನ್ನ ಅಮೃತ ಮಾಡಿದರು.
ಈ ಸಂದರ್ಭದಲ್ಲಿ ಡಣಾಯಕನಕೆರೆ ಗ್ರಾ.ಪಂ ಪಿಡಿಒ ಜಿಲಾನ್ ಸಾಬ್, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಭೀಮರಾಜ, ಕಾರ್ಯದರ್ಶಿ ಉಷಾ ಯು.ಆರ್ ಗ್ರಾ.ಪಂ ಸದಸ್ಯ ಲಕ್ಷ್ಮೀದೇವಿ, ಗ್ರಾಮದ ಮುಖಂಡರಾದ ಯು ಶ್ಯಾವಪ್ಪ, ಅಶೋಕ, ರಾಘವೇಂದ್ರ ಯು, ಪರಶುರಾ, ಡಣಾಯಕನಕೆರೆ ಬಿಜೆಪಿ ಮುಖಂಡ ನಾಗರಾಜ, ತಳವಾರ ಹನುಮಂತಪ್ಪ ಸಿಬ್ಬಂದಿಗಳಾದ ಸುವರ್ಣಮ್ಮ, ಭಾಗ್ಯ ಯು ಹಾಗೂ ಶಿಬಿರಾರ್ಥಿಗಳಿದ್ದರು.
ಮಹಿಳೆಯರು ಯಾರ ಮೇಲೆ ಅವಲಂತರಾಗದೇ ಸ್ವಯಂ ಉದ್ಯೋಗಿಗಳಾದ್ರೆ ಕುಟುಂಬದ ನಿರ್ವಹಣೆ ಮಾಡಬಹುದು: ತಾರಾಬಾಯಿ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ಪಿಎಸ್.ಐ