LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕನಸು ಕಾಣಿರಿ, ಶ್ರಮ ಹೂಡಿ ಸಾಧನೆ ಮಾಡಿರಿ” – ಡಾ. ವೆಂಕಟೇಶ್ ಬಾಬು

ಬಸವಾಪಟ್ಟಣ : ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಹೊಸದಾಗಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಆಶ್ರಯದಲ್ಲಿ ಏರ್ಪಡಿಸಲಾಯಿತು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ ಮಂಜಣ್ಣ ಟಿ.  ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ವೇಂಕಟೇಶ್ ಬಾಬು, ಸಹ ಪ್ರಾಧ್ಯಾಪಕರು, ವಾಣಿಜ್ಯ ವಿಭಾಗ,  ಇವರು ಭಾಗವಹಿಸಿದ್ದರು

 

ಡಾ. ವೇಂಕಟೇಶ್ ಬಾಬು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, “ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಅಮೂಲ್ಯ ಹಂತ. ಇಲ್ಲಿ ಕಲಿಯುವ ಶಿಸ್ತು, ಪರಿಶ್ರಮ ಹಾಗೂ ಮೌಲ್ಯಗಳು ಭವಿಷ್ಯದ ದಾರಿಯನ್ನು ನಿರ್ಧರಿಸುತ್ತವೆ. ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯಪುಸ್ತಕದ ಜ್ಞಾನ ಸಾಕಾಗುವುದಿಲ್ಲ, ಅದರ ಜೊತೆಗೆ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಸಂವಹನ ಕೌಶಲಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ. ಸರ್ಕಾರ ನೀಡಿರುವ ವಿದ್ಯಾರ್ಥಿವೇತನ, ಇಂಟರ್ನ್‌ಶಿಪ್, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಬಳಸಿಕೊಂಡು ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು” ಎಂದು ಸಲಹೆ ನೀಡಿದರು.



ಅವರು ಮುಂದುವರೆದು, “ವಿದ್ಯಾರ್ಥಿಗಳು ಯಾವಾಗಲೂ ಕನಸು ಕಾಣಬೇಕು, ಆದರೆ ಆ ಕನಸುಗಳನ್ನು ನನಸು ಮಾಡಲು ಶ್ರಮವನ್ನೂ ಹೂಡಬೇಕು. ಕಾಲಹರಣದಿಂದ ದೂರವಿದ್ದು ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಉತ್ತಮ ಸಾಧನೆ ಸಾಧ್ಯ. ಸಮಾಜಕ್ಕೆ ಉಪಯುಕ್ತರಾದಾಗಲೇ ನಿಜವಾದ ಶಿಕ್ಷಣದ ಅರ್ಥ ಹೊರಹೊಮ್ಮುತ್ತದೆ” ಎಂದು ತಿಳಿಸಿದರು.

ಪ್ರಾಂಶುಪಾಲರಾದ ಪ್ರೊ ಮಂಜಣ್ಣ ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಒತ್ತು ನೀಡಬೇಕು. ಕಾಲೇಜಿನಲ್ಲಿ ದೊರೆಯುವ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಂಡರೆ ಜೀವನದಲ್ಲಿ ಯಶಸ್ವಿಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಮುಖ್ಯಸ್ಥರಾದ ಎಂ.ಡಿ. ರಾಘವೇಂದ್ರ,  ಪ್ರೊ  ಲೋಕೇಶ್  ಪ್ರೊ ಕರಿಬಸಪ್ಪ, ಪ್ರೊ ಯೋಗೇಂದ್ರ  ಪ್ರೊ ಬಸವರಾಜ್ ಉಪಸ್ಥಿತರಿದ್ದರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST