LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಡಾ. ವಾಸುದೇವ ಅವರಿಗೆ ಅಂತರರಾಷ್ಟ್ರೀಯ ‘ಎಕ್ಸಲೆನ್ಸ್ ಎಡಿಟರ್ ಅವಾರ್ಡ್’

ದಾವಣಗೆರೆ : ಪ್ರಾದೇಶಿಕ ಪತ್ರಿಕೋದ್ಯಮದ ಶ್ರೇಷ್ಠತೆಗೆ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ವಿಸ್ಮಯವಾಣಿ ಸಂಪಾದಕ ಡಾ. ವಾಸುದೇವ ಅವರಿಗೆ ಅಂತರರಾಷ್ಟ್ರೀಯಎಕ್ಸಲೆನ್ಸ್ ಎಡಿಟರ್ ಅವಾರ್ಡ್ಗೌರವ ದೊರೆತಿದೆ.


ತಮಿಳುನಾಡಿನ ಹೊಸೂರ ಟಿಜಿಐ ಗ್ರ್ಯಾಂಡ್ ಫ್ರಾಚೂನ್ ಹೋಟೆನಲ್ಲಿ ಅಮೇರಿಕನ್ ವಿಸಡಂ ಪೀಸ್ ಯೂನಿವರ್ಸಿಟಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.


ಪ್ರಭಾವಿ ತೀರ್ಪುಗಾರ ಮಂಡಳಿಯನ್ನು ಹೊಂದಿರುವ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ, ಪ್ರಾದೇಶಿಕ ಪತ್ರಿಕಾ ಕ್ಷೇತ್ರದಲ್ಲಿ ನೀಡಿದ ಅಸಾಧಾರಣ ಸೇವೆಯನ್ನು ಪರಿಗಣಿಸಿ ವರ್ಷದಎಕ್ಸಲೆನ್ಸ್ ಎಡಿಟರ್ ಅವಾರ್ಡ್ಅನ್ನು ಘೋಷಿಸಿದೆ.


ದಾವಣಗೆರೆ ಮೂಲದ ಪ್ರಾದೇಶಿಕ ಪತ್ರಕರ್ತ ಹಾಗೂ ವಿಸ್ಮಯವಾಣಿ ದಿನಪತ್ರಿಕೆಯ ಸಂಪಾದಕ ಡಾ. ವಾಸುದೇವ ದಾವಣಗೆರೆ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ದೊರೆತಿದೆ.  


ಇದು ಏಷ್ಯಾದ ಹಲವು ದೇಶಗಳಿಂದ ನಾಮನಿರ್ದೇಶನಗೊಂಡ ಸಂಪಾದಕರ ಪೈಕಿ ಆಯ್ಕೆಯಾಗುವ ಅಪರೂಪದ ಗೌರವವಾಗಿದ್ದು, ಕನ್ನಡ ಮಾಧ್ಯಮದ ವಿಶೇಷ ಸಾಧನೆಯಾಗಿ ಗುರುತಿಸಲಾಗಿದೆ.


ಸುಮಾರು ೨೮ ವರ್ಷಗಳ ಪತ್ರಿಕೋದ್ಯಮ ಪಯಣವನ್ನು ಹೊಂದಿರುವ ಡಾ. ವಾಸುದೇವವರು, ಪ್ರಾರಂಭದಲ್ಲಿ ವರದಿಗಾರರಾಗಿ ಕೆಲಸಮಾಡಿ, ಪ್ರಾದೇಶಿಕ ಮಟ್ಟದ ಅನೇಕ ಪತ್ರಿಕೆಗಳಲ್ಲಿ ತಾವು ರಚಿಸಿದ ನೈಜ ವರದಿಗಳ ಮೂಲಕ ಜನರನ್ನು, ಅಧಿಕಾರಿಗಳನ್ನು, ಮತ್ತು ನೀತಿ ರಚನೆಗಾರರನ್ನು ತಲುಪಿದರು.  


ಪ್ರಶಸ್ತಿ ಘೋಷಣೆಯ ನಂತರ ಮಾತನಾಡಿದ ಡಾ. ವಾಸುದೇವ ದಾವಣಗೆರೆ ಅವರು, ಗೌರವ ವಿಸ್ಮಯವಾಣಿ ನಂಬಿಕೊAಡಿರುವ ಲಕ್ಷಾಂತರ ಓದುಗರಿಗೂ, ನಮ್ಮ ವರದಿಗಾರರಿಗೂ, ಶ್ರಮಿಸುತ್ತಿರುವ ನಮ್ಮ ಪುಟ್ಟ ತಂಡಕ್ಕೂ ಸಿಗುವ ಮಾನ್ಯತೆ. ಪತ್ರಿಕೋದ್ಯಮ ನನ್ನ ಉದ್ಯೋಗವಲ್ಲಅದು ನನ್ನ ಜೀವನದ ಉದ್ದೇಶ ಎಂದರು

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ