ಬೆಂಗಳೂರು: ಬೆಂ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಬೆಳ್ಳಿ ಹಬ್ಬದ ಸಂಭ್ರಮವನ್ನು ಡಾ. ರಾಜಕುಮಾರ್ ರಂಗಭೂಮಿ ಚಲನಚಿತ್ರ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತೋಷ್ ಆನಂದ್ ರಾಮ್ ರಾಜಕುಮಾರ ಚಿತ್ರ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಕೆ.ಎಸ್. ರಾಜಣ್ಣ, ಸೂಪರ್ ಸ್ಟಾರ್ ರಜನಿಕಾಂತ್ ರವರ ಅಣ್ಣ ಸತ್ಯನಾರಾಯಣ ಗಾಯಕ್ವಾಡ್ ಸೇರಿದಂತೆ 25ಕ್ಕೂ ಹೆಚ್ಚು ಮಹನೀಯರಿಗೆ ಡಾ. ರಾಜಕುಮಾರ್ ಪುರಸ್ಕಾರ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಡಾ. ಸಿ ಸೋಮಶೇಖರ್, ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಷಣ್ಮುಗ ರಾಜ್ ಟ್ರಸ್ಟ್ ಅಧ್ಯಕ್ಷರಾದ ಕನ್ನಡ ರಾಜು, ನಟಿ ಅಶ್ವಿನಿ ಗೌಡ, ಕೆಂಡಸಂಪಿಗೆ ವಿಕ್ಕಿ, ನವಾಜ್, ಪ್ರೇಮ್ ಕುಮಾರ್, ಲಕ್ಷ್ಮೀಶ, ರವಿಶಂಕರ್ ಉಪಸ್ಥಿತರಿದ್ದರು.